ಫೇಸ್ ಬುಕ್ ನಲ್ಲಿ ಪಾಕ್ ಧ್ವಜ ಹಿಡಿದ ಫೋಟೋ: ಧಾರವಾಡ ಯುವಕ ಸೆರೆ

ಹುಬ್ಬಳ್ಳಿ, ಡಿಸೆಂಬರ್ 14: ಧಾರವಾಡದ ಯುವಕನೊಬ್ಬ ಪಾಕಿಸ್ತಾನದ ಧ್ವಜ ಹಿಡಿದು ಫೋಟೋ ತೆಗೆಸಿಕೊಂಡು ಫೇಸ್ ಬುಕ್ ನಲ್ಲಿ ಹಾಕಿದ ಕಾರಣಕ್ಕೆ ಮಂಗಳವಾರ ಸಂಜೆ ಪೊಲೀಸರ ಅತಿಥಿಯಾಗಿದ್ದಾನೆ. ಧಾರವಾಡ ನಗರದ ತೇಜಸ್ವಿ ನಗರ ನಿವಾಸಿ ಅಫ್ತಾಬ್ ತಡಗೋಡ (18) ಬಂಧಿತ ಯುವಕ.

ಕೆಲವೆಡೆ ಮಂಗಳವಾರ ಈದ್ ಮಿಲಾದ್ ಆಚರಿಸಿದ್ದರೆ, ಉತ್ತರ ಕರ್ನಾಟಕದಲ್ಲಿ ಸೋಮವಾರ ಆಚರಿಸಲಾಗಿತ್ತು. ಆ ಸಮಯದಲ್ಲಿ ಆರೋಪಿಯು ಪಾಕ್ ಧ್ವಜ ಹಿಡಿದು ಫೋಟೋ ತೆಗೆಸಿಕೊಂಡು ಫೇಸ್ ಬುಕ್ ನಲ್ಲಿ ಹಾಕಿದ್ದನ್ನು ಶಿವಾನಂದ ಸತ್ತಿಗೇರಿ ಎಂಬುವರು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ-ಧಾರವಾಡ ಪೊಲೀಸರು ಐಪಿಸಿ 295, 153 ಅಡಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.[ಜಯಲಲಿತಾ ಮಗಳ ಫೋಟೋ ಎಲ್ಲಾ ಫೇಕ್ ನಂಬಬೇಡಿ!]

Facebook

ಈ ಕುರಿತು ಸೋಮವಾರವೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಧಾರವಾಡ ಎಸಿಪಿ, ಶಹರ ಮತ್ತು ವಿದ್ಯಾಗಿರಿ ಠಾಣೆಗೆ ಸೂಕ್ತ ಕ್ರಮ ಕೈಗೊಳ್ಳಲು ದೂರು ನೀಡಿದ್ದರು.[ಕಟೀಲು ಪ್ರಕರಣ: ಮುಂಬೈ ಫೇಸ್‌ಬುಕ್ ಕಚೇರಿಗೆ ಮಂಗಳೂರು ಪೊಲೀಸ್ ಭೇಟಿ]

ಮಂಗಳವಾರ ಸಂಜೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+