ಒಸ್ಮಾನಿಯಾ ಆಸ್ಪತ್ರೆ ಒಳಗೆ ಹೆಲ್ಮೆಟ್ ಧರಿಸಿದ ಡಾಕ್ಟರ್‌ಗಳು!

Recommended Video

      ತೆಲಂಗಾಣದ ಒಸ್ಮಾನಿಯಾ ಆಸ್ಪತ್ರೆ ಒಳಗೆ ಹೆಲ್ಮೆಟ್ ಧರಿಸಿದ ಡಾಕ್ಟರ್‌ಗಳು | Oneindia Kannada

      ಹೈದರಾಬಾದ್, ಸೆಪ್ಟೆಂಬರ್ 8: ತೆಲಂಗಾಣದ ಹೈದರಾಬಾದ್‌ನ ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರ ಬಿಳಿಕೋಟು ತೊಟ್ಟು, ಹೆಲ್ಮೆಟ್ ಹಾಕಿಕೊಂಡ ಮಂದಿ ಎಲ್ಲೆಲ್ಲೂ ಕಾಣಿಸುತ್ತಿದ್ದರು.

      ಹಾಗೆಂದು ಅವರು ಆಸ್ಪತ್ರೆ ಒಳಗೆ ದ್ವಿಚಕ್ರ ವಾಹನ ಓಡಿಸುತ್ತಿರಲಿಲ್ಲ. ಕುತ್ತಿಗೆಗೆ ಸ್ಟೆತಸ್ಕೋಪ್ ನೇತುಹಾಕಿಕೊಂಡಿದ್ದರು, ಇನ್ನು ಕೆಲವರು ರೋಗಿಗಳಿಗೆ ಇಂಜೆಕ್ಷನ್, ಔಷಧ ನೀಡುತ್ತಾ ರೋಗಿಗಳ ಕ್ಷೇಮ ವಿಚಾರಿಸುತ್ತಿದ್ದರು.

      ಕುಸಿಯುವ ಭೀತಿಗೆ ಒಳಗಾಗಿರುವ ಹಳೆಯ ಆಸ್ಪತ್ರೆಯನ್ನು ದುರಸ್ತಿಗೆ ಒಳಪಡಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಆಗ್ರಹಿಸಿ ಒಸ್ಮಾನಿಯಾ ಆಸ್ಪತ್ರೆಯ ವೈದ್ಯರು ನಡೆಸಿದ ಪ್ರತಿಭಟನೆಯ ಪರಿ ಇದು.

      ಆಸ್ಪತ್ರೆಯ ಒಳರೋಗಿಗಳ ವಾರ್ಡ್‌ನ ಕಟ್ಟಡದ ಮಹಡಿಯ ಭಾಗವೊಂದು ಕಳೆದ ತಿಂಗಳು ಕುಸಿದು ರೋಗಿಗಳಿಗೆ ಗಾಯವಾಗಿತ್ತು. ಈ ಕಟ್ಟಡ ದುರಸ್ತಿಗೆ ಒಳಪಡುವ ಸ್ಥಿತಿಯಲ್ಲಿಯೂ ಇಲ್ಲ.

      ಕಟ್ಟಡ ಎಲ್ಲಿ ಕುಸಿದು ಬೀಳುತ್ತದೆಯೋ ಎಂಬ ಭಯದಿಂದಲೇ ನಿತ್ಯವೂ ಕೆಲಸ ಮಾಡುವಂತಾಗಿದೆ ಎನ್ನುತ್ತಾರೆ ಅಲ್ಲಿನ ವೈದ್ಯರು.

      ಒಸ್ಮಾನಿಯಾ ಸರ್ಕಾರಿ ಆಸ್ಪತ್ರೆ ಜಂಟಿ ಕಾರ್ಯ ಸಮಿತಿಯು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮತ್ತೆ ಪ್ರತಿಭಟನೆ ಆರಂಭಿಸಿದೆ. ಹೊಸ ಕಟ್ಟಡವನ್ನು ಶೀಘ್ರದಲ್ಲಿಯೇ ನಿರ್ಮಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಲಕ್ಷ್ಮ ರೆಡ್ಡಿ ಭರವಸೆ ನೀಡಿದ್ದರಿಂದ ಇದಕ್ಕೂ ಮೊದಲು ನಾಲ್ಕು ತಿಂಗಳ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.

      Osmania Hospital doctors wear helmets to protest unsafe building

      ಆದರೆ, ಅಂದಿನಿಂದ ಇದುವರೆಗೂ ವಿವಿಧ ವಿಭಾಗಗಳಲ್ಲಿ ಐದು ಕಡೆ ಮಹಡಿಯ ಸಿಮೆಂಟ್ ಗಾರೆ ಕಿತ್ತು ಬಿದ್ದಿದೆ. ವೈದ್ಯರು ಮತ್ತು ರೋಗಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇದೇ ಸ್ಥಿತಿ ಇದ್ದರೆ ಮುಂದೆ ಭಾರಿ ಅಪಾಯ ಎದುರಾಗಲಿದೆ. ಹೀಗಾಗಿ ಪ್ರತಿಭಟನೆ ಮುಂದುವರಿಸುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+