ರಾಹುಲ್ ಗಾಂಧಿಗೆ ಬ್ರಾಹ್ಮಣ ವಧುವಿನೊಂದಿಗೆ ಮದುವೆ:ಟಿಡಿಪಿ ಸಂಸದನ ಸಲಹೆ!
ಹೈದರಾಬಾದ್, ಜುಲೈ 06: 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬ್ರಾಹ್ಮಣ ಹುಡುಗಿಯೊಂದಿಗೆ ಮದುವೆ ಮಾಡಿಸಿ ಎಂದು ಸೋನಿಯಾರಿಗೆ ಸಲಹೆ ನೀಡಿದ್ದೆ' ಎಂದು ಟಿಡಿಪಿ ಸಂಸದ ದಿವಾಕರ್ ರೆಡ್ಡಿ ಹೇಳಿದ್ದಾರೆ.
ನಾನು ಕಾಂಗ್ರೆಸ್ಸಿನಲ್ಲಿದ್ದಾಗ, 'ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ನೆರವು ಬೇಕು. ಉತ್ತರ ಪ್ರದೇಶವನ್ನು ಆಳುತ್ತಿರುವುದೇ ಬ್ರಾಹ್ಮಣ ಸಮುದಾಯ. ಆದ್ದರಿಂದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಬ್ರಾಹ್ಮಣ ಕನ್ಯೆಯೊಂದಿಗೆ ಮದುವೆ ಮಾಡಿಸಿ ಎಂದು ಸೋನಿಯಾ ಗಾಂಧಿ ಅವರಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ' ಎಂದು ದಿವಾಕರ್ ರೆಡ್ಡಿ ಹೇಳಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಲೋಕಸಭಾ ಕ್ಷೇತ್ರದ ಟಿಡಿಪಿ(ತೆಲಗು ದೇಶಂ ಪಕ್ಷ) ಸಂಸದರಾಗಿರುವ ಜೆ ಸಿ ದಿವಾಕರ್ ರೆಡ್ಡಿ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಉತ್ತರ ಪ್ರದೇಶದ ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಎಂಬುವವರೊಂದಿಗೆ ರಾಹುಲ್ ಗಾಂಧಿ ವಿವಾಹವಾಗುತ್ತಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿಯನ್ನು ಖುದ್ದು ಅದಿತಿ ಸಿಂಗ್ ತಳ್ಳಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications