ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದ ಇನ್ನೊಬ್ಬ ಟಿಆರ್‌ಎಸ್‌ ಶಾಸಕನಿಗೆ ಕೊರೊನಾ ಸೋಂಕು ದೃಢ

|
Google Oneindia Kannada News

ಹೈದರಾಬಾದ್, ಜೂನ್ 16: ತೆಲಂಗಾಣದ ಟಿಆರ್‌ಎಸ್‌ ಪಕ್ಷದ ಮತ್ತೊಬ್ಬ ಶಾಸಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು.

ಇದುವರೆಗೆ ಮೂರು ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ವಾರ, ವಾರಂಗಲ್ ಜಿಲ್ಲೆಯ ಟಿಆರ್ ಎಸ್ ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿ ದೃಢಪಟ್ಟಿತ್ತು. ಈಗ ಮತ್ತೊಬ್ಬ ಶಾಸಕರಿಗೆ ಪಾಸಿಟಿವ್ ಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈದರಾಬಾದಿನಲ್ಲಿ 50 ಸಾವಿರ ಮಂದಿ ಕೊರೊನಾ ಸೋಂಕು ಪರೀಕ್ಷೆಹೈದರಾಬಾದಿನಲ್ಲಿ 50 ಸಾವಿರ ಮಂದಿ ಕೊರೊನಾ ಸೋಂಕು ಪರೀಕ್ಷೆ

ಈ ಮುಂಚೆ ಪಾಸಿಟಿವ್ ಬಂದಿದ್ದ ಶಾಸಕರೊಂದಿಗೆ ಈ ಶಾಸಕರು ಸಂಪರ್ಕಕ್ಕೆ ಬಂದಿದ್ದರು ಎಂದು ಟಿಆರ್ ಎಸ್ ಮೂಲಗಳು ತಿಳಿಸಿವೆ.ಶಾಸಕರು ಮನಗೆ ಹೋಗಿ ಹೋಮ್ ಕ್ವಾರಂಟೈನ್ ನಲ್ಲಿರಬಹುದು. ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದ ಕೊರೊನಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Another TRS MLA Tests Positive For Covid-19 In Telangana

ಹೈದರಾಬಾದಿನಲ್ಲಿ 50 ಸಾವಿರ ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್, ರಂಗಾರೆಡ್ಡಿ, ವಿಕಾರಾಬಾದ್, ಸಂಗಾರೆಡ್ಡಿ ಜಿಲ್ಲೆ ಸೇರಿ ಒಟ್ಟು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 50 ಸಾವಿರ ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಒಟ್ಟು 10 ದಿನಗಳಲ್ಲಿ ಈ ಐವತ್ತು ಸಾವಿರ ಜನರಿಗೆ ಪರೀಕ್ಷೆ ನಡೆಯಲಿದೆ. ಇನ್ನು ದೆಹಲಿಯಲ್ಲಿ ಕೊರೊನಾ ಸೋಂಕಿತರಿಗಾಗಿಯೇ 20 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸುವಂತೆ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆ ನೀಡಿದೆ.

English summary
Another ruling TRS MLA tested positive for Covid-19 in Telangana on Monday, taking the number of party legislators infected by the virus to three.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X