ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

ಹುಬ್ಬಳ್ಳಿ, ಅಕ್ಟೋಬರ್ 18: ನೈಋತ್ಯ ರೈಲ್ವೆ ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಹುಬ್ಬಳ್ಳಿ ಮತ್ತು ವಿಜಯವಾಡ ನಡುವೆಯೂ ವಿಶೇಷ ರೈಲುಗಳು ಸಂಚಾರ ನಡೆಸಲಿವೆ.

ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರದ ಬಗ್ಗೆ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಅಕ್ಟೋಬರ್ 21ರಿಂದ ನವೆಂಬರ್ 30ರ ತನಕ ಹುಬ್ಬಳ್ಳಿ-ವಿಜಯವಾಡ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ-ವಿಜಯವಾಡ ಫೆಸ್ಟಿವಲ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಸಹ ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ. ರೈಲು ನಂಬರ್ 07226 ಮತ್ತು 07225 ಉಭಯ ನಗರಗಳ ನಡುವೆ ಸಂಚಾರವನ್ನು ನಡೆಸಲಿದೆ.

Vijayawada Hubballi Festival Special Express Train Schedule

ವೇಳಾಪಟ್ಟಿ: ಹುಬ್ಬಳ್ಳಿ-ವಿಜಯವಾಡ ಫೆಸ್ಟಿವಲ್ ಎಕ್ಸ್‌ಪ್ರೆಸ್ (07226) ರೈಲು ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಮರುದಿನ ಬೆಳಗ್ಗೆ 5.15ಕ್ಕೆ ವಿಜಯವಾಡ ತಲುಪಲಿದೆ. ಅಕ್ಟೋಬರ್ 21 ರಿಂದ ನವೆಂಬರ್ 30ರ ತನಕ ಈ ರೈಲು ಸಂಚಾರ ನಡೆಸಲಿದೆ.

ವಿಜಯವಾಡ-ಹುಬ್ಬಳ್ಳಿ ಫೆಸ್ಟಿವಲ್ ಎಕ್ಸ್‌ಪ್ರೆಸ್ ರೈಲು (07225) ಪ್ರತಿ ದಿನ ರಾತ್ರಿ 7.45ಕ್ಕೆ ಅಲ್ಲಿಂದ ಹೊರಡಲಿದೆ. ಮರುದಿನ ಬೆಳಗ್ಗೆ 11.25ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಅಕ್ಟೋಬರ್ 20ರಿಂದ ನವೆಂಬರ್ 29ರ ತನಕ ಈ ರೈಲು ಸಂಚರಿಸಲಿದೆ.

ಹುಬ್ಬಳ್ಳಿ-ವಿಜಯವಾಡ ರೈಲು ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ರೈಲ್ವೆ ಹೇಳಿದೆ. ಮುಂಗಡ ಟಿಕೆಟ್‌ಗಳನ್ನು ಆನ್‌ಲೈನ್, ರೈಲ್ವೆ ನಿಲ್ದಾಣದಲ್ಲಿನ ಕೌಂಟರ್‌ಗಳಲ್ಲಿಯೂ ಬುಕ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+