ಡ್ರಗ್ ಕೇಸ್ : ಮುಗುಳ್ನಗುತ್ತಾ ವಿಚಾರಣೆಗೆ ಹಾಜರಾದ ಸ್ಟಾರ್ ನಟ
ಹೈದರಾಬಾದ್, ಜುಲೈ 28: ತೆಲುಗು ಚಿತ್ರರಂಗದ ಸ್ಟಾರ್ ನಟ ರವಿತೇಜ ಅವರು ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡದ(SIT) ಎದುರು ಶುಕ್ರವಾರದಂದು ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತೀಚೆಗೆ ಅಪಘಾತದಲ್ಲಿ ದುರಂತ ಸಾವಿಗೀಡಾದ ರವಿತೇಜ ಅವರ ಸೋದರ ಭರತ್ ಅವರು ಮಾದಕ ದ್ರವ್ಯ ವ್ಯಸನಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ರವಿತೇಜ ಅವರು ವಿಶೇಷ ತನಿಖಾ ತಂಡದ ವಿಚಾರಣೆಗೆ ಹಾಜರಾಗಿರುವ ತೆಲುಗು ಚಿತ್ರರಂಗದ ಎಂಟನೇ ವ್ಯಕ್ತಿಯಾಗಿದ್ದಾರೆ.
ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಈ ಪ್ರಕರಣದಲ್ಲಿ ರವಿತೇಜ ಅವರು ಭಾಗಿಯಾಗಿಲ್ಲದಿದ್ದರೂ ಅವರ ಸೋದರ ಭರತ್ ಹಾಗೂ ಪೂರಿ ಜಗನ್ನಾಥ್ ಗ್ಯಾಂಗಿಗೆ ಆಪ್ತರಾಗಿರುವ ಕಾರಣ, ವಿಚಾರಣೆಗೆ ಹಾಜರಾಗಿದ್ದಾರೆ.

ತೆಲುಗು ನಟ ಪಲ್ಲಪೊಲ್ಲು ನವದೀಪ್, ತರುಣ್ ಕುಮಾರ್, ಪಿ ಸುಬ್ಬರಾಜು, ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಯಾಗಿದೆ. ಈತನಕ ನಿರ್ದೇಶಕ ಧರ್ಮರಾವ್, ಚಿತ್ರ ನಿರ್ಮಾಪಕ ಪುರಿ ಜಗನ್ನಾಥ್, ಸಿನೆಮಾಟೊಗ್ರಾಫರ್ ಶ್ಯಾಮ್ ಕೆ. ನಾಯ್ಡು ಹಾಗೂ ನಟರಾದ ಸುಬ್ಬಾ ರಾಜು, ತರುಣ್‌ಕುಮಾರ್ ಹಾಗೂ ಪಿ.ನವ್‌ದೀಪ್ ಅಲ್ಲದೆ ಚಾರ್ಮಿ ಕೌರ್ ಅವರ ವಿಚಾರಣೆ ನಡೆಸಲಾಗಿದೆ.












Click it and Unblock the Notifications