ಕೇಂದ್ರ ಸರಕಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಚಂದ್ರಬಾಬು ನಾಯ್ಡು

Recommended Video

      ಕೇಂದ್ರ ಸರ್ಕಾರವನ್ನ ನಿಂದಿಸಿದ ಆಂಧ್ರ ಸಿ ಎಂ ಎನ್ ಚಂದ್ರಬಾಬು ನಾಯ್ಡು | Oneindia Kannada

      "ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ಕೇಳುವುದು ಭಾವನಾತ್ಮಕ ವಿಷಯ ಅಷ್ಟೇ ಅಲ್ಲ. ಅದು ಆಂಧ್ರದ ಜನರ ಮೂಲಭೂತ ಹಕ್ಕು" ಎಂದು ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಹಾಗೂ ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದೇ ವೇಳೆ ಗಂಭೀರ ಆರೋಪವೊಂದನ್ನು ಮಾಡಿರುವ ಅವರು, ದಕ್ಷಿಣದ ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಉತ್ತರದ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದಿದ್ದಾರೆ.

      ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ವೇಳೆ ಅವರು ಮಾತನಾಡಿ, ಕೇಂದ್ರದ ಹಣ ಅಥವಾ ರಾಜ್ಯದ ಹಣ ಅಂತ ಯಾವುದೂ ಇಲ್ಲ. ಇದು ಜನರ ದುಡ್ಡು. ದಕ್ಷಿಣದ ರಾಜ್ಯಗಳು ಅತಿ ಹೆಚ್ಚಿನ ಹಣವನ್ನು ಕೇಂದ್ರಕ್ಕೆ ಕೊಡುಗೆ ನೀಡುತ್ತಿವೆ. ಆದರೆ ಆ ಹಣ ಉತ್ತರದ ರಾಜ್ಯಗಳ ಅಭಿವೃದ್ಧಿಗೆ ಬಳಕೆ ಆಗುತ್ತಿದೆ ಎಂದು ಆರೋಪಿಸಿದರು.

      ಕೇಂದ್ರದಿಂದ ಇಂಥ ಮಲತಾಯಿ ಧೋರಣೆ ಏಕೆ? ಏಕೆ ಈ ತಾರತಮ್ಯ? ಆಂಧ್ರಪ್ರದೇಶವು ದೇಶದ ಭಾಗವಲ್ಲವೆ? ಕೈಗಾರಿಕಾ ತೆರಿಗೆ ವಿನಾಯಿತಿ ಮತ್ತು ಜಿಎಸ್ ಟಿ ಮರುಪಾವತಿಯನ್ನು ಈಶಾನ್ಯ ರಾಜ್ಯಗಳು ಹಾಗೂ ಹಿಮಾಚಲ ಪ್ರದೇಶಕ್ಕೆ ನೀಡುತ್ತಾರೆ. ಆದರೆ ಅವೈಜ್ಞಾನಿಕವಾಗಿ ವಿಭಜನೆಯಾಗಿ ತೊಂದರೆ ಅನುಭವಿಸುತ್ತಿರುವ ಆಂಧ್ರಪ್ರದೇಶಕ್ಕೆ ಏಕೆ ಕೊಡುವುದಿಕ್ಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

      Andhra CM accuses Centre of diverting tax revenues from south to develop northern states

      ಆಂಧ್ರದ ಜನರ ಭಾವನಾತ್ಮಕ ಅಂಶ ಅನ್ನೋ ಏಕೈಕ ಕಾರಣಕ್ಕೆ ವಿಶೇಷ ಸ್ಥಾನ-ಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರುವುದು ದುರದೃಷ್ಟದ ಸಂಗತಿ. ಈ ರಾಜ್ಯ ವಿಭಜನೆ ಆಗಿದ್ದೇ ತೆಲಂಗಾಣದ ಜನರ ಭಾವನೆಗಳ ಕಾರಣಕ್ಕೆ ಅಲ್ಲವೆ? ಭಾವನಾತ್ಮಕ ನೆಲೆಯ ಮೇಲೆ ರಾಜ್ಯ ವಿಭಜನೆ ಆಗಬಹುದು ಅಂದರೆ ಅದೇ ಭಾವನಾತ್ಮಕ ಅಂಶದ ಮೇಲೆ ವಿಶೇಷ ಸ್ಥಾನಮಾನ ನೀಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

      ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಕೇಂದ್ರದಿಂದ ಈ ವರೆಗೆ ಬಿಡುಗಡೆ ಆಗಿರುವ ಹಣಕ್ಕೆ ಆಂಧ್ರ ಸರಕಾರ ಲೆಕ್ಕ ತೋರಿಸಿಲ್ಲ ಎಂಬ ಬಿಜೆಪಿ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ಪ್ರಮುಖ ಯೋಜನೆ- ಕಾರ್ಯಕ್ರಮಗಳಿಗೆ ಈ ವರೆಗೆ ಬಳಕೆಯಾದ ಎಲ್ಲ ಹಣಕ್ಕೆ ಬಳಕೆ ಪ್ರಮಾಣ ಪತ್ರವನ್ನು ನೀತಿ ಆಯೋಗಕ್ಕೆ ಸಲ್ಲಿಸಿದ್ದೇವೆ. ಅದನ್ನೇ ನೀತಿ ಆಯೋಗದಿಂದಲೂ ಖಾತ್ರಿ ಪಡಿಸಿದ್ದಾರೆ ಎಂದು ಹೇಳಿದ್ದಾರೆ.

      ಆಂಧ್ರಪ್ರದೇಶ ವಿಭಜನೆ ಸಂದರ್ಭದ ಕಾಯ್ದೆಯಲ್ಲಿ ಹಾಗೂ ಸಂಸತ್ ನಲ್ಲಿ ಈ ಹಿಂದಿನ ಸರಕಾರ ಏನು ಭರವಸೆ ನೀಡಿತ್ತೋ ಅದನ್ನೇ ನಾವು ಕೇಳುತ್ತಿದ್ದೇವೆ ವಿನಾ ಅದಕ್ಕಿಂತ ಹೆಚ್ಚಿನದನ್ನೇನೂ ನಮ್ಮ ರಾಜ್ಯ ಕೇಳುತ್ತಿಲ್ಲ. "ಈ ಎಲ್ಲ ಭರವಸೆಗಳನ್ನು ಪೂರೈಸುವುದು ಕೇಂದ್ರ ಸರಕಾರದ ಜವಾಬ್ದಾರಿ" ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+