ತೆಲಂಗಾಣದ ನಲ್ಗೊಂಡದ ಹೊಲದಲ್ಲಿ ತರಬೇತಿ ವಿಮಾನ ಪತನ, ಪೈಲಟ್ ಸಾವು
ಹೈದ್ರಾಬಾದ್, ಫೆಬ್ರವರಿ 26: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಹೊಲದಲ್ಲಿ ತರಬೇತಿ ವಿಮಾನವೊಂದು ಪತನವಾಗಿರುವ ಘಟನೆ ಶನಿವಾರ ವರದಿಯಾಗಿದೆ. ವಿಮಾನ ಪತನದ ಸಂದರ್ಭದಲ್ಲಿ ಪೈಲಟ್ ಮತ್ತು ಟ್ರೈನಿ(ತರಬೇತಿ ಪಡೆಯುವ) ಪೈಲಟ್ ವಿಮಾನದಲ್ಲಿದ್ದರು ಎಂದು ತಿಳಿದು ಬಂದಿದೆ.
ವಿಮಾನದಲ್ಲಿದ್ದ ಒಬ್ಬ ಪೈಲಟ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದು, ವಿಮಾನದಲ್ಲಿದ್ದ ಇತರರ ಕುರಿತು ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ವಿಮಾನ ಮತ್ತು ವಿಮಾನದಲ್ಲಿದ್ದ ಜನರ ಹೆಚ್ಚಿನ ವಿವರಗಳಿಗಾಗಿ ಅವರು ತರಬೇತಿ ಅಕಾಡೆಮಿಯನ್ನು ಸಂಪರ್ಕಿಸುತ್ತಿದ್ದಾರೆ. ನಲ್ಗೊಂಡ ಜಿಲ್ಲಾ ಪೊಲೀಸ್ ತಂಡಗಳು ಆರೋಗ್ಯ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೆದ್ದವೂರ ಮಂಡಲದ ತುಂಗತುರ್ಥಿ ಗ್ರಾಮದ ಗದ್ದೆಯಲ್ಲಿ ರೈತರು ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಘಟನೆ ನಡೆದಿದ್ದು, ಸ್ಥಳಕ್ಕೆ ರೈತರು ಧಾವಿಸಿದ್ದರು. ರೈತರೇ ತಕ್ಷಣ ಬೆಂಕಿ ನಂದಿಸಲು ಮತ್ತು ವಿಮಾನದಲ್ಲಿದ್ದ ಪೈಲಟ್‌ಗಳನ್ನು ರಕ್ಷಿಸಲು ಪ್ರಯತ್ನಿಸಿದರು.

ಗದ್ದೆಯಲ್ಲಿ ಪತನಗೊಂಡ ವಿಮಾನ:
ನಾಗರಾಜು ಸಾಗರ್ ಕಡೆಯಿಂದ ಹಾರಿ ಬರುತ್ತಿದ್ದ ವಿಮಾನ, ಗದ್ದೆಯಲ್ಲಿ ಪತನಗೊಂಡು ಸ್ಫೋಟಗೊಂಡಿತು. "ನಾವು ಸ್ಥಳಕ್ಕೆ ಧಾವಿಸಿದಾಗ, ಅವುಗಳಲ್ಲಿ ಮೃತದೇಹಗಳನ್ನು ನೋಡಿದ್ದೇವೆ," ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.












Click it and Unblock the Notifications