ಹೈದರಾಬಾದ್ : ವಿಮಾನದಲ್ಲೇ 9 ಕೆಜಿ ಚಿನ್ನ ಬಿಟ್ಟು ಹೋದ

ಹೈದರಾಬಾದ್, ಮಾ.11 : ಕಳ್ಳ ಸಾಗಣೆ ಮೂಲಕ ತಂದಿದ್ದ ಚಿನ್ನವನ್ನು ವಿಮಾನದಲ್ಲೇ ಪ್ರಯಾಣಿಕನೊಬ್ಬ ಬಿಟ್ಟು ಹೋಗಿರುವ ಘಟನೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಧಿಕಾರಿಗಳು ಸುಮಾರು 9 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಬುಧವಾರ ಬೆಳಗ್ಗೆ ಹೈದರಾಬಾದ್‌ನ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಬಂದಿಳಿದ ವಿಮಾನದಲ್ಲಿ 9 ಕೆಜಿ ಚಿನ್ನ ಪತ್ತೆಯಾಗಿದೆ. ಬಂಧನದ ಭೀತಿಯಿಂದ ಪ್ರಯಾಣಿಕ ವಿಮಾನದಲ್ಲೇ ಚಿನ್ನವನ್ನು ಬಿಟ್ಟು ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು, ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ 13 ಕೆಜಿ ಚಿನ್ನ ಜಪ್ತಿ

ವಿಮಾನದ ಬ್ಯಾಗ್‌ಗನಲ್ಲಿ ಬಿಟ್ಟುಹೋಗಿದ್ದ ಚಿನ್ನವನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಸ್ಟಮ್ಸ್‌ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. [ಚಿನ್ನ ಸಾಗಿಸಲು ಏನ್ ಐಡಿಯಾ ಮಾಡಿದ್ರು, ಸಿಕ್ಕಿಬಿದ್ರು]

ಸುಮಾರು 9 ಕೆಜಿ ಚಿನ್ನವಿದ್ದು ಇದರ ಮೌಲ್ಯ ಸುಮಾರು 2 ಕೋಟಿ ರೂ.ಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿನ್ನವನ್ನು ಬಿಟ್ಟುಹೋದ ಪ್ರಯಾಣಿಕನಿಗಾಗಿ ಹುಡುಕಾಟ ಆರಂಭವಾಗಿದೆ. [ಚೆನ್ನೈ ವಿಮಾನ ನಿಲ್ದಾಣದಲ್ಲಿ 13 ಕೆಜಿ ಚಿನ್ನ ಜಪ್ತಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+