ಹೈದರಾಬಾದ್: 65 ವರ್ಷದ ವೃದ್ಧನಿಗೆ 16ರ ಹುಡುಗಿಯ ಮದುವೆ?

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 17: ಇಲ್ಲಿನ 16 ವರ್ಷದ ಮುಸ್ಲಿಂ ಹುಡುಗಿಯೊಬ್ಬಳನ್ನು ಆಕೆಯ ತಂದೆಯೇ ಅರಬ್ ದೇಶದ 65 ವರ್ಷದ ಮುದುಕನಾಗಿರುವ ಶೇಖ್ ಒಬ್ಬರಿಗೆ ಮದುವೆ ಮಾಡಿರುವುದಾಗಿ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.

ದೂರು ನೀಡಿರುವ ಮಹಿಳೆ ಹೆಸರು ಸಯೀದ್ ಉನ್ನೀಸಾ. ಇವರ ಕುಟುಂಬ ನವಾಬ್ ಸಾಹೇಬ್ ಕುಂಟಾದಲ್ಲಿದೆ. ಆಕೆ ನೀಡಿರುವ ದೂರಿನ ಪ್ರಕಾರ, ಸಯೀದ್ ಉನ್ನೀಸಾಳ ಪತಿ ಸಿಕಂದರ್, ಒಮನ್ ದೇಶದ ಅಹ್ಮದ್ ಎಂಬ 65 ವರ್ಷದ ವೃದ್ಧನಿಗೆ ತನ್ನ ಮಗಳನ್ನು ಮದುವೆ ಮಾಡುವ ಇರಾದೆಯನ್ನು ಇದೇ ವರ್ಷದ ರಂಜಾನ್ ಗೂ ಮುನ್ನ ವ್ಯಕ್ತಪಡಿಸಿದ್ದ. ಆದರೆ, ಇದಕ್ಕೆ ಉನ್ನೀಸಾ ಒಪ್ಪಿರಲಿಲ್ಲ. ಈ ವಿಚಾರವನ್ನು ಅಲ್ಲಿಗೇ ಬಿಟ್ಟಂತೆ ನಟಿಸಿದ್ದ ಸಿಕಂದರ್, ಮಗಳನ್ನು ಆಕೆಯ ತಾಯಿಗೆ ಗೊತ್ತಿಲ್ಲದೆ, ವೃದ್ಧ ಅಹ್ಮದ್ ಕೆಲ ದಿನಗಳ ಕಾಲ ತಂಗಿದ್ದ ಬರ್ಕಾದ ಹೊಟೆಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಇಸ್ಲಾಂ ಧರ್ಮಗುರುವೊಬ್ಬರನ್ನು ಕರೆಯಿಸಿ, ವಿವಾಹ ನೆರವೇರಿಸಿದ್ದಾನೆ.

16-year-old Hyderabad girl married off to Oman Sheik in his 60s

ವಿವಾದ ಆದ ಕೂಡಲೇ ಆ ಮುದುಕ, ಬಾಲಕಿಯನ್ನು ಕುವೈತ್ ಗೆ ಕರೆದುಕೊಂಡು ಹೋಗಿದ್ದಾನೆಂದು ಉನ್ನೀಸಾ, ಫಲಾಕುನುಮಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ತನ್ನನ್ನು ಸಂಪರ್ಕಿಸಿದಾಗ ಉನ್ನೀಸಾ ಅವರಿಗೆ ಉತ್ತರಿಸಿರುವ ಆ ಮುದುಕ, ಸಿಕಂದರ್ ಅವರು ತನ್ನ ಬಳಿಯಿಂದ 5 ಲಕ್ಷ ರು. ಪಡೆದು ಬಾಲಕಿಯನ್ನು ತನಗೆ ವಿವಾಹ ಮಾಡಿಕೊಟ್ಟಿದ್ದಾನೆ. ಹಾಗಾಗಿ, ತನ್ನ 5 ಲಕ್ಷ ರು. ಮರಳಿಸಿದರೆ, ತಾನು ಬಾಲಕಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾನೆಂದು ಉನ್ನೀಸಾ ತಿಳಿಸಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a 16-year-old girl has been married to an elderly man from Oman, Ahmed, 65. The minor's mother, Syeeda Unnisa, a resident of Nawab Saheb Kunta, on Wednesday lodged a complaint with police pleading the girl be brought back to India from Muscat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ