ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ, ತೆಲಂಗಾಣ ಸಿಎಂ ಮುಳುಗೆದ್ದ ಬಳಿಕ ದುರಂತ

By Mahesh
|
Google Oneindia Kannada News

ರಾಜಮಂಡ್ರಿ, ಜುಲೈ 14 : ದಕ್ಷಿಣ ಭಾರತದ ಕುಂಭಮೇಳ, ಗೋದಾವರಿ ಪುಷ್ಕರಂಗೆ ಚಾಲನೆ ಸಿಕ್ಕ ಮೊದಲ ದಿನವೇ ರಕ್ತ ತರ್ಪಣವಾಗಿದೆ. ಕಾಲ್ತುಳಿತದಿಂದ ಭಕ್ತಾದಿಗಳು ಸಾವನ್ನಪ್ಪಿರುವುದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೇರ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರತ್ಯಕ್ಷ ದರ್ಶಿಗಳ ನೂಕು ನುಗ್ಗಲು ಉಂಟಾಗಲು ವಿಐಪಿಗಳು ತಡವಾಗಿ 'ಪುಣ್ಯಸ್ನಾನ' ಕೈಗೊಂಡಿದ್ದೇ ಕಾರಣ ಎಂದು ತಿಳಿದು ಬಂದಿದೆ.

ಪುಷ್ಕಂ ಪವಿತ್ರ ಸ್ನಾನಕ್ಕೆಂದು ಆಗಮಿಸಿದ್ದ ಭಕ್ತರ ನಡುವೆ ತಳ್ಳಾಟ, ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಸಿಲುಕಿದ ಸಾವನ್ನಪ್ಪಿದವರ ಸಂಖ್ಯೆ 30 ದಾಟಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. 30ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.[ರಾಜಮಂಡ್ರಿ: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಭಕ್ತಾದಿಗಳು ಬಲಿ]

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದರಲ್ಲದೆ, ಪರಿಹಾರ ಧನವಾಗಿ 10 ಲಕ್ಷ ರು ಕೂಡಾ ಘೋಷಿಸಿದ್ದಾರೆ.

ದುರಂತಕ್ಕೆ ಜಿಲ್ಲಾಡಳಿತ ಮಾಡಿದ್ದ ವ್ಯವಸ್ಥೆಯ ಲೋಪವೇ ಕಾರಣ ಎಂಬ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಸರ್ಕಾರವನ್ನು ದೂಷಿಸುವುದು ಸರಿಯಲ್ಲ, ಸಂತ್ರಸ್ತರಿಗೆ ಸಹಕರಿಸಿ ಎಂದು ಆಂಧ್ರಪ್ರದೇಶ ಸರ್ಕಾರ ಕೇಳಿಕೊಂಡಿದೆ. ಕುಂಭಮೇಳದ ಚಿತ್ರಗಳು ಇಲ್ಲಿವೆ...

ದಕ್ಷಿಣ ಭಾರತದ ಮಹಾ ಕುಂಭ ಮೇಳ

ದಕ್ಷಿಣ ಭಾರತದ ಮಹಾ ಕುಂಭ ಮೇಳ

ದಕ್ಷಿಣ ಭಾರತ ಖ್ಯಾತಿಯ ಈ ಕುಂಭ ಮೇಳ 144 ವರ್ಷಕ್ಕೊಮ್ಮೆ ಬರುವುದರಿಂದ ಪುಷ್ಕರಂನಲ್ಲಿ ಪುಣ್ಯಸ್ನಾನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದರೆ, ಬೆಳಗ್ಗೆ ಕಾಲ್ತುಳಿತಕ್ಕೂ ಮುನ್ನ ವಿಐಪಿಗಳ ಆಗಮನಕ್ಕಾಗಿ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಹೀಗಾಗಿ ಭಕ್ತಾದಿಗಳ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರು ಲಭ್ಯರಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ನಿಯಂತ್ರಣ ಕೊಠಡಿಗೆ ಬಂದ ಚಂದ್ರಬಾಬು ನಾಯ್ಡು

ನಿಯಂತ್ರಣ ಕೊಠಡಿಗೆ ಬಂದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದು , ಸ್ವತಃ ತಾವೇ ನಿಯಂತ್ರಣ ಕೊಠಡಿಯಲ್ಲಿ ಹಾಜರಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಪರಿಹಾರ ಕಾರ್ಯದ ಉಸ್ತುವಾರಿಯನ್ನು ಅವರೇ ಖುದ್ದು ವಹಿಸಿಕೊಂಡಿದ್ದಾರೆ.

ಕಂಟ್ರೋಲ್ ನಂಬರ್ ಸಂಖ್ಯೆಗಳಿವೆ

ದಕ್ಷಿಣದ ಕುಂಭಮೇಳ ಕಂಟ್ರೋಲ್ ನಂಬರ್ ಸಂಖ್ಯೆಗಳಿವೆ.

ಭದ್ರತಾ ವ್ಯವಸ್ಥೆ ಲೋಪ ಅಲ್ಲಗೆಳೆದ ಅಧಿಕಾರಿಗಳು

ಭದ್ರತಾ ವ್ಯವಸ್ಥೆ ಲೋಪ ಅಲ್ಲಗೆಳೆದ ಅಧಿಕಾರಿಗಳು

ಅಧಿಕಾರಿಗಳನ್ನು ರಕ್ಷಣೆ ಮಾಡುವತ್ತ ಪೊಲೀಸರು ಹೆಚ್ಚಿನ ಗಮನ ಹರಿಸಿದರು. ಈ ಸಂದರ್ಭದಲ್ಲಿ ತಡೆಗೋಡೆಗಳನ್ನು ಒದೆದು ಹಾಕಿ ಭಕ್ತರು ಮುನ್ನುಗ್ಗಿದರು. ಹೀಗಾಗಿ ಕಾಲ್ತುಳಿತ ಉಂಟಾಗಿ ಜನ ಪ್ರಾಣ ಕಳೆದುಕೊಂಡರು. ಘಟನೆಯಲ್ಲಿ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳ

ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳ

ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳ ಮಂಗಳವಾರ (ಜುಲೈ 12) ದಿಂದ 12 ದಿನಗಳ ಕಾಲ ನಡೆಯಲಿದೆ. ಪುಷ್ಕರಂನ ಮೊದಲ ದಿನವೇ ಕೊಟಗುಮ್ಮಂ ಘಾಟ್ ನಲ್ಲಿ ಕಾಲ್ತುಳಿತದಿಂದಾಗಿ ಗೋದಾವರಿ ನದಿಗೆ ರಕ್ತ ತರ್ಪಣವಾಗಿದೆ. ಚಿತ್ರದಲ್ಲಿ ಕಂಚಿ ಕಾಮಕೋಟಿ ಪೀಠದ ಶ್ರೀಗಳು.

ಪುಣ್ಯಸ್ನಾನಕ್ಕಾಗಿ ಬಂದ ಭಕ್ತಾದಿಗಳು

ಪುಣ್ಯಸ್ನಾನಕ್ಕಾಗಿ ಬಂದ ಭಕ್ತಾದಿಗಳು

ಬೃಹಸ್ಪತಿ(ಗುರು) ಸಿಂಹ ರಾಶಿ ಪ್ರವೇಶಿಸುವುದರಿಂದ ಈ ದಿನದಂದು ಶುಭ ಗಳಿಗೆಯಲ್ಲಿ ಪುಣ್ಯ ಸ್ನಾನ ಕೈಗೊಂಡರೇ ಸರ್ವಪಾಪ ನಾಶವಾಗುತ್ತದೆ, ಗುರುಬಲ ಸಿಗುತ್ತದೆ ಎಂದು ಭಕ್ತಾದಿಗಳ ನಂಬಿಕೆ. ಚಿತ್ರದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬ.

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕೂಡಾ ಪುಣ್ಯಸ್ನಾನ ಮಾಡಿ, ಪೂಜೆ ಸಲ್ಲಿಸಿದರು.

ಘಟನೆ ಬಗ್ಗೆ ಪ್ರಧಾನಿ ಮೋದಿಯಿಂದ ತೀವ್ರ ಸಂತಾಪ

ಘಟನೆ ಬಗ್ಗೆ ಪ್ರಧಾನಿ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಚಂದ್ರಬಾಬು ನಾಯ್ಡು ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.

ಚಂದ್ರಬಾಬು ನಾಯ್ಡು ಅವರಿಂದ ಪರಿಸ್ಥಿತಿ ಅವಲೋಕನ

ಚಂದ್ರಬಾಬು ನಾಯ್ಡು ಅವರಿಂದ ಪರಿಸ್ಥಿತಿ ಅವಲೋಕನ, ಗಾಯಾಳುಗಳ ಆರೋಗ್ಯ ವಿಚಾರಣೆ.

English summary
"This is very unfortunate and shocking. I have come here many times to review arrangements to ensure smooth conduct of the event. But some problems cropped up in execution," Naidu said. The Chief Minister also announced an ex-gratia of Rs 10 lakh for the family of the deceased and said, if necessary, he would would remain in Rajahmundry for the next 11 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X