ಗಂಡನ ಮೇಲೆ ಮುನಿಸು: ಪುಟ್ಟ ಕಂದನೊಂದಿಗೆ ಕಟ್ಟಡದಿಂದ ಹಾರಿದ ತಾಯಿ

ಹೈದರಾಬಾದ್,ಜುಲೈ 15: ಗಂಡನ ಮೇಲೆ ಮುನಿಸಿಕೊಂಡು ಪುಟ್ಟ ಮಗುವನ್ನು ಕಂಕುಳಲ್ಲಿಟ್ಟುಕೊಂಡು ಕಟ್ಟಡದಿಂದ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಸಣ್ಣಪುಟ್ಟ ವಿಚಾರಗಳಿಗೆ ಮನೆಯಲ್ಲಿ ಜಗಳವಾಗುವುದು ಸಾಮಾನ್ಯ ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡ ಮಹಿಳೆ ತನ್ನ ಎರಡು ವರ್ಷದ ಪುಟ್ಟ ಕಂದಮ್ಮನ ಜೊತೆ ಕಟ್ಟದಿಂದ ಹಾರಿದ್ದಾಳೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪದ್ಮಜಾ ಕಟ್ಟಡದಿಂದ ಹಾರಿ ಮೃತಪಟ್ಟ ಮಹಿಳೆ. ಮೃತ ಪದ್ಮಜಾ ತನ್ನ ಪತಿಯನ್ನು ಕಾರ್ಯಕ್ರಮಕ್ಕಾಗಿ ಹೊರಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಾಳೆ. ಆದರೆ ಪತಿ ಇದಕ್ಕೆ ನಿರಾಕರಿಸಿದ್ದಾನೆ.

 After fight with husband Woman jumps off building with daughter

ಇದರಿಂದ ಪದ್ಮಜಾ ಅಸಮಾಧಾನಗೊಂಡು ಮಗುವಿನ ಸಮೇತ ಕಟ್ಟಡದಿಂದ ಹಾರಿದ್ದಾಳೆ. ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಪದ್ಮಜಾ ಮೃತಪಟ್ಟಿದ್ದಾಳೆ ಎಂದು ಎಸ್‍ಐ ಲಕ್ಷ್ಮೀನಾರಾಯಣ ಅವರು ತಿಳಿಸಿದ್ದಾರೆ.

ದಂಪತಿಯ ಮಧ್ಯೆ ಬೇರೆ ಯಾವುದೇ ಸಮಸ್ಯೆಗಳಿಲ್ಲ. ಇತ್ತೀಚೆಗಷ್ಟೆ ರಜಾ ದಿನದಲ್ಲಿ ಶ್ರೀಲಂಕಾ ಪ್ರವಾಸ ಹೋಗಿ ಸಂತೋಷದಿಂದ ಇದ್ದರು ಎಂದು ಮನೆಯವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+