ಹೈದರಾಬಾದ್ ನಲ್ಲಿ ಸತ್ಯ ಪ್ರಮೋದ ತೀರ್ಥರ ಪಾದುಕಾ ಆರಾಧನೆ

By: ಆರ್.ಅನಿಲ
Subscribe to Oneindia Kannada

ಹೈದರಾಬಾದ್, ನವೆಂಬರ್ 15: ಇಲ್ಲಿನ ಮಂದಾ ಗಾರ್ಡನ್ ನಲ್ಲಿ ನವೆಂಬರ್ 16, 17 ಹಾಗೂ 18ರಂದು ಉತ್ತರಾದಿ ಮಠದ ಸತ್ಯ ಪ್ರಮೋದ ತೀರ್ಥರ ಪಾದುಕಾ ಆರಾಧನೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ವೈಭವಯುತವಾದ ಶೋಭಾ ಯಾತ್ರೆ ನಡೆಯಿತು.

ಮಠಾಧೀಶರಾದ ಸತ್ಯಾತ್ಮ ತೀರ್ಥರನ್ನು ಆನೆ ಮೇಲೆ ಕೂರಿಸಿ, ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿ, ವೇದ ಪಾರಾಯಣ ಗೋಷ್ಠಿ, ನೃತ್ಯ, ನರ್ತನ ನಡೆಯಿತು. ಪಟಾಕಿ ಸಿಡಿಸಲಾಯಿತು. ಮೆರವಣಿಗೆ ವೇಳೆ ಅಪಾರ ಸಂಖ್ಯೆಯಲ್ಲಿ ಮಠದ ಭಕ್ತರು ಪಾಲ್ಗೊಂಡಿದ್ದರು.[ಮಳೆ ಅನಾಹುತ: ಮಳಖೇಡದ ಉತ್ತರಾದಿಮಠದಲ್ಲಿ 60 ಲಕ್ಷದಷ್ಟು ನಷ್ಟ]

Satyatma teertha

ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ ವಿದ್ವತ್ ಗೋಷ್ಠಿಗಳು ಇರುತ್ತವೆ. 'ಅಸಂಪ್ರಜ್ಞಾತ್' ಎಂಬ ವಿಷಯದ ಕಾರ್ಯಾಗಾರ ನಡೆಯಲಿದೆ. ದಾಸ ಸಾಹಿತ್ಯ ಗೋಷ್ಠಿ, ಮೂಲ ರಾಮದೇವರ ಪೂಜೆ, ಸತ್ಯಾತ್ಮ ತೀರ್ಥರಿಗೆ ಪಾದಪೂಜೆ ಹಾಗೂ ಅವರಿಂದ ಆಶೀರ್ವಚನ ಇರುತ್ತದೆ.

ಇನ್ನು ಸತ್ಯ ಪ್ರಮೋದ ತೀರ್ಥರ ಜೀವನ ದರ್ಶನ ಎಂಬ ವಿಡಿಯೋ ಪ್ರದರ್ಶನ ಇರುತ್ತದೆ. ಸಾಯಂಕಾಲ ಉಪನ್ಯಾಸ ಕಾರ್ಯಕ್ರಮ ಇರುತ್ತದೆ. ಕೂಡ್ಲಿ ಮಠಾಧೀಶರಾದ ರಘು ವಿಜಯ ತೀರ್ಥರು, ವ್ಯಾಸನಕೆರೆ ಪ್ರಭಂಜನಾ ಚಾರ್ಯ, ಮಾಹುಲಿ ವಿದ್ಯಾಸಿಂಹಾ ಚಾರ್ಯ ಮೊದಲಾದವರು ಉಅಪನ್ಯಾಸ ನೀಡುತ್ತಾರೆ.[ನವವೃಂದಾವನ ವಿವಾದ: ಸತ್ಯಾತ್ಮತೀರ್ಥ ಸ್ವಾಮೀಜಿಗೆ ಪೊಲೀಸ್ ರಕ್ಷಣೆ]

Uttaradi mutt

ಇನ್ನು ಗುರುವಾರದಂದು 'ಧ್ಯಾನ ಪ್ರಮೋದ ಪ್ರಶಸ್ತಿ' ಯನ್ನು ವಿತರಿಸಿರುವ ಕಾರ್ಯಕ್ರಮ ಇರುತ್ತದೆ. ಪ್ರತಿ ವರ್ಷ ಸತ್ಯ ಪ್ರಮೋದ ತೀರ್ಥರ ಮೂಲ ವೃಂದಾವನ ಇರುವ ತಿರು ಕೋಯಿಲೂರ್ ನಲ್ಲಿ ಆರಾಧನೆ ನಡೆದ ಹದಿನೈದನೇ ದಿನಕ್ಕೆ ಬೇರೆ ಊರುಗಳಲ್ಲಿ ಈ ರೀತಿ ಪಾದುಕಾರಾಧನೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಹೈದರಾಬಾದ್ ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Satya Pramoda Teerthapaduka aradhanae celebrating in Hyderabad on November 16,17 and 18.
Please Wait while comments are loading...