Bengaluru Weather: ಇಂದು 115 ವಾರ್ಡ್‌ಗಳಲ್ಲಿ ವರ್ಷಧಾರೆ, ಮುಂದಿನ 48 ಗಂಟೆ ಭಾರೀ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ಮುಂಗಾರು ಮಳೆ ಆಗಮಿಸುವುದು ತಡವಾದರೂ ಸಹಿತ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಿಂದ ಉತ್ತಮ ಮಳೆ ದಾಖಲಾಗಿದೆ. ರಾತ್ರಿ 11.30 ಗಂಟೆ ಹೊತ್ತಿಗೆ ನಗರದ ಸುಮಾರು 115 ವಾರ್ಡ್‌ಗಳಲ್ಲಿ ಜಿಟಿ ಜಿಟಿ ಮಳೆ ದಾಖಲಾಗಿದೆ. ಕೆಲವೆಡೆ ಗುಡುಗು ಮಿಂಚು ಸಹಿತ ಜೋರು ಮಳೆ ಆಗಿದೆ. ಈ ಮೂಲಕ ನಗರವೆಲ್ಲ ತಂಪು ವಾತಾವರಣದಿಂದ ಕೂಡಿದ್ದು, ಬೇಸಿಗೆ ಸಂಪುರ್ಣ ಮರೆಯಾದ ಅನುಭವವಾಗಿದೆ. ಮುಂದಿನ 5 ದಿನ ಹವಾಮಾನ ವರದಿ ಇಲ್ಲಿ ನೀಡಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮನೋರಾಯನಪಾಳ್ಯದಲ್ಲಿ ಗುಡುಗು ಮಿಂಚು ಸಹಿತ ಅತ್ಯಧಿಕ 53 ಮಿಲಿ ಮೀಟರ್ ಮಳೆ ಆಗಿದೆ. ಬೆಳಗ್ಗೆಯಿಂದ ಚುರುಕಿನ ಬಿಸಿಲು ಕಂಡು ಬಂತಾದರೂ ಮಧ್ಯಾಹ್ನ ಬಳಿಕ ಮಬ್ಬು ವಾತಾವರಣ ನಿರ್ಮಾಣವಾಯಿತು. ರಾತ್ರಿ ಹೊತ್ತಿಗೆ ಅನೇಕ ಪ್ರದೇಶಗಳಲ್ಲಿ ಮಳೆ ಆಯಿತು. ಮುಂದಿನ ಎರಡು ದಿನ ಇದೇ ರೀತಿ ಮಳೆ ಆಗಲಿದೆ.

Heavy Rain

ನಗರದಲ್ಲಿ ಮುಂದಿನ ಐದು ದಿನಗಳ ಪೈಕಿ ಮೇ 27, 28ರಂದು ಕ್ರಮವಾಗಿ ಬುಧವಾರ ಮತ್ತು ಗುರುವಾರ ಎರಡು ದಿನ ಸಾಧಾರಣದಿಂದ ಭಾರೀ ಮಳೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ವೇಳೆ ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

Monsoon Rain: ಮುಂಗಾರು ಆಗಮನ ವಿಳಂಬ, ಜೂನ್ ಮೊದಲ ವಾರ ಗುಡ್‌ನ್ಯೂಸ್ ಸಾಧ್ಯತೆ: ಐಎಂಡಿ
Monsoon Rain: ಮುಂಗಾರು ಆಗಮನ ವಿಳಂಬ, ಜೂನ್ ಮೊದಲ ವಾರ ಗುಡ್‌ನ್ಯೂಸ್ ಸಾಧ್ಯತೆ: ಐಎಂಡಿ

115 ವಾರ್ಡ್‌ಗಳಲ್ಲಿ ಮಳೆ ಸಿಂಚನ, ಬೆಂಗಳೂರು ಕೂಲ್.. ಕೂಲ್

ಬಹುತೇಕ ಬೆಂಗಳೂರಿನಾದ್ಯಂತ ಹಗುರದಿಂದ ಸಾಧಾರಣ ಮಳೆ ಆಗಿದ್ದು, ವಾತಾವರಣ ಕೂಲ್ ಆಗಿದೆ. ಮನೋರಾಯನಪಾಳ್ಯ ಹೊರತಾಗಿ ಬಗಲಗುಂಟೆ 49.5ಮಿಲಿ ಮೀಟರ್, ಚೌಡೇಶ್ವರಿ 46 ಮಿಲಿ ಮೀಟರ್, ದೊಡ್ಡಬಿದರಕಲ್ಲು 45.5 ಮಿಲಿ ಮೀಟರ್, ಬಸವೇಶ್ವರ ನಗರ 45 ಮಿಲಿ ಮೀಟರ್, ಶೆಟ್ಟಿಹಳ್ಳಿ 44 ಮಿಲಿ ಮೀಟರ್, ಯಲಹಂಕ 44 ಮಿಲಿ ಮೀಟರ್, ನಾಗಪುರ 41.5ಮಿಲಿ ಮೀಟರ್, ಪೀಣ್ಯ ಕೈಗಾರಿಕೆ ಪ್ರದೇಶ 40ಮಿಲಿ ಮೀಟರ್, ಹೆರೋಹಳ್ಳಿ 38 ಮಿಲಿ ಮೀಟರ್, ಅಟ್ಟೂರು 37.5ಮಿಲಿ ಮೀಟರ್, ಬ್ಯಾಟರಾಯನಪುರ 36.5 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ತಿಳಿಸಿದೆ.

ಮುಂದಿನ ಎರಡು ದಿನಗಳ (ಮೇ 28) ಬಳಿಕ ನಗರಾದ್ಯಂತ ಅಲ್ಲಲ್ಲಿ ಹಗರು ಮಳೆ ಸುರಿಯಲಿದೆ. ಮುಂಗಾರು ಮಳೆ ಪ್ರವೇಶವಾಗುತ್ತಿದ್ದಂತೆ ಜೂನ್ ಆರಂಭದಲ್ಲಿ ವ್ಯಾಪಕ ಮಳೆ ಬರುವ ನಿರೀಕ್ಷೆ ಇದೆ. ಹಾಗಾದಲ್ಲಿ ಜೂನ್ ಮೊದಲ ವಾರ ಪೂರ್ತಿ ಬೆಂಗಳೂರು ನಗರವು ಭಾರೀ ಮಳೆಗೆ ಸಾಕ್ಷಿಯಾಗಬಹುದೆಂದು ಊಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+