ಸಂಕಷ್ಟ ನಿವಾರಣೆಗಾಗಿ ತಿಮ್ಮಪ್ಪನಿಗೆ ಡಿವಿಎಸ್ ಮೊರೆ

ತಿರುಮಲ, ಅ.5: ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಸಂಸಾರ ಸಮೇತರಾಗಿ ಭಾನುವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಪುತ್ರ ಕಾರ್ತಿಕ್ ಗೌಡ ಅವರಿಗೆ ಬಂದಿರುವ ಸಂಕಷ್ಟಗಳನ್ನು ಪರಿಹರಿಸುವಂತೆ ಏಳುಬೆಟ್ಟದ ಒಡೆಯ ವೆಂಕಟೇಶ್ವರ ದೇವರಲ್ಲಿ ಭಕ್ತಿಯಿಂದ ಕೇಳಿಕೊಂಡಿದ್ದಾರೆ.

ಡಿವಿ ಸದಾನಂದ ಗೌಡ, ಕಾರ್ತಿಕ್ ಗೌಡ ಹಾಗೂ ಡಾಟಿ ಸದಾನಂದ ಗೌಡ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂನ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಸದಾನಂದ ಗೌಡ ಅವರ ಕುಟುಂಬದ ಜೊತೆಗೆ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವ ಮಾಣಿಕ್ಯಾಲ ರಾವ್ ಅವರು ಕೂಡಾ ಉಪಸ್ಥಿತರಿದ್ದರು.

ನಟಿ ಮೈತ್ರಿಯಾ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ಸದಾನಂದ ಗೌಡ ಅವರ ಕುಟುಂಬ ತಿರುಪತಿಗೆ ಭೇಟಿ ನೀಡಿ ಸಮಸ್ಯೆಗಳ ನಿವಾರಣೆಗಾಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು ಮಂಜೂರು]

ರಂಗಾನಾಯಕುಲ ಮಂಟಪದಲ್ಲಿ ವೇದ ಘೋಷಗಳೊಂದಿಗೆ ಇಬ್ಬರು ಗಣ್ಯರಿಗೆ ವೇದ ಪಂಡಿತರು ಆಶೀರ್ವಚನ ನೀಡಿದರು. ಶ್ರೀವಾರಿ ವಸ್ತ್ರವನ್ನು ನೀಡಿ ಸದಾನಂದ ಗೌಡ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಆರ್ ಸೆಲ್ವಂ, ವೆಂಕಟಯ್ಯ, ದಾಮೋದರ್, ರಾಮರಾವ್ ಮುಂತಾದವರು ಹಾಜರಿದ್ದರು. ಸದಾನಂದ ಗೌಡ ಹಾಗೂ ಅವರ ಕುಟುಂಬದ ತಿರುಪತಿ ದೇಗುಲ ಭೇಟಿ ಚಿತ್ರಗಳು ನಿಮ್ಮ ಮುಂದೆ

ಆಂಧ್ರದ ಸಚಿವರಿಗೆ ದೇವರ ಪ್ರಸಾದ

ಆಂಧ್ರದ ಸಚಿವರಿಗೆ ದೇವರ ಪ್ರಸಾದ

ಆಂಧ್ರದ ಸಚಿವರಿಗೆ ದೇವರ ಪ್ರಸಾದ ಹಾಗೂ ಶ್ರೀವಾರಿ ವಸ್ತ್ರವನ್ನು ನೀಡಿ ಗೌರವಿಸಲಾಯಿತು

ಸದಾನಂದ ಗೌಡರಿಗೆ ದೇವರ ಪ್ರಸಾದ ನೀಡಿಕೆ

ಸದಾನಂದ ಗೌಡರಿಗೆ ದೇವರ ಪ್ರಸಾದ ನೀಡಿಕೆ

ಶ್ರೀವಾರಿ ವಸ್ತ್ರವನ್ನು ನೀಡಿ ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ಜೊತೆಯಲ್ಲಿ ಪತ್ನಿ ಡಾಟಿ ಹಾಗೂ ಪುತ್ರ ಕಾರ್ತಿಕ್ ಉಪಸ್ಥಿತರಿದ್ದರು.

ವೆಂಕಟೇಶ್ವರ ದೇವರ ಚಿತ್ರ ನೀಡಲಾಯಿತು

ವೆಂಕಟೇಶ್ವರ ದೇವರ ಚಿತ್ರ ನೀಡಲಾಯಿತು

ಕೇಂದ್ರ ಸಚಿವ ಸದಾನಂದ ಗೌಡರಿಗೆ ದೇಗುಲ ಭೇಟಿ ಸ್ಮರಣಾರ್ಥ ವೆಂಕಟೇಶ್ವರ ದೇವರ ಚಿತ್ರ ನೀಡಲಾಯಿತು

ದೇಗುಲದ ಹೊರ ಭಾಗದಲ್ಲಿ ಗಣ್ಯರು

ದೇಗುಲದ ಹೊರ ಭಾಗದಲ್ಲಿ ಗಣ್ಯರು

ದೇಗುಲದ ಹೊರ ಭಾಗದಲ್ಲಿ ಸದಾನಂದ ಗೌಡರ ಜೊತೆ ಗಣ್ಯರು ಹಾಗೂ ಟಿಟಿಡಿ ಸದಸ್ಯರು

ರಾಜಗೋಪುರಕ್ಕೆ ನಮಿಸಿದ ಡಿವಿಎಸ್

ರಾಜಗೋಪುರಕ್ಕೆ ನಮಿಸಿದ ಡಿವಿಎಸ್

ತಿರುಮಲ ತಿರುಪತಿ ದೇಗುಲ ರಾಜಗೋಪುರಕ್ಕೆ ನಮಿಸಿದ ಡಿವಿ ಸದಾನಂದ ಗೌಡ.

ದೇಗುಲದ ಮುಂಭಾಗದಲ್ಲಿ ಸದಾನಂದ ಗೌಡ

ದೇಗುಲದ ಮುಂಭಾಗದಲ್ಲಿ ಸದಾನಂದ ಗೌಡ

ದೇಗುಲದ ಮುಂಭಾಗದಲ್ಲಿ ಸದಾನಂದ ಗೌಡ ಹಾಗೂ ಅವರ ಕುಟುಂಬ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+