Venkatesh Iyer: ಕೊನೆಗೂ ನಟ ಅಲ್ಲು ಅರ್ಜುನ್ ಮಗನ ಮಹದಾಸೆ ಈಡೇರಿಸಿದ ಆರ್‌ಸಿಬಿ ಸ್ಟಾರ್ ಆಟಗಾರ ವೆಂಕಿ

Venkatesh Iyer: ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ವೆಂಕಟೇಶ್ ಅಯ್ಯರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಐಪಿಎಲ್‌ ಬ್ಯೂಸಿ ನಡುವೆಯೇ ಅವರು ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಪುತ್ರ ಅಯಾನ್‌ ಮಹದಾಸೆಯೊಂದನ್ನ ಈಡೇರಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಎಲ್ಲಡೆ ಭಾರಿ ವೈರಲ್‌ ಆಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಇತ್ತೀಚೆಗೆ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದದ್ದು, ಅವರ ಪುತ್ರ ಅಲ್ಲು ಅಯಾನ್‌ಗೆ ವಿಶೇಷ ಉಡುಗೊರೆಯೊನ್ನು ನೀಡಿದ್ದರು. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Venkatesh Iyer Gifts Signed RCB Jersey to Allu Arjun s Son Ayaan Photos Go Viral on Social media

ಅಲ್ಲು ಪುತ್ರನಿಗೆ ಅಯ್ಯರ್ ವಿಶೇಷ ಉಡುಗೊರೆ

ಶನಿವಾರ (ಮೇ 23) ನಡೆದ ಈ ಭೇಟಿ ವೇಳೆ ವೆಂಕಟೇಶ್ ಅಯ್ಯರ್ ಅವರು ಅಲ್ಲು ಅರ್ಜುನ್ ಅವರ ಪುತ್ರ ಅಲ್ಲು ಅಯಾನ್‌ಗೆ ತಮ್ಮ ಸಹಿ ಇರುವ ವಿಶೇಷ ಆರ್‌ಸಿಬಿ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಯಾನ್ ಅವರು ಆರ್‌ಸಿಬಿ ತಂಡ ಮತ್ತು ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿಯಾಗಿದ್ದು, ಜರ್ಸಿ ಪಡೆದಾಗ ಅವರ ಸಂತೋಷ ಮುಗಿಲುಮುಟ್ಟಿತ್ತು.

ಅಲ್ಲು ಭೇಟಿಯಾದ ಅಯ್ಯರ್ ಫೋಟೋ ವೈರಲ್‌

ಅಲ್ಲು ಅರ್ಜುನ್ ಅವರು ಈ ಭೇಟಿಯ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅಲ್ಲು ಅರ್ಜುನ್ ಅವರು ವೆಂಕಟೇಶ್ ಅಯ್ಯರ್‌ಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಮತ್ತೊಂದು ಫೋಟೋದಲ್ಲಿ ಅಯಾನ್ ಅವರು ವೆಂಕಟೇಶ್ ಅಯ್ಯರ್ ಅವರ ಸಹಿ ಇರುವ ಜರ್ಸಿಯನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಈ ಫೋಟೋ ಭಾರಿ ವೈರಲ್‌ ಆಗುತ್ತಿದೆ.

ಅಲ್ಲು ಅರ್ಜುನ್ ಹೇಳಿರುವುದೇನು?

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್, 'ಭಾರತೀಯ ಸ್ಟಾರ್ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷ ತಂದಿದೆ. ಅಲ್ಲು ಅಯಾನ್‌ಗೆ ವಿಶೇಷ ಸಹಿ ಇರುವ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ ಅವರಿಗೆ ನನ್ನ ಕಡೆಯಿಂದ ವಿಶೇಷ ಧನ್ಯವಾದಗಳು,' ಎಂದು ಬರೆದುಕೊಂಡಿದ್ದಾರೆ.

ಅಲ್ಲು ಅಯಾನ್ ಆರ್‌ಸಿಬಿಯ ಕಟ್ಟಾ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಳೆದ ವರ್ಷ ಆರ್‌ಸಿಬಿ ಪಂದ್ಯ ಗೆದ್ದಾಗ ಅವರು ಭಾವುಕರಾಗಿ ತಮ್ಮ ತಲೆಯ ಮೇಲೆ ನೀರು ಸುರಿದುಕೊಂಡು ಸಂಭ್ರಮಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆ ಸಮಯದಲ್ಲಿ ಅಯಾನ್, 'ನನಗೆ ಕೊಹ್ಲಿ ಎಂದರೆ ತುಂಬಾ ಇಷ್ಟ, ಅವರ ಕಾರಣದಿಂದಲೇ ನಾನು ಕ್ರಿಕೆಟ್ ಪ್ರೀತಿಸಲು ಶುರುಮಾಡಿದೆ,' ಎಂದು ಹೇಳಿದ್ದರು.

ಅಲ್ಲು ಅರ್ಜುನ್ ಸದ್ಯ ಅಟ್ಲೀ ನಿರ್ದೇಶನದ 'ರಾಕಾ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತ ವೆಂಕಟೇಶ್ ಅಯ್ಯರ್ ಈ ಬಾರಿಯ ಐಪಿಎಲ್‌ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 73 ರನ್ ಗಳಿಸಿ ತಂಡವು ಪ್ಲೇ ಆಫ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ ಅವರ ಈ ಆತ್ಮೀಯ ಭೇಟಿಯು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+