ಅಸಾದುದ್ದೀನ್ ಒವೈಸಿ ಆಸ್ತಿ ಘೋಷಣೆ, 13ಕೋಟಿ ರು ಮೌಲ್ಯ, ಕಾರು ಹೊಂದಿಲ್ಲ
ಹೈದರಾಬಾದ್, ಮಾರ್ಚ್ 19: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರು ಹೈದರಾಬಾದಿನಿಂದ ಲೋಕಸಭೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರಗಳನ್ನು ಪ್ರಕಟಿಸಿದ್ದಾರೆ.
ಅಸಾಸುದ್ದೀನ್ ಒವೈಸಿ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಒವೈಸಿ ಅವರ ಒಟ್ಟು ಆಸ್ತಿ ಮೌಲ್ಯ 13 ಕೋಟಿ ರು ನಷ್ಟಿದೆ.
ಸ್ಥಿರಾಸ್ತಿ ಮೌಲ್ಯ ಒಟ್ಟು 12 ಕೋಟಿ ರು ಹಾಗೂ ಚರಾಸ್ತಿ ಮೌಲ್ಯ 167 ಕೋಟಿ ರು ಹೊಂದಿದ್ದಾರೆ. ಆದರೆ, ತಮ್ಮ ಬಳಿ ಯಾವುದೇ ವಾಹನವಿಲ್ಲ ಎಂದಿದ್ದಾರೆ.

ಒಂದು ಎನ್ ಪಿ ಬೋರ್ .22 ಪಿಸ್ತೂಲ್ ಹೊಂದಿದ್ದಾರೆ. ಎನ್ ಪಿ ಬೋರ್ 30-60 ರೈಫಲ್ ಮೌಲ್ಯ 1 ಲಕ್ಷ ರು ನಷ್ಟಿದೆ.
ಒಟ್ಟಾರೆ, 9.30 ಕೋಟಿ ರು ಸಾಲ ಹೊಂದಿದ್ದಾರೆ. 2 ಲಕ್ಷ ರು ನಗದು ಹೊಂದಿದ್ದಾರೆ. 2017-18ರಲ್ಲಿ 10,01,080 ರು ಹಾಗೂ 2016-17 13,33,250 ರು ಹೊಂದಿದ್ದಾರೆ.
ಒವೈಸಿ ವಿರುದ್ಧ ಐದು ಕ್ರಿಮಿನಲ್ ಕೇಸ್ ಗಳಿದ್ದು, ಆದರೆ, ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿಲ್ಲ.












Click it and Unblock the Notifications