ಮ್ಯೂಸಿಕ್ ಚಾನೆಲ್ ನಿರೂಪಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Posted By:
Subscribe to Oneindia Kannada

ಸಿಕಂದರಾಬಾದ್ (ತೆಲಂಗಾಣ), ಮಾರ್ಚ್ 16: ಮ್ಯೂಸಿಕ್ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ 23 ವರ್ಷ ವಯಸ್ಸಿನ ನಿರೋಶಾ ಅವರು ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸನ್ ನೆಟ್ವರ್ಕ್ ಅಡಿಯಲ್ಲಿ ಬರುವ ಜೆಮಿನಿ ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿದ್ದ ನಿರೋಶಾ ಅವರು ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಭಾವಿ ಪತಿ ಜತೆ ಚಾಟ್ ಮಾಡುತ್ತಾ ನಿರೋಶಾ ಆತ್ಮಹತ್ಯೆ]

Gemini Music Channel Anchor Nirosha Commits Suicide

ಸಿಕಂದರಾಬಾದಿನ ಸಿಂಧಿ ಕಾಲೋನಿಯ ಮಹಿಳಾ ವಸತಿ ಗೃಹ (ಪಿಜಿ)ದಲ್ಲಿ ವಾಸವಿದ್ದ ನಿರೋಶಾ ವಿಡಿಯೋ ಜಾಕಿಯಾಗುವುದಕ್ಕೂ ಮುನ್ನ ಕೆಲ ಸಮಯ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಬುಧವಾರ ಮಧ್ಯರಾತ್ರಿ ನಂತರ ಕೆನಡಾದಲ್ಲಿರುವ ತನ್ನ ಭಾವಿ ಪತಿಯೊಡನೆ ನಿರೋಶಾ ವಿಡಿಯೋ ಚಾಟ್ ಆರಂಭಿಸಿದ್ದಾರೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಲ್ಲೇಶ್ವರಪುರಂ ಗ್ರಾಮದವರಾದ ನಿರೋಷಾ ಅವರು ನಿರೂಪಣೆ ಮೂಲಕ ಜನ ಮನ ಗೆದ್ದಿದ್ದರು. ಘಟನೆ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gemini Music Channel Anchor Nirosha committed suicide at Sindhi Colony, Secunderabad today. She was 23.
Please Wait while comments are loading...