ರಕ್ತಚಂದನ ಪ್ರಕರಣ: ನಾಪತ್ತೆಯಾಗಿದ್ದ ನಟಿ ನೀತು ಬಂಧನ
ಹೈದರಾಬಾದ್, ಏ.26: ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ, ರಕ್ತಚಂದನ ಮಾಫಿಯಾ ಜೊತೆ ನಂಟು ಹೊಂದಿರುವ ಆರೋಪ ಹೊತ್ತು ನಾಪತ್ತೆಯಾಗಿದ್ದ ನಟಿ ನೀತು ಅಗರವಾಲ್ ರನ್ನು ಕರ್ನೂಲು ಪೊಲೀಸರು ಬಂಧಿಸಿದ್ದಾರೆ.
ಸ್ಲಗಲಿಂಗ್ ಕಿಂಗ್ ಪಿನ್ ಮಸ್ತನ್ ವಾಲಿ ಸಂಪರ್ಕ ಹೊಂದಿದ್ದ ನಟಿ ನೀತು ನಾಪತ್ತೆಯಾಗಿದ್ದರು. ಶನಿವಾರ ರಾತ್ರಿ ಹೈದರಾಬಾದಿನ ಪೊಲೀಸರು ಹಾಗೂ ಕರ್ನೂಲು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನೀತುರನ್ನು ವಶಕ್ಕೆ ಪಡೆದಿದ್ದಾರೆ. [ನೀತು ಅಗರವಾಲ್ ಗೆ ಹೇಗೆ ನಂಟು?]

ಏ.13ರಿಂದ ನೀತು ನಾಪತ್ತೆಯಾಗಿದ್ದರು.ನೀತುಗಾಗಿ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಪ್ರೇಮ ಪ್ರಣಯಂ ಚಿತ್ರದಲ್ಲಿ ನಟಿಸಿರುವ ನಟಿ ನೀತು ಮೇಲೂ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ಕರ್ನೂಲ್ ಜಿಲ್ಲೆ ರುದ್ರಾವರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. [ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]
ಮಸ್ತಾವ್ ವಾಲಿ: ನಿಂಬೆಹಣ್ಣು ಮಾರಾಟಗಾರನಾಗಿ ಆಂಧ್ರಪ್ರದೇಶದಲ್ಲಿ ಜೀವನೋಪಾಯ ಕಂಡು ಕೊಂಡಿದ್ದ ಮಸ್ತಾನ್ ಗೆ ಒಮ್ಮೆ ತಿರುಪತಿ ಬಳಿ ಸ್ಮಗ್ಲರ್ ಗಳ ಗುಂಪು ಪರಿಚಯವಾಗುತ್ತದೆ.
ನಂತರ ದಂಧೆಗಿಳಿದು ಕೋಟಿಗಟ್ಟಲೇ ಹಣ ಬಾಚುತ್ತಾನೆ.ವೈಎಸ್ಸಾರ್ ಪಕ್ಷದ ಸಂಪರ್ಕ ಸಾಧಿಸಿ ಸಂಸದನಾಗಲು ಯತ್ನಿಸಿ ವಿಫಲನಾಗಿದ್ದ. ಅದರೂ, ವೈಎಸ್ಸಾರ್ ಪಕ್ಷದ ಮುಖಂಡನಾಗಿ ಮುಂದುವರೆದಿದ್ದಾನೆ.13ರಂದು ಕರ್ನೂಲ್ ಜಿಲ್ಲೆಯಲ್ಲಿ ಬಂಧಿತನಾಗಿದ್ದ ಮಸ್ತಾನ್ ನಂತರ ಜಾಮೀನು ಪಡೆದು ಹೊರಬಂದವನು ಸದ್ಯ ತಲೆಮರೆಸಿಕೊಂಡಿದ್ದಾನೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications