ನವವಿವಾಹಿತ ಟೆಕ್ಕಿ ನಾಪತ್ತೆ: ಆತ್ಮಹತ್ಯೆ?

26 ವರ್ಷದ ಟೆಕ್ಕಿ ಅಭಿಷೇಕ್ ಅಗರವಾಲ್ ನಾಪತ್ತೆಯಾಗಿರುವ ವ್ಯಕ್ತಿ. ಈತ ಲಕ್ಷ್ಮಿನಗರದ ಬಿಪಿಆರ್ ಪರ್ಲ್ ಹೈಟ್ ಅಪಾರ್ಟ ಮೆಂಟ್ ನಿವಾಸಿ. ಟೆಕ್ಕಿ ಅಭಿಷೇಕ್, ಭಾನುವಾರ ತನ್ನ ಬೈಕಿನಲ್ಲಿ ಮನೆಯಿಂದ ಹೊರಟವನು ಇನ್ನೂ ಪತ್ತೆಯಾಗಿಲ್ಲ.
ಸೋಮವಾರ ಟೆಕ್ಕಿ ಅಭಿಷೇಕ್ ಪತ್ನಿ ಕೋಮಲ್, ತನ್ನ ಮೇಲ್ ಚೆಕ್ ಮಾಡಿದಾಗ ಪತಿಯ ಮೇಲ್ ಕಣ್ಣಿಗೆ ಬಿದ್ದಿದೆ. ಅದರಲ್ಲಿ ತನ್ನ ದೇಹವನ್ನು ಹುಸೇನ್ ಸಾಗರದಿಂದ ಹೊರಹಾಕಬಹುದು ಎಂದು ತಿಳಿಸಿದ್ದಾನೆ.
ತಕ್ಷಣ ಸ್ಥಳೀಯ ಪೊಲೀಸರು ಹುಸೇನ್ ಸಾಗರವನ್ನೆಲ್ಲಾ ತಡಕಾಡಿದ್ದಾರೆ. ಆದರೆ ಟೆಕ್ಕಿ ಅಭಿಷೇಕ್ ದೇಹ ಪತ್ತೆಯಾಗಿಲ್ಲ. ಸ್ವಲ್ಪ ಹೊರಗೆ ಹೋಗಿ ಬರ್ತೀನಿ ಎಂದು ಹೇಳಿ ಹೋದ ಟೆಕ್ಕಿ ಅಭಿಷೇಕ್, ಸುಮಾರು ಹೊತ್ತಿನ ಬಳಿಕ ರಾತ್ರಿ ವೇಳೆಗೆ ಮನೆಗೆ ಮರಳುತ್ತಿರುವುದಾಗಿ ಹೇಳಿದ್ದಾನೆ. ಆ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸ್ನೇಹಿತರನ್ನೆಲ್ಲ ವಿಚಾರಿಸದರೂ ಏನೂ ಪ್ರಯೋಜನವಾಗಿಲ್ಲ.












Click it and Unblock the Notifications