• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆಲಂಗಾಣ: ಶಾಸಕರು, ನೌಕರರ ಅರ್ಧಕರ್ಧ ವೇತನಕ್ಕೆ ಬಿತ್ತು ಕತ್ತರಿ

|

ಹೈದರಾಬಾದ್, ಮಾರ್ಚ್ 31: ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಬೆನ್ನಲ್ಲೇ ತೆಲಂಗಾಣ ಸರ್ಕಾರ ಮಹತ್ವದ ಆದೇಶ ನೀಡಿದೆ.

ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರಿ ಕಡಿತ ಮಾಡುವುದಾಗಿ ತೆಲಂಗಾಣದ ಕೆ. ಚಂದ್ರಶೇಖರ್ ರಾವ್ ಸರ್ಕಾರ ಘೋಷಿಸಿದೆ.

ಇಡೀ ವಿಶ್ವವೇ ಕೊರೊನಾ ಭೀತಿ ಎದುರಿಸುತ್ತಿವೆ.ತೆಲಂಗಾಣಲ್ಲಿ ಒಂದೇ ದಿನ ಆರು ಮಂದಿ ಸಾವನ್ನಪ್ಪಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು

ಕೊರೊನಾ ಕರಿನೆರಳಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 12 ಸಾವಿರ ಕೋಟಿ ರೂ. ಖೋತಾ ಆಗಿದೆ. ಹೀಗಾಗಿ, ನೌಕರರ ವೇತನ ಕತ್ತರಿಗೆ ನಿರ್ಧರಿಸಿದ್ದಾರೆ.

ಇದರನ್ವಯ ಏಪ್ರಿಲ್ ತಿಂಗಳಲ್ಲಿ ಸಿಎಂ, ಸಚಿವರು, ಶಾಸಕರು, ಜನಪ್ರತಿನಿಧಿಗಳ ಶೇ.75 ರಷ್ಟು ವೇತನ, ಐಎಎಸ್ ಅಧಿಕಾರಿಗಳ ಶೇ.60, ಇತರೆ ನೌಕರರ ಶೇ.50 ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ.10 ರಷ್ಟು ವೇತನ ಕಡಿತಗೊಳಿಸುವುದಾಗಿ ಹೇಳಿದೆ. ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾಣವಾಗಲಿದೆ. ದೇಶದಲ್ಲಿ ಒಂದೇ ದಿನ 12 ಮಂದಿ ಮೃತಪಟ್ಟಿದ್ದು, ಒಂದೇ ದಿನ 227 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.

ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಸೋಮವಾರ ಮತ್ತೆ 42 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ.

English summary
The Telangana government decided to impose big salary cuts ranging from 10 per cent to 75 per cent for its executive, political representatives and employees, as the country completed the first of the three-week lockdown to slow the march of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X