• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನ ಮಗನನ್ನು ಸುಟ್ಟುಬಿಡಿ: ಅತ್ಯಾಚಾರಿಯ ತಾಯಿಯ ಆಕ್ರೋಶ

|
   ಮಗನ ಪೈಶಾಚಿಕ ಕೃತ್ಯವನ್ನು ಖಂಡಿಸಿದ ತಾಯಿ | Oneindia Kannada

   ಹೈದರಾಬಾದ್, ಡಿಸೆಂಬರ್ 01: ಇತ್ತೀಚಿಗಷ್ಟೆ ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಸುಟ್ಟಿರುವ ಘಟನೆ ದೇಶದಾದ್ಯಂತ ಅಕ್ರೋಶವನ್ನುಂಟು ಮಾಡಿದೆ.

   ಇದರ ನಡುವೆಯೇ ಅತ್ಯಾಚಾರಿಯೋರ್ವನ ತಾಯಿ ತನ್ನ ಮಗನ ಹೇಯ ಕೃತ್ಯವನ್ನು ಖಂಡಿಸಿ, ತನ್ನ ಮಗನನ್ನು ಅದೇ ರೀತಿ ಸುಟ್ಟು ಸಾಯಿಸಿಬಿಡಿ ಎಂದಿದ್ದಾಳೆ. ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿಗೆ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯಾಚಾರವೆಸಗಿ ಕೊಲೆಮಾಡಲಾಗಿತ್ತು.

   ತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತು

   ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಲಾರಿ ಕ್ಲೀನರ್ ಗಳಾದ ನವೀನ್, ಚೆನ್ನಕೇಶವಲು ಮತ್ತು ಶಿವ ಎಂಬುವವರು ಸೇರಿಕೊಂಡು ಪ್ರಿಯಾಂಕಳನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೇಸಗಿದ್ದರು, ಆಕೆಯನ್ನು ಸುಟ್ಟು ಹಾಕಿದ್ದರು.

   ಗಲ್ಲಿಗೇರಿಸಲು ಸಾರ್ವಜನಿಕರ ಒತ್ತಾಯ

   ಗಲ್ಲಿಗೇರಿಸಲು ಸಾರ್ವಜನಿಕರ ಒತ್ತಾಯ

   ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಬಾದ್ ಪೊಲೀಸರು ಎಲ್ಲ ನಾಲ್ಕು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಇವರಿಗೆ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

   ಈ ಹತ್ಯಾಚಾರ ಪ್ರಕರಣವು ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಪ್ರಿಯಾಂಕ್ ಸಾವಿಗೆ ನ್ಯಾಯ ಸಿಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಎಲ್ಲ ಆರೋಪಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಿ ಎಂದು ಪ್ರತಿಭಟಿಸುತ್ತಿದ್ದಾರೆ.

   ಪಶುವೈದ್ಯೆಯ ಅತ್ಯಾಚಾರ, ಕೊಲೆ

   ಪಶುವೈದ್ಯೆಯ ಅತ್ಯಾಚಾರ, ಕೊಲೆ

   ಇದರ ನಡುವೆಯೇ ಅತ್ಯಾಚಾರಿಯೋರ್ವನ ತಾಯಿ ತನ್ನ ಮಗನ ಹೇಯ ಕೃತ್ಯವನ್ನು ಖಂಡಿಸಿ, ತನ್ನ ಮಗನನ್ನು ಅದೇ ರೀತಿ ಸುಟ್ಟು ಸಾಯಿಸಿಬಿಡಿ ಎಂದಿದ್ದಾಳೆ. ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿಗೆ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯಾಚಾರವೆಸಗಿ ಕೊಲೆಮಾಡಲಾಗಿತ್ತು.

   ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?

   ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಲಾರಿ ಕ್ಲೀನರ್ ಗಳಾದ ನವೀನ್, ಚೆನ್ನಕೇಶವಲು ಮತ್ತು ಶಿವ ಎಂಬುವವರು ಸೇರಿಕೊಂಡು ಪ್ರಿಯಾಂಕಳನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೇಸಗಿದ್ದರು, ಆಕೆಯನ್ನು ಸುಟ್ಟು ಹಾಕಿದ್ದರು.

   ಹೆಣ್ಣಿನ ಮೇಲಿನ ಕ್ರೌರ್ಯ ಕೊನೆಯಾಗಲಿ

   ಹೆಣ್ಣಿನ ಮೇಲಿನ ಕ್ರೌರ್ಯ ಕೊನೆಯಾಗಲಿ

   ನನ್ನ ಮಗ ತಪ್ಪು ಮಾಡಿದ್ದು ಸಾಬೀತಾದರೆ ಆತನಿಗೆ ಶಿಕ್ಷೆ ಆಗಬೇಕು ಎನ್ನುವರಲ್ಲಿ ನಾನು ಮೊದಲಿಗಳು, ಈ ರೀತಿಯಾಗಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು, ಯಾರು ಇಂತಹ ಕೃತ್ಯಕ್ಕೆ ಕೈ ಹಾಕದ ರೀತಿ ಮಾಡಬೇಕು ಎಂದು ಆಕ್ರೋಶಭರಿತರಾದರು.

   ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?

   ಈ ದುಷ್ಕೃತ್ಯಕ್ಕೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಾರ್ವಜನಿಕರ ಸಿಡೆದೆದ್ದಿದ್ದಾರೆ. ಅತ್ಯಾಚಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ, ಅವರ ವಿಚಾರಣೆಯ ಅಗತ್ಯವಿಲ್ಲ. ಕೂಡಲೇ ಅವರನ್ನು ಗಲ್ಲಿಗೇರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟಿಸುತ್ತಿದ್ದಾರೆ.

   ಆರೋಪಿಗಳ ತಪ್ಪೋಪ್ಪಿಗೆ

   ಆರೋಪಿಗಳ ತಪ್ಪೋಪ್ಪಿಗೆ

   ಇವರಿಗೆ ಜೀವಾವಧಿ ಶಿಕ್ಷೆ ನೀಡಿ ಜೈಲಿನಲ್ಲಿ ಆರಾಮವಾಗಿ ಇರಲು ಬಿಡಬಾರದು, ಸಾಯುವತನಕ ಜೈಲಿನಲ್ಲಿ ಆರಾಮವಾಗಿ ಇರುತ್ತಾರೆ, ಅದರ ಬದಲು ಇಂತಹ ಕಾಮುಕರ ಅಟ್ಟಹಾಸವನ್ನು ಅಂತ್ಯಗೊಳಿಸಬೇಕೆಂದರೆ ಬೇಗನೇ ಗಲ್ಲು ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

   ಈ ಆರೋಪಿಗಳನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನಾಲ್ವರು ಅರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯವು ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

   English summary
   The Recent Rape And Incineration Of a Veterinarian In Telangana Has Caused Outrage Across The Country.In The Meantime, The Mother Of a Rapist Has Condemned Her Sons Abuse And Told Her To Burn Her Son In The Same Manner.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X