'ವಜ್ರಗಳ ಹುಡುಕಾಟದಲ್ಲಿ’ ಸಿಂಹದ ಆವರಣಕ್ಕೆ ನುಗ್ಗಿದ: ಮುಂದೇನಾಯ್ತು ನೋಡಿ
ಹೈದರಾಬಾದ್, ನವೆಂಬರ್ 24: 'ವಜ್ರಗಳ ಹುಡುಕಾಟದಲ್ಲಿ' ವ್ಯಕ್ತಿ ಸಿಂಹದ ಆವರಣಕ್ಕೆ ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ವ್ಯಕ್ತಿ ಬದುಕಿದ್ರೆ ಸಾಕು ಬಡಜೀವ ಎಂಬಂತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಈ ವಿಚಿತ್ರವಾದ ಘಟನೆ ನಡೆದಿದ್ದು ವ್ಯಕ್ತಿ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಪರದಾಡಿದ ದೃಶ್ಯ ಸೆರೆಯಾಗಿದೆ.
ವಜ್ರಗಳ ಹುಡುಕಾಟಕ್ಕಾಗಿ ವ್ಯಕ್ತಿಯೊಬ್ಬ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ಗೆ ಪ್ರವೇಶಿಸಿದ್ದಾನೆ. ಸ್ವಲ್ಪ ಯಾಮಾರಿದರೂ ಆತ ಹಸಿದ ಆಫ್ರಿಕಾದ ಸಿಂಹಕ್ಕೆ ಆಹಾರವಾಗಿ ಬಿಡುತ್ತಿದ್ದ. ಆದರೆ ಮೃಗಾಲಯದ ಕೀಪರ್‌ಗಳ ಸಮಯೋಚಿತ ಕ್ರಮದಿಂದಾಗಿ ವ್ಯಕ್ತಿಯ ಪ್ರಾಣ ಉಳಿದಿದೆ. ದೊಡ್ಡ ದುರಂತ ತಪ್ಪಿದೆ.
ವೈರಲ್ ವಿಡಿಯೋದಲ್ಲಿ ಸಿಂಹಕ್ಕೆ ಸಿಕ್ಕಿಬಿದ್ದ ವ್ಯಕ್ತಿಯ ಹೆಸರು ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ. ಮನೋಹರ್ ಎಂಬ ಗಂಡು ಆಫ್ರಿಕನ್ ಸಿಂಹಕ್ಕೆ ಆಹಾರವಾಗುವುದರಿಂದ ಈತ ತಪ್ಪಿಸಿಕೊಂಡಿದ್ದಾರೆ. ಮೃಗಾಯಲಕ್ಕೆ ನುಗ್ಗಿದ ಈತನನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಸಿಂಹವಿರುವ ಆವರಣಕ್ಕೆ ನುಗ್ಗಿದ ಈತ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಅತ್ತ ಪೊಲೀಸ್ ಇತ್ತ ಸಿಂಹ ನಡು ಬಂಡೆಯ ಮೇಲೆ ಕುಳಿತ ವ್ಯಕ್ತಿ ಇತ್ತ ಜಿಗಿಯಲು ಆಗದೇ ಅತ್ತ ಓಡಿ ಹೋಗಲು ಆಗದೆ ಸಿಕ್ಕಿಬಿದ್ದಿದ್ದಾನೆ.

ಸಿಂಹವಿರುವ ಆವರಣಕ್ಕೆ ನುಗ್ಗಿದ ಕುಮಾರ್ ಬಂಡೆ ಮೇಲೆ ಸಿಲುಕಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಳಗೆ ಕಾಯುತ್ತಿರುವ ಸಿಂಹ ಒಂದೆಡೆಯಾದರೆ ಆವರಣದ ಪಕ್ಕದಲ್ಲಿರುವ ಬಂಡೆಯ ಇಳಿಜಾರಿನಲ್ಲಿ ಕುಮಾರ್ ಕುಳಿತಿರುವುದನ್ನು ಕಾಣಬಹುದು. ಸಮಯ ಪ್ರಜ್ಞೆಯಿಂದ ಕೀಪರ್‌ಗಳು ಬಂಡೆಯಿಂದ ಕೆಳಗೆ ಇಳಿಯದಂತೆ ಕುಮಾರ್‌ಗೆ ಹೇಳಿದ್ದಾರೆ. ಈ ವೇಳೆ ಕುಮಾರ್ ಇಳಿಜಾರು ಬಂಡೆಯ ಮೇಲೆ ಕುಳಿತಿದ್ದಾರೆ. ದೃಶ್ಯದಲ್ಲಿ ಬಂಡೆ ಕೆಳಗೆ 31 ವರ್ಷದ ಸಿಂಹ ಆವರಣದೊಳಗೆ ಕುಮಾರ್ ಪ್ರವೇಶಿಸುವುದನ್ನ ಕಾಯುತ್ತಿರುವ ಭಯಾನಕ ದೃಶ್ಯ ಕಂಡು ಬಂದಿದೆ.
ಸಿಂಹ ದೂರ ಹೋಗುವುದನ್ನು ಕಾಯುತ್ತಿದ್ದಾಗ ಸಿಬ್ಬಂದಿ ತಡೆದರು. "ಇಂದು ಮಧ್ಯಾಹ್ನ 03.30 ರ ಸುಮಾರಿಗೆ, ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾದ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನ ಸಿಂಹಗಳ ಆವರಣದಲ್ಲಿ ಸಿಂಹಗಳನ್ನು ಬಿಡಲಾಗಿತ್ತು. ಕುಮಾರ್ ಎಂಬಾತ ಮೃಗಾಲಯಕ್ಕೆ ನುಗ್ಗಿ ಆಫ್ರಿಕನ್ ಸಿಂಹದಿಂದ ಪಾರಾಗಿದ್ದಾನೆ. ನಮ್ಮ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ. ನಂತರ ವ್ಯಕ್ತಿಯನ್ನು ರಕ್ಷಿಸಿ ಹಿಡಿಯಲಾಯಿತು. ಮೃಗಾಲಯದ ಸಿಬ್ಬಂದಿಗಳು ಆತನನ್ನು ಬಹದ್ದೂರ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿ ಹಸ್ತಾಂತರಿಸಿದ್ದಾರೆ. ವಿಚಾರಣೆಯಲ್ಲಿ ಆತನ ಹೆಸರು ಜಿ ಸಾಯಿ ಕುಮಾರ್, ಸುಮಾರು 31 ವರ್ಷ ಎಂದು ತಿಳಿದು ಬಂದಿದೆ" ಎಂದು ಹೈದರಾಬಾದ್ ಮೃಗಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ವಿಡಿಯೋದಲ್ಲಿ ಸಿಂಹವು ಕೆಳಗೆ ಕಾಯುತ್ತಿರುವಾಗಲೂ ಆವರಣದ ಪಕ್ಕದಲ್ಲಿರುವ ಬಂಡೆಯ ಇಳಿಜಾರಿನಲ್ಲಿ ಕುಮಾರ್ ಕುಳಿತಿರುವುದನ್ನು ಕಾಣಬಹುದು. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಸಿಂಹದ ಆವರಣದಲ್ಲಿ ಅಡಗಿರುವ ವಜ್ರಗಳನ್ನು ಹುಡುಕುತ್ತಿದ್ದೇನೆ ಎಂದು ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ.
A man was enters into the #Lion enclosure, walking on the boulders of #AfricanLion moat area, at #NehruZoologicalPark, #Hyderabad.
— Surya Reddy (@jsuryareddy67) November 23, 2021
The person was rescued and caught by the #zoo staff and handed over to Bahadurpura police. pic.twitter.com/RO3TW2fh3G
ಇತ್ತೀಚೆಗಷ್ಟೇ ಇದೇ ರೀತಿಯ ಘಟನೆಯಲ್ಲಿ ಬೆಕ್ಕೊಂದು ಹುಲಿಗಳ ಆವರಣದೊಳಗೆ ಸಿಕ್ಕಿಹಾಕಿಕೊಂಡು ದೊಡ್ಡವರ ಮೇಲೆ ದಾಳಿ ನಡೆಸಿತ್ತು. ಸ್ವಲ್ಪ ಸಮಯದ ನಂತರ, ಇಬ್ಬರು ಕೀಪರ್‌ಗಳು ಆವರಣದೊಳಗೆ ಓಡಿ ಬೆಕ್ಕಿನ ಮರಿ ಅನ್ನು ರಕ್ಷಿಸಿದರು. ಬೆಕ್ಕಿನ ಮರಿ ಈಗ ಸುರಕ್ಷಿತ ಮತ್ತು ಆರೋಗ್ಯವಾಗಿದೆ. "ಧೈರ್ಯಶಾಲಿ ಬೆಕ್ಕಿನ ಮರಿ. ಪುಟ್ಟ ಬೆಕ್ಕು ದಾರಿತಪ್ಪಿ ಹುಲಿಗಳ ಆವರಣವೊಂದರಲ್ಲಿ ಸಿಕ್ಕಿಹಾಕಿಕೊಂಡಿತು. ಪವಾಡ ಎಂಬಂತೆ ಅದು ಬದುಕುಳಿದಿದೆ. ಈಗ ಅದು ಉತ್ತಮವಾಗಿರುವುದು ತಿಳಿದು ಬಂದಿದೆ" ಎಂದು ದುಬೈ ರಾಜಕುಮಾರಿ ಲತೀಫಾ ರಶೆದ್ ಅಲ್ ಮಕ್ತೌಮ್ Instagram ನಲ್ಲಿ ಬರೆದಿದ್ದಾರೆ.












Click it and Unblock the Notifications