ಚಿತ್ರಗಳಲ್ಲಿ : ತೆಲಂಗಾಣ ಬಂದ್ ಸಂಪೂರ್ಣ ಯಶಸ್ವಿ
ಹೈದ್ರಾಬಾದ್, ಮೇ.30: ಯುಪಿಎ ಸರ್ಕಾರದ ನಿರ್ಧಾರವನ್ನು ಖಂಡಿಸಿ ತೆಲಂಗಾಣ ನಿಯೋಜಿತ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕರೆ ನೀಡಿದ್ದ ತೆಲಂಗಾಣ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ತೆಲಂಗಾಣದ 7 ಜಿಲ್ಲೆಗಳನ್ನು ಸೀಮಾಂಧ್ರದ ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಂದ್ ಗೆ ಕರೆ ನೀಡಿದ್ದರು.
ತೆಲಂಗಾಣದ 10 ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗಿದೆ. ತಮ್ಮ ರಾಜ್ಯದಿಂದ ಒಂದು ಇಂಚು ಪ್ರದೇಶವೂ ಸೀಮಾಂಧ್ರದ ಪಾಲಾಗಬಾರದು. ಈ ಹಿಂದೆ ಯುಪಿಎ ಸರ್ಕಾರ ಈ ಬಗ್ಗೆ ನಿರ್ಧರಿಸಲಾಗಿತ್ತು ಎಂದು ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಟಿಆರ್‌ಎಸ್ ಅಧಿಕಾರಕ್ಕೆ ಬಂದಿರುವುದರಿಂದ ಗುರುವಾರ ನಡೆಯಲಿರುವ ಬಂದ್ ಯಶಸ್ವಿಯಾಗಿದೆ. ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಆರ್‌ಎಸ್ ಪಕ್ಷ 63 ಹಾಗು ಲೋಕಸಭಾ ಚುನಾವಣೆಯಲ್ಲಿ 11 ಸೀಟುಗಳನ್ನು ಗೆದ್ದುಕೊಂಡಿತ್ತು. ಕೆ.ಚಂದ್ರಶೇಖರ್ ರಾವ್ ಅವರು ನೂತನ ರಾಜ್ಯ ತೆಲಂಗಾಣದ ಮುಖ್ಯಮಂತ್ರಿಯಾಗಿ ಜೂನ್ 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ತೆಲಂಗಾಣ ಬಂದ್, ಬಸ್ ಸಂಚಾರ ಅಸ್ತವ್ಯಸ್ತ
ರಾಜ್ಯ ಸಾರಿಗೆ ಬಸ್ ಗಳು, ಮಹಾರಾಷ್ಟ್ರ, ಕರ್ನಾಟಕದ ಸಾರಿಗೆ ಬಸ್ ಗಳು ಎಂಜಿಬಿಎಸ್, ಜ್ಯೂಬಿಲಿ ಬಸ್ ನಿಲ್ದಾಣದಲ್ಲೇ ನಿಲ್ಲಿಸಿದ್ದವು, ಹೈದರಾಬಾದಿನಿಂದ 10 ಜಿಲ್ಲೆಗಳಿಗೆ ಹೊರಡಲಿರುವ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು.

ವಾರಂಗಲ್ ನಲ್ಲಿ ಟಿಆರ್ ಎಸ್ ಪ್ರತಿಭಟನೆ
ವಾರಂಗಲ್ ನಲ್ಲಿ ಟಿಆರ್ ಎಸ್ ಶಾಸಕ ಕೊಂಡಾ ಸುರೇಖ ಅವರು ಪ್ರತಿಭಟನೆ ನಡೆಸಿ ಬಸ್ ಸಂಚಾರ ಸ್ಥಗಿತಗೊಳಿಸಿದರು. ಮಹಬೂಬ್ ನಗರ, ನಲ್ಗೊಂಡ, ಅದಿಲಾಬಾದ್, ಕರೀಂನಗರ, ರಂಗಾರೆಡ್ಡಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಟಿಆರ್ ಎಸ್ ಗೆ ವಿವಿಧ ಪಕ್ಷಗಳ ಬೆಂಬಲ
ಟಿಆರ್ ಎಸ್ ಗೆ ವಿವಿಧ ಪಕ್ಷಗಳ ಬೆಂಬಲ ಸಿಕ್ಕಿತ್ತು ಸಿಪಿಐ, ಸಿಪಿಎಂ ಪಕ್ಷದ ಕಾರ್ಯಕರ್ತರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ
ಮೋದಿ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗುತ್ತದೆ ಖಮ್ಮಂ ಜಿಲ್ಲೆಯ ಏಳು ಮಂಡಲಗಳನ್ನು ಒಟ್ಟಿಗೆ ಸೇರಿಸುವುದರಿಂದ ಪೊಲಾವರಂ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಿದ್ದಂತಾಗುತ್ತದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಹೇಳಿದೆ.

ಗಡಿಭಾಗದ ಸಣ್ಣ ಉದ್ಯಮಿಗಳಿಗೆ ನಷ್ಟ
ತೆಲಂಗಾಣ ಬಂದ್ ನಿಂದಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಿಂದ ದಿನನಿತ್ಯ ವ್ಯಾಪಾರಕ್ಕಾಗಿ ಹೈದರಾಬಾದ್ ಮುಂತಾದ ನಗರಕ್ಕೆ ಆಗಮಿಸುವ ಸಣ್ಣ ಉದ್ದಿಮೆದಾರರಿಗೆ ಬಂದ್ ನಿಂದಾಗಿ ನಷ್ಟವಾಗಿದೆ.












Click it and Unblock the Notifications