ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಮಾಸ್ಟರ್ ಪ್ಲಾನ್

|
Google Oneindia Kannada News

ಹೈದರಾಬಾದ್‌, ಮೇ 11: ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ, ಇದೀಗ ಪಕ್ಕದ ತೆಲಂಗಾಣದ ಮೇಲೆ ತನ್ನ ದೃಷ್ಟಿಯನ್ನಿರಿಸಿದೆ. ದುಬ್ಬಾಕ ಮತ್ತು ಹುಜೂರಾಬಾದ್ ಉಪಚುನಾವಣೆಯಲ್ಲಿ ಸಾಧಿಸಿದ ಗೆಲುವು ಸಾಧಿಸಿದ ಜೋಷ್‌ನಲ್ಲಿದ್ದು, ಪಾದಯಾತ್ರೆಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ತಲುಪುವುದಕ್ಕೆ ಪ್ರಯತ್ನಿಸುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದೇ ಸಮಯದಲ್ಲಿ ಕೆಸಿಆರ್‌ ಸರಕಾರದ ಮೇಲೆ ಒತ್ತಡ ಏರುವುದಕ್ಕೆ ಕೇಂದ್ರ ಸರಕಾರ ತನ್ನ ಬಲವನ್ನು ಪ್ರಯೋಗಿಸಲು ಬಯಸುತ್ತಿದೆ ಎಂಬ ಸುದ್ದಿಯೂ ಇದೆ.

ತೆಲಂಗಾಣ ರಾಜ್ಯದ ಮೇಲೆ ತನ್ನ ಗಮನ ಹರಿಸುತ್ತಿರುವ ಬಿಜೆಪಿ ಹೈಕಮಾಂಡ್‌ ಈಗಾಗಲೆ ರಾಜ್ಯ ಮಟ್ಟದ ನಾಯಕರನ್ನು ರಾಜಕೀಯ ರಂಗಕ್ಕೆ ಇಳಿಸಿದ್ದು, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಿಜೆಪಿ ರಾಜ್ಯಧ್ಯಕ್ಷ ಬಂಡಿ ಸಂಜಯ ನಡೆಸುತ್ತಿರುವ ಪ್ರಜಾ ಸಂಗ್ರಾಮ್‌ ಯಾತ್ರೆಯಲ್ಲಿ ಈಗಾಗಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಾಲ್ಗೊಂಡು ತೆಲಂಗಾಣ ಸರಕಾರದ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ತೆಲಂಗಾಣದಲ್ಲಿ ಬಿಜೆಪಿ ಕೈಯಲ್ಲೇ ಟಿಆರ್‌ಎಸ್ ರಿಮೋಟ್ ಕಂಟ್ರೋಲ್!ತೆಲಂಗಾಣದಲ್ಲಿ ಬಿಜೆಪಿ ಕೈಯಲ್ಲೇ ಟಿಆರ್‌ಎಸ್ ರಿಮೋಟ್ ಕಂಟ್ರೋಲ್!

 ತೆಲಂಗಾಣದತ್ತ ಕೇಂದ್ರದ ಚಿತ್ತ

ತೆಲಂಗಾಣದತ್ತ ಕೇಂದ್ರದ ಚಿತ್ತ

ಇನ್ನೂ ಇದೇ ತಿಂಗಳ 14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲಂಗಾಣ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರೀಯ ನಾಯಕರ ಭೇಟಿಯ ಜೊತೆಗೆ ತೆಲಂಗಾಣ ರಾಜ್ಯದಲ್ಲಿ ಕೇಳಿ ಬರುತ್ತಿರುವ ಭ್ರಷ್ಟಾಚಾರ ಆರೋಪದ ಕುರಿತು ವರದಿ ಸಲ್ಲಿಸಲು ಕೇಂದ್ರೀಯ ತನಿಖಾ ಸಮಿತಿ ರಚನೆ ಹಾಗೂ ತನಿಖಾಧಿಕಾರಿಗಳ ನೇಮಕ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಗಿದೆ.

ಅಮಿತ್ ಶಾ ಮೇ ತಿಂಗಳಲ್ಲಿ 7 ರಾಜ್ಯಗಳಿಗೆ ಭೇಟಿ: ಯಾಕೆ ಗೊತ್ತಾ?ಅಮಿತ್ ಶಾ ಮೇ ತಿಂಗಳಲ್ಲಿ 7 ರಾಜ್ಯಗಳಿಗೆ ಭೇಟಿ: ಯಾಕೆ ಗೊತ್ತಾ?

 ಭ್ರಷ್ಟಾಚಾರ ಆರೋಪ ಮಾಡುತ್ತಲೇ ರಾಜ್ಯ ರಾಜಕೀಯಕ್ಕೆ ಕೇಂದ್ರ ಎಂಟ್ರಿ

ಭ್ರಷ್ಟಾಚಾರ ಆರೋಪ ಮಾಡುತ್ತಲೇ ರಾಜ್ಯ ರಾಜಕೀಯಕ್ಕೆ ಕೇಂದ್ರ ಎಂಟ್ರಿ

ತೆಲಂಗಾಣ ರಾಜ್ಯದಲ್ಲಿ ಮಿಷನ್‌ ಭಗೀರಥ ಹೆಸರಿನಲ್ಲಿ ಭಾರೀ ಭ್ರಷ್ಟಚಾರ ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ಬಕ್ಕಾ ಜುಡ್ಸನ್ ನೀಡಿದ ದೂರಿನ ಮೇರೆಗೆ ಜಲ ಜೀವನ್‌ ಆಯೋಗ ನಡೆಸಿದ ಸಮೀಕ್ಷೆಯ ವರದಿಯನ್ನು ತನಿಖೆ ಮಾಡಲು ಕೇಂದ್ರ ಸರಕಾರ ತನಿಖಾಧಿಕಾರಿಗಳನ್ನು ನೇಮಿಸಿದೆ. ಮತ್ತೊಂದೆಡೆ, ಧಾನ್ಯ ಖರೀದಿಯಲ್ಲಿನ ಅವ್ಯವಹಾರದ ಆರೋಪಗಳ ಬಗ್ಗೆ ಕೇಂದ್ರೀಯ ಹಣಕಾಸು ಇಲಾಖೆ ತನಿಖೆ ನಡೆಸುತ್ತಿದೆ. ಯಾವುದೇ ಸಮಯದಲ್ಲಿ ಸಿಬಿಐ ಕೂಡ ದಾಳಿ ಮಾಡುವ ಸಂಭವವಿದೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ.

 ತೆಲಂಗಾಣದಲ್ಲಿ ಭ್ರಷ್ಟಾಚಾರದ ವಿರುದ್ದ ಕೇಂದ್ರದ ಕ್ರಮ

ತೆಲಂಗಾಣದಲ್ಲಿ ಭ್ರಷ್ಟಾಚಾರದ ವಿರುದ್ದ ಕೇಂದ್ರದ ಕ್ರಮ

ಒಂದು ಸಣ್ಣ ಅವಕಾಶ ಸಿಕ್ಕರೂ ತೆಲಂಗಾಣ ಸರರಕಾರ ಮಾಡಿರುವ ಭ್ರಷ್ಟಚಾರವನ್ನು ಅಸ್ತ್ರವನ್ನಾಗಿಸಿಕೊಂಡು ಕೇಂದ್ರ ರಾಜಕೀಯ ಪ್ರವೇಶಿಸಲು ಪ್ರಯತ್ನಿಸುತ್ತಿದೆ.ಇನ್ನು ತೆಲಂಗಾಣ ರಾಜ್ಯದಲ್ಲಿ ನಡೆದಿರುವ ಕಾಳೇಶ್ವರಂ ಪ್ರಾಜೆಕ್ಟ್‌, ಕೆಸಿಆರ್‌ಗೆ ಎಟಿಎಂ ಆಗಿ ಬದಲಾಗಿದೆ ಎಂದು ಭಾವಿಸುತ್ತಿರುವ ಕೇಂದ್ರ, ಆ ಪ್ರಾಜೆಕ್ಟ್‌ ವಿರುದ್ಧವು ಕೂಡ ತನಿಖೆಗೆ ಆದೇಶಿಸುವ ಅವಕಾಶ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಈಗಾಗಾಲೆ ಗುತ್ತಿಗೆ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಿರುವುದರಿಂದ ಭವಿಷ್ಯದಲ್ಲಿ ಕೇಂದ್ರ ಸರಕಾರ ತೆಲಂಗಾಣದಲ್ಲಿ ಯಾವ ಹೆಜ್ಜೆಯನ್ನಿಡಲು ಮುಂದಾಗಲಿದೆ ಎಂಬ ಕೂತೂಹಲ ಮೂಡುತ್ತಿದೆ.

 ಕೆಸಿಆರ್‌ ಮೇಲೆ ಒತ್ತಡ ಏರುವ ಆಲೋಚನೆಯಲ್ಲಿ ಬಿಜೆಪಿ

ಕೆಸಿಆರ್‌ ಮೇಲೆ ಒತ್ತಡ ಏರುವ ಆಲೋಚನೆಯಲ್ಲಿ ಬಿಜೆಪಿ

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ತೆಲಂಗಾಣ ಸಿಎಂ ಕೆಸಿಆರ್‌ ಅವರನ್ನು ಟಾರ್ಗೆಟ್‌ ಮಾಡುವುದಕ್ಕೆ ವ್ಯೂಹವನ್ನು ರಚಿಸುತ್ತಿದೆ ಎಂಬ ಚರ್ಚೆ ಆಸಕ್ತಿಯನ್ನುಂಟು ಮಾಡಿದೆ. ಕೇಂದ್ರ ತನಿಖಾ ಸಂಸ್ಥೆಗಳಿಂದ ತೆಲಂಗಾಣ ಸರಕಾರದ ಮೇಲೆ ಒತ್ತಡ ತಂದು ಮುಂದಿನ ಚುನಾವಣೆಯಲ್ಲ ಕೆಸಿಆರ್‌ ರನ್ನು ಬಲಹೀನರನ್ನಾಗಿ ಮಾಡುವುದೇ ಬಿಜೆಪಿಯ ಪ್ರಧಾನ ಅಸ್ತ್ರವಾಗಿ ಕಾಣುತ್ತಿದೆ. ಬಿಜೆಪಿ ನಡೆಸುತ್ತಿರುವ ಮೈಂಡ್ ಗೇಮ್ ನಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಸಿಲುಕಿಕೊಳ್ಳುತ್ತಾರಾ ಅಥವಾ ಬಿಜೆಪಿಯ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಲಿದ್ದಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Recommended Video

Srilanka ಹಿಂಸಾಚಾರ: ರಾಜಕಾರಣಿಗಳನ್ನೇ ಕೊಂದ ರೊಚ್ಚಿಗೆದ್ದ ಪ್ರತಿಭಟನಾಕಾರರು | Oneindia Kannada

English summary
BJP has laid out a master plan to put a check to K Chandrashekar Rao in Telangana. Ordered an investigation into allegations of corruption like never before. Mind game continues with KCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X