ಹೈದರಾಬಾದ್‌ : ಆಸ್ಪತ್ರೆ ಸಿಬ್ಬಂದಿ ಕಣ್ಣು ತೇವಗೊಳಿಸಿದ ಬಾಲಕ

Posted By: Gururaj
Subscribe to Oneindia Kannada

ಹೈದರಾಬಾದ್, ಫೆಬ್ರವರಿ 13 : ತಾಯಿಯ ಪ್ರೀತಿಯಲ್ಲಿ ದೇವರ ಮಮತೆ ತೋರಿ ಬರುತ್ತದೆ. ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ವಸ್ತು ಎಂದರೆ ಅದು ತಾಯಿಯ ಪ್ರೀತಿ ಮಾತ್ರ. ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದು ತಾಯಿಯ ಪ್ರೀತಿ ಬಗ್ಗೆ ಜನರಿಗೆ ಸಂದೇಶ ನೀಡಿದೆ.

ಐದು ವರ್ಷದ ಬಾಲಕನೊಬ್ಬ ತಾಯಿಯ ಶವದ ಜೊತೆ ರಾತ್ರಿ ಕಳೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಭಾನುವಾರ ಈ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ.

ಮಧ್ಯಪ್ರದೇಶ: ಮಗು ಅತ್ತಿದ್ದಕ್ಕೆ ಕತ್ತು ಸೀಳಿ ಸಾಯಿಸಿದ ತಾಯಿ!

ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ನೋಡಿ, ಸಿಬ್ಬಂದಿಗಳ ಕಣ್ಣುಗಳು ತೇವವಾಗಿವೆ. ತಾಯಿಯ ಶವವನ್ನು ತೆಗೆದುಕೊಂಡು ಹೋಗಲು ಬಿಡದೇ ಮಗು ಬಿಕ್ಕಿ-ಬಿಕ್ಕಿ ಅತ್ತಿದ್ದು ಎಲ್ಲರೂ ಕಣ್ಣೀರು ಹಾಕುವಂತೆ ಮಾಡಿದೆ.

5 year old boy sleeping next to dead mother

36 ವರ್ಷದ ಸುಲ್ತಾನ ಸಮೀನಾ ಹೈದರಾಬಾದ್‌ನವರು. ಬಹಳ ಹಿಂದೆಯೇ ಗಂಡ ಅವರಿಂದ ದೂರವಾಗಿದ್ದ. 5 ವರ್ಷದ ಮಗನ ಜೊತೆ ಸುಲ್ತಾನ ಅವರು ವಾಸವಾಗಿದ್ದರು.

ಭಾನುವಾರ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಸ್ಥಳೀಯರು ಆಕೆಯನ್ನು ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ತೆರಳಿದ್ದಾರೆ. ವೈದ್ಯರು ಎಷ್ಟೇ ಪ್ರಯತ್ನ ನಡೆಸಿದರೂ ಅವರನ್ನು ಉಳಿಸಲು ಸಾಧ್ಯವಾಗಿಲ್ಲ.

ಪಾರ್ಶ್ವವಾಯು ಪೀಡಿತ ತಾಯಿಯನ್ನು ಹೊಡೆದು ಕೊಂದ ಮಗ!

5 ವರ್ಷದ ಮಗು ತಾಯಿಯೊಂದಿಗೆ ಹಾಸಿಗೆಯಲ್ಲಿ ಮಲಗಿದೆ. ತಾಯಿ ಸತ್ತು ಹೋಗಿದ್ದಾಳೆ ಎಂಬ ಪರಿವು ಇಲ್ಲದೇ ಹಾಸಿಗೆಯಲ್ಲಿ ನಿದ್ದೆಗೆ ಜಾರಿಗೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಸಿಬ್ಬಂದಿ ಪ್ರಯತ್ನ ನಡೆಸಿದರು ಮಗು ಶವವನ್ನು ತಬ್ಬಿ ಮಲಗಿದ್ದು ನೋಡಿ ಅವರ ಕಣ್ಣಲಿಗಳು ತೇವವಾಗಿವೆ.

ಇಡೀ ದಿನ ಮಗುವಿನ ಜೊತೆ ಇದ್ದ ಆಸ್ಪತ್ರೆಯ ಸಿಬ್ಬಂದಿಗಳು ಪೊಲೀಸರ ಸಹಕಾರ ಪಡೆದು, ಅವರ ಸಂಬಂಧಿಕರನ್ನು ಪತ್ತೆ ಮಾಡಿದರು. ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಮಗುವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a heart touching incident five-year-old boy was spotted at Hyderabad Osmania General Hospital (OGH) as he lay fast asleep next to his mother's lifeless body.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ