ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಹುಬ್ಬಳ್ಳಿ ಮಹಿಳೆ
ಹುಬ್ಬಳ್ಳಿ, ಜುಲೈ 7: ಸಾರಿಗೆ ಬಸ್ಸಿನಿಂದ ಇಳಿದು ಆಸ್ಪತ್ರೆಗೆ ಕಡೆಗೆ ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ನಡು ರಸ್ತೆಯಲ್ಲಿಯೇ ಹೆರಿಗೆಯಾದ ಘಟನೆ ನಗರದ ಸಿದ್ದಪ್ಪ ಕಂಬಳಿ ವೃತ್ತದಲ್ಲಿ ಶುಕ್ರವಾರ ನಡೆದಿದೆ.
ನವಲಗುಂದ ತಾಲೂಕಿನ ಮಣಕವಾಡ ಗ್ರಾಮದ ಜಯಶ್ರೀ ಕರಿಯಪ್ಪ ಕನ್ಯೆದ ನಡು ರಸ್ತೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.

ಹೆರಿಗೆಗಾಗಿ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಲು ಸಂಬಂಧಿಕರೊಂದಿಗೆ ತೆರಳುತ್ತಿದ್ದರು. ಈ ವೇಳೆ ಬಸ್ಸಿನಿಂದಿಳಿಯುತ್ತಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಮಹಿಳೆಯ ನೆರವಿಗೆ ಸ್ಥಳದಲ್ಲಿದ್ದ ಮಹಿಳೆಯರು ಹಾಗೂ ಮಹಿಳಾ ಹೋಂ ಗಾರ್ಡ್ ಧಾವಿಸಿದ್ದಾರೆ. ಹೆರಿಗೆ ಸುಸೂತ್ರವಾಗಿ ಆಗಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications