ತಿರುಪತಿ ಲಡ್ಡು ತಯಾರಿಕೆಗೆ ಮತ್ತೆ ಕೆಎಂಎಫ್‌ ತುಪ್ಪ ಪೂರೈಕೆ

ಹೈದರಾಬಾದ್, ಫೆಬ್ರವರಿ 12 : ತಿರುಪತಿ ಲಡ್ಡು ತಯಾರಿಕೆಗೆ ಕೆಎಂಎಫ್‌ ತುಪ್ಪವನ್ನು ಪೂರೈಕೆ ಮಾಡಲು ಟೆಂಡರ್ ಪಡೆದಿದೆ. ಸುಮಾರು ಮೂರುವರೆ ವರ್ಷಗಳ ಬಳಿಕ ಕೆಎಂಎಫ್‌ಗೆ ಟೆಂಡರ್ ಸಿಕ್ಕಿದೆ.

ಹಿಂದೆ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡುತ್ತಿತ್ತು. ಆದರೆ, ಮೂರು ವರ್ಷಗಳ ಹಿಂದೆ ಅವಕಾಶ ತಪ್ಪಿ ಹೋಗಿತ್ತು. ಖಾಸಗಿ ಡೇರಿಯಿಂದ ತುಪ್ಪ ಖರೀದಿ ಮಾಡಲಾಗುತ್ತಿತ್ತು.

ಈಗ ಪುನಃ ಕೆಎಂಎಫ್ ತುಪ್ಪ ಪೂರೈಕೆ ಮಾಡಲು ಅವಕಾಶ ಸಿಕ್ಕಿದೆ. ತಿರುಪತಿ ದೇವಸ್ಥಾನ ಮಂಡಳಿಯು ಟೆಂಡರ್‌ಗೆ ಒಪ್ಪಿಗೆ ನೀಡಿದೆ. ಮುಂದಿನ ಆರು ತಿಂಗಳಿನಲ್ಲಿ 14 ಲಕ್ಷ ಕೆಜಿ ತುಪ್ಪವನ್ನು ಕೆಎಂಎಫ್ ಸರಬರಾಜು ಮಾಡಬೇಕಿದೆ.

KMF to supply ghee for Tirupathi ladu

ಸುವಾಸನೆ ಮತ್ತು ಗುಣಮಟ್ಟಕ್ಕೆ ಕೆಎಂಎಫ್ ತುಪ್ಪ ಹೆಸರುವಾಸಿಯಾಗಿದೆ. ಆದ್ದರಿಂದ, ಕಳೆದ 20 ವರ್ಷಗಳಿಂದ ಲಡ್ಡು ತಯಾರಿಕೆಗೆ ಕೆಎಂಎಫ್ ತುಪ್ಪ ಬಳಸಲಾಗುತ್ತಿದೆ. ಆದರೆ, ಈಗ ಮೂರು ವರ್ಷಗಳಿಂದ ಟೆಂಡರ್ ತಪ್ಪಿ ಹೋಗಿತ್ತು.

'ಆರು ತಿಂಗಳ ಕಾಲ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡುವ ಟೆಂಡರ್ ಸಿಕ್ಕಿದೆ. ಮುಂದೆಯೂ ಒಪ್ಪಂದ ನಮಗೆ ಸಿಗುವ ನಿರೀಕ್ಷೆ ಇದೆ' ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ಎಂ.ಟಿ.ಕುಲಕರ್ಣಿ ಹೇಳಿದ್ದಾರೆ.

ಕೆಎಂಎಫ್ ಪಕ್ಕದ ಆಂಧ್ರಪ್ರದೇಶದ ತಿರುಪತಿಗೆ ಮಾತ್ರ ತುಪ್ಪವನ್ನು ಪೂರೈಕೆ ಮಾಡುತ್ತಿಲ್ಲ. ಕರ್ನಾಟಕದ ಉಡುಪಿ ಕೃಷ್ಣ ದೇವಾಲಯ, ಕೊಲ್ಲೂರು, ಕುಕ್ಕೆ ಸುಬ್ರಮಣ್ಯ ದೇವಾಲಯಗಳಿಗೂ ತುಪ್ಪವನ್ನು ಪೂರೈಕೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+