ರಾಜಮಂಡ್ರಿ: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಭಕ್ತಾದಿಗಳು ಸಾವು
ರಾಜಮಂಡ್ರಿ, ಜುಲೈ 14: ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಆರಂಭಗೊಂಡ ಪುಷ್ಕರ ಸ್ನಾನ, ಮಹಾ ಕುಂಭಮೇಳದಲ್ಲಿ ದುರಂತ ಸಂಭವಿಸಿದೆ. ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳ ಮಂಗಳವಾರ (ಜುಲೈ 12) ದಿಂದ 12 ದಿನಗಳ ಕಾಲ ನಡೆಯಲಿದೆ. ಪುಷ್ಕರಂನ ಮೊದಲ ದಿನವೇ ಕೊಟಗುಮ್ಮಂ ಘಾಟ್ ನಲ್ಲಿ ಕಾಲ್ತುಳಿತದಿಂದಾಗಿ ಗೋದಾವರಿ ನದಿಗೆ ರಕ್ತ ತರ್ಪಣವಾಗಿದೆ.
ಅಸಂಖ್ಯ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ನದಿ ಕಡೆಗೆ ತೆರಳುವಾಗ ಸಂಭವಿಸಿದ ನೂಕು ನುಗ್ಗಲಿಗೆ ಸಿಕ್ಕಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿದವರ ಸಂಖ್ಯೆ 30 ದಾಟಿದೆ, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. [ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳ ಚಿತ್ರಗಳು]

12ವರ್ಷಕ್ಕೊಮ್ಮೆ ಕುಂಭಮೇಳ ಸಂಭವಿಸಿದರೂ 144 ವರ್ಷಕ್ಕೊಮ್ಮೆ 'ಗೋದಾವರಿ ಮಹಾ ಪುಷ್ಕರಂ' ಸಂಭವಿಸುತ್ತದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸೇರಿದಂತೆ ದೇಶದ ಹಲವೆಡೆಯಿಂದ ಭಕ್ತಾದಿಗಳು ಗೋದಾವರಿ ನದಿಯಲ್ಲಿ ಮಿಂದು ಪವಿತ್ರ ಸ್ನಾನ ಕೈಗೊಳ್ಳುತ್ತಾರೆ. [ನಾಸಿಕ್ ಕುಂಭಮೇಳದ ಸಂಭ್ರಮ]
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದರಲ್ಲದೆ, ಪರಿಹಾರ ಧನವಾಗಿ 10 ಲಕ್ಷ ರು ಕೂಡಾ ಘೋಷಿಸಿದ್ದಾರೆ. ದುರಂತಕ್ಕೆ ಜಿಲ್ಲಾಡಳಿತ ಮಾಡಿದ್ದ ವ್ಯವಸ್ಥೆಯ ಲೋಪವೇ ಕಾರಣ ಎಂಬ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಸರ್ಕಾರವನ್ನು ದೂಷಿಸುವುದು ಸರಿಯಲ್ಲ, ಸಂತ್ರಸ್ತರಿಗೆ ಸಹಕರಿಸಿ ಎಂದು ಆಂಧ್ರಪ್ರದೇಶ ಸರ್ಕಾರ ಕೇಳಿಕೊಂಡಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದು, ಸ್ವತಃ ತಾವೇ ನಿಯಂತ್ರಣ ಕೊಠಡಿಯಲ್ಲಿ ಹಾಜರಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಪರಿಹಾರ ಕಾರ್ಯದ ಉಸ್ತುವಾರಿಯನ್ನು ಅವರೇ ಖುದ್ದು ವಹಿಸಿಕೊಂಡಿದ್ದಾರೆ.












Click it and Unblock the Notifications