ಶಾಲೆ ಮೇಲೆ ರೇಡ್ ಮಾಡಿ ಪೊಲೀಸರ ಅತಿಥಿಯಾದ ನಕಲಿ ಎಸಿಬಿ ಅಧಿಕಾರಿ!
ಹೈದರಾಬಾದ್, ಜೂನ್ 13: ತಾನು ಎಸಿಬಿ ಪೊಲೀಸ್ ಎಂದು ಸುಳ್ಳು ಹೇಳಿ, ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಣವನ್ನು ದೋಚಲು ಪ್ರಯತ್ನಿಸಿದ ವ್ಯಕ್ತಿಯೋರ್ವನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹನುಮಂತ ರಾವ್ ಎಂಬ ವ್ಯಕ್ತಿ ಹೈದರಾಬಾದಿನ ಚಂದಾ ನಗರದ ಖಾಸಗಿ ಶಾಲೆಯೊಂದಕ್ಕೆ ಬಂದು, ತಾನು ಎಸಿಬಿ ಅಧಿಕಾರಿ ಎಂದು ಹೇಳಿ ಶಾಲೆಯಲ್ಲಿದ್ದ ಸುಮಾರು 1.5 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ದೋಚಲು ಪ್ರಯತ್ನಿಸಿದ್ದಾನೆ.
ಆದರೆ ಅನುಮಾನ ಬಂದ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ ನಕಲಿ ಅಧಿಕಾರಿ ಎಂಬುದನ್ನು ಪತ್ತೆ ಮಾಡಿದ್ದಾರೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.

ಕೆಲವು ತಿಂಗಳ ಹಿಂದೆ ರಾಜಸ್ಥಾನದಲ್ಲೂ ಇಂಥದೇ ಘಟನೆ ನಡೆದಿತ್ತು. 23 ವರ್ಷದ ವ್ಯಕ್ತಿಯೊಬ್ಬ ತಾನು ಎಸಿಬಿ ಅಧಿಕಾರಿ ಎಂದು ಹೇಳಿ ಶಾಲೆಯ ಮೇಲೆ ದಾಳಿ ನಡೆಸಿ ಸಿಕ್ಕಿ ಹಾಕಿಕೊಂಡಿದ್ದ.












Click it and Unblock the Notifications