ಮಹಿಳೆಯ ಒಳ ಉಡುಪಿನಲ್ಲಿ ಚಿನ್ನ ಸಾಗಣೆ: ಬಂಧನ

ದುಬೈನಿಂದ ಇಂದು ಬೆಳಗ್ಗೆ ಬಂದಿಳಿದ ಮೊಹಮದ್ ಇಕ್ಬಾಲ್ ಬಂಧಿತ ವ್ಯಕ್ತಿ. 467 ಗ್ರಾಂ ತೂಕದ ಚಿನ್ನದ ತಂತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮೊಹಮದ್ ಇಕ್ಬಾಲ್ ಚಿನ್ನದ ತಂತಿಗಳಿಗೆ ಅಲ್ಯುಮಿನಿಯಂ ಬಣ್ಣ ಹಚ್ಚಿ, ಮಹಿಳೆಯರ ಬ್ರಾ ಮತ್ತು ಒಳ ಉಡುಪುಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ದುಬೈನಿಂದ ಬಂದಿದ್ದ ಮಲೆಯಾಳಿ ಮೊಹಮದ್ ಇಕ್ಬಾಲ್, ಮೊದಲು ತನ್ನಲ್ಲಿ ಸುಂಕ ಕಟ್ಟುವಂತಹ ವಸ್ತುಗಳು ಯಾವುದೂ ಇಲ್ಲ ಎಂದು ಭದ್ರತಾಧಿಕಾರಿಗಳ ಬಳಿ ಘೋಷಿಸಿಕೊಂಡಿದ್ದ. ಆದರೆ ಆತನ ಲಗೇಜನ್ನು ತಪಾಸಣೆ ಮಾಡಿದಾಗ ಅಧಿಕಾರಿಗಳಿಗೆ ಅನುಮಾನ ಬಂದಿದೆ.
ಲಗೇಜ್ ತೆರೆದು ನೋಡಿದಾಗ ಮಹಿಳೆಯರ ಒಳ ಉಡುಪಗಳಷ್ಟೇ ಕಂಡುಬಂದಿದೆ. ಆದರೂ ಪಟ್ಟುಬಿಡದ ಅಧಿಕಾರಿಗಳು ಅದನ್ನೆಲ್ಲಾ ಮೆಟಲ್ ಡಿಟೆಕ್ಟರ್ ಯಂತ್ರದ ಮುಂದೆ ಒಡ್ಡಿದಾಗ ಅಲ್ಯುಮಿನಿಯಂ ತಂತಿಗಳು ಕಂಡುಬಂದಿವೆ. ಅದನ್ನು ಮತ್ತಷ್ಟು ಪರೀಕ್ಷಿಸಿದಾಗ ಅಲ್ಯುಮಿನಿಯಂ ತಂತಿಗಳು ಚಿನ್ನದ್ದು ಎಂಬುದು ಬೆಳಕಿಗೆ ಬಂದಿದೆ.
ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೂ ಒಬ್ಬ ಪ್ರಯಾಣಿಕನನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇಕ್ಬಾಲ್ ಎಂಬ ವ್ಯಕ್ತಿ ಚಿನ್ನದ ಚೈನ್ ಮತ್ತು ಕೈಬಳೆಗಳನ್ನು ಕದ್ದು ಸಾಗಿಸುತ್ತಿದ್ದ. ಇಬ್ಬರಿಂದಲೂ ಸುಮಾರು 28 ಲಕ್ಷ ರೂ. ಮೌಲ್ಯದ ಈ ಚಿನ್ನವನ್ನು ವಶಪಡಿಸಿಕೊಂಡ ಭದ್ರತಾಧಿಕಾರಿಗಳು ಅವರನ್ನು ಬಿಟ್ಟುಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.












Click it and Unblock the Notifications