ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಎನ್‌ಐಎ ದಾಳಿ

|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 18: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) 'ದೇಶ ವಿರೋಧಿ ಚಟುವಟಿಕೆ'ಗಳಲ್ಲಿ ತೊಡಗಿದೆ ಎಂಬ ಆರೋಪದ ಮೇಲೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

ಆಂಧ್ರ ಪ್ರದೇಶದ ಕರ್ನೂಲ್, ನೆಲ್ಲೂರು ಮತ್ತು ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್‌ನಾದ್ಯಂತ ಪ್ರಕರಣದ ಆರೋಪಿಗಳು ಮತ್ತು ಶಂಕಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯ ಎನ್‌ಐಎ ದಾಳಿ ನಡೆಸುತ್ತಿದೆ.

ಪಂಜಾಬ್, ಹರಿಯಾಣ, ದೆಹಲಿ ಸೇರಿ ಒಂದೇ ದಿನ 50 ಸ್ಥಳಗಳ ಮೇಲೆ ಎನ್‌ಐಎ ದಾಳಿಪಂಜಾಬ್, ಹರಿಯಾಣ, ದೆಹಲಿ ಸೇರಿ ಒಂದೇ ದಿನ 50 ಸ್ಥಳಗಳ ಮೇಲೆ ಎನ್‌ಐಎ ದಾಳಿ

ಕಳೆದ ತಿಂಗಳು, ರಾಷ್ಟ್ರೀಯ ತನಿಖಾ ಸಂಸ್ಥೆ ಹೈದರಾಬಾದ್‌ನಲ್ಲಿ 27 ಜನರ ವಿರುದ್ಧ "ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು" ಸಂಚು ರೂಪಿಸಿದ ಪ್ರಕರಣವನ್ನು ದಾಖಲಿಸಿತ್ತು.

NIA conducts raids in Andhra Pradesh and Telangana connection with PFI case

ಉಗ್ರಗಾಮಿ ಇಸ್ಲಾಮಿಕ್ ಸಂಘಟನೆಯಾದ ಪಿಎಫ್‌ಐಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಆರು ಜಿಲ್ಲೆಗಳಲ್ಲಿ 38 ಸ್ಥಳಗಳು ಮತ್ತು ಆಂಧ್ರ ಪ್ರದೇಶದ ಎರಡು ಜಿಲ್ಲೆಗಳಲ್ಲಿ ಎರಡು ಸ್ಥಳಗಳು ಸೇರಿದಂತೆ 40 ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.

ಅಬ್ದುಲ್ ಖಾದರ್ ಮತ್ತು ಇತರ 26 ಮಂದಿ ವಿರುದ್ಧ ನಿಜಾಮಾಬಾದ್‌ನ ಆಟೋ ನಗರದಲ್ಲಿರುವ ಖಾದರ್ ಮನೆಯಲ್ಲಿ 'ದೇಶ ವಿರೋಧಿ ಚಟುವಟಿಕೆ' ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ ಪಿಎಫ್‌ಐ ಸದಸ್ಯರ ಸಭೆಗಳಿಗಾಗಿ ತಮ್ಮ ಮನೆಯ ಛಾವಣಿಯ ಮೇಲೆ ಹೆಚ್ಚುವರಿ ಭಾಗವನ್ನು ನಿರ್ಮಿಸಿದ್ದಾಗಿ ಅಬ್ದುಲ್ ಖಾದರ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

NIA conducts raids in Andhra Pradesh and Telangana connection with PFI case

"ಕ್ರಿಮಿನಲ್ ಪಿತೂರಿಯನ್ನು ಅನುಸರಿಸಿ, ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರನ್ನು ನೇಮಿಸಿಕೊಂಡರು, ಭಯೋತ್ಪಾದಕ ಕೃತ್ಯಗಳನ್ನು ಎಸಗಲು ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸಿದರು. ಅವರು ಕಾನೂನುಬಾಹಿರ ಸಭೆಯನ್ನು ನಡೆಸಿದ್ದಾರೆ. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದರು. ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಡ್ಡಿಪಡಿಸುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ" ಎಂದು ಎಫ್‌ಐಆರ್ ಹೇಳುತ್ತದೆ.

"ಪಿಎಫ್‌ಐ ಸದಸ್ಯರು ಕರಾಟೆ ತರಗತಿಗಳ ಹೆಸರಿನಲ್ಲಿ ಯುವಕರಿಗೆ ತರಬೇತಿ ಮತ್ತು ದೈಹಿಕ ವ್ಯಾಯಾಮಗಳನ್ನು ಪ್ರಾರಂಭಿಸಿದ್ದರು. ಅವರ ದ್ವೇಷಪೂರಿತ ಭಾಷಣಗಳ ಮೂಲಕ ನಿರ್ದಿಷ್ಟ ಸಮುದಾಯದ ವಿರುದ್ಧ ಯುವಕರನ್ನು ಪ್ರಚೋದಿಸುತ್ತಿದ್ದರು" ಎಂದು ಎಫ್‌ಐಆರ್ ಸೇರಿಸುತ್ತದೆ.

ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 13(1)(ಬಿ) ಅಡಿಯಲ್ಲಿ ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯು ಪಿಎಫ್‌ಐ ಸದಸ್ಯರ ವಿರುದ್ಧ ಈ ವರ್ಷ ಜುಲೈನಲ್ಲಿ ಪ್ರಕರಣ ದಾಖಲಿಸಿದೆ.

English summary
NIA conducts raids in Andhra Pradesh's Nellore, Nandyal and Telangana in connection with the PFI case. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X