ಸ್ಮಶಾನದಲ್ಲಿ ಚಿಂದಿ ಆಯುವವಳ ಶವ ಪತ್ತೆ, ಕೊಲೆಯ ಹಿಂದಿನ ಕತೆಯೇ ಬೇರೆ
ಹೈದರಾಬಾದ್, ಜೂನ್ 14: ಚಿಂದಿ ಆಯುವ ಮಹಿಳೆಯ ಶವವೊಂದು ಸ್ಮಶಾನದಲ್ಲಿ ಪತ್ತೆಯಾಗಿತ್ತು. ಸಾವಿನ ಕುರಿತು ತನಿಖೆ ನಡೆಸುವಾಗ ಸತ್ಯ ಬಹಿರಂಗಗೊಂಡಿದೆ.
ಮಹಿಳೆಯ ಪ್ರಿಯಕರ ಆಕೆಗೆ ಸ್ಮಶಾನಕ್ಕೆ ಬರಲು ಹೇಳಿ ಕುಡಿದ ಮತ್ತಿನಲ್ಲಿ ಅಲ್ಲಿದ್ದ ಭಾರದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದು ತಿಳಿದುಬಂದಿದೆ.
ಇಬ್ಬರಿಗೂ ಈ ಮೊದಲೇ ಮದುವೆಯಾಗಿದ್ದು ಮೊದಲ ಪತ್ನಿ, ಪತಿಯಿಂದ ದೂರವಿದ್ದರು. ಶ್ರೀನಿಗೆ ಪದ್ಮಮ್ಮ ಮೇಲೆ ಅನುಮಾನ ಇತ್ತು, ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಗಲಾಟೆಯೂ ನಡೆದಿತ್ತು. ಮಹಿಳೆ ಆತನಿಗೆ ಹಣ ಕೊಡುವುದನ್ನು ನಿಲ್ಲಿಸಿದ್ದಳು.

ಇದರಿಂದ ಕೋಪಗೊಂಡ ಆತ ಆಕೆಯನ್ನು ಕೊಲ್ಲಲು ಹೊಂಚು ಹಾಕಿದ್ದ. ಆತ ಹತ್ತಿರದಲ್ಲಿದ್ದ ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದ, ಇಬ್ಬರೂ ಕಂಠಪೂರ್ತಿ ಕುಡಿದಿದ್ದರು. ಮಹಿಳೆ ಮೈಮೇಲೆ ಪ್ರಜ್ಞೆ ಇಲ್ಲದೆ ಮಲಗಿದ್ದಳು.
ಆ ಸಂದರ್ಭದಲ್ಲಿ ಕಲ್ಲಿನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಎರಡು ಗೋರಿಗಳ ಮಧ್ಯೆ ಪದ್ಮಮ್ಮ ಶವ ಪತ್ತೆಯಾಗಿದೆ. ಬಳಿಕ ಶ್ರೀನುವನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ಮೇ ತಿಂಗಳಿನಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು. ಹೆಂಡತಿ ಮೇಲೆ ಸಂಶಯಪಟ್ಟು ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿದ್ದ.












Click it and Unblock the Notifications