Get Updates
Get notified of breaking news, exclusive insights, and must-see stories!

"ಉಗ್ರರನ್ನು ಬಿಟ್ಟು ಭಾರತದಲ್ಲಿ ಈ ಕೃತ್ಯ ಮಾಡುವ ಕೆಲಸ"

ಭಾರತವು ಆರ್ಥಿಕವಾಗಿ ಅಭಿವೃದ್ಧಿ ಆಗುತ್ತಿರುವ ಹಿನ್ನೆಲೆಯಲ್ಲೇ ಉಗ್ರರನ್ನು ಬಿಟ್ಟು ಶಾಂತಿ ಕದಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ. ವಿಶ್ವದಲ್ಲಿ ಭಾರತ ಅಗ್ರಗಣ್ಯ ಸ್ಥಾನಕ್ಕೆ ಏರಲು ಪ್ರಯತ್ನಿಸುತ್ತಿದೆ. ಆದರೆ, ಮೂರನೇ ಸ್ಥಾನದಲ್ಲಿಯೇ ಉಳಿಯುವ ಕುತಂತ್ರ ಕೆಲಸ, ಸಮಾಜವನ್ನು ಹೊಡೆಯುವ ಪ್ರಯತ್ನ ಹಾಗೂ ಉಗ್ರರನ್ನು ಬಿಟ್ಟು ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಇಂದು ಅಖಿಲ ಭಾರತೀಯರ ವಿದ್ಯಾರ್ಥಿ ಪರಿಷತ್- ಕರ್ನಾಟಕ ಉತ್ತರ ಪ್ರಾಂತದವರು ಆಯೋಜಿಸಿದ್ದ "ಸಂವಿಧಾನ 75- ಬದಲಾಯಿಸಿದ್ದು ಯಾರು? ಬಲಪಡಿಸಿದ್ದು ಯಾರು?" ಅತ್ಯಮೂಲ್ಯ ಕೃತಿಯನ್ನು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಭಯೋತ್ಪಾದನೆ ಹಾಗೂ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರ ಬಗ್ಗೆ ಮಾತನಾಡಿದ್ದಾರೆ.

Union Minister Pralhad Joshi says that work has been done to disturb peace by leaving terrorists behind

ಡಾ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಎರೆಡೆರೆಡು ಬಾರಿ ಸೋಲಿಸಿದರ ಬಗ್ಗೆ ಕಾಂಗ್ರೆಸ್ ಪಕ್ಷ ಇದೀಗ ಹೊಸ ಟ್ರೆಂಡ್ ಆರಂಭಿಸಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ ಖರ್ಗೆ ಇತಿಹಾಸವನ್ನು ಒಂದು ಬಾರಿ‌ ಮೆಲಕು ಹಾಕಬೇಕಾದ ಅವಶ್ಯಕತೆಯಿದೆ. ಸಂವಿಧಾನದಲ್ಲಿ‌ ಮೀಸಲಾತಿಯನ್ನು ಬಿಜೆಪಿ ತೆಗೆದುಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹಬ್ಬಿಸಿತು. ಆದರೆ ಇದೀಗ ಸುಮ್ಮನಾಗಿದೆ, ಕೇಂದ್ರ ಸರ್ಕಾರ ಮೀಸಲಾತಿಯ ವಿಚಾರವಾಗಿ ಗಂಭೀರವಾಗಿದೆ. ಮೀಸಲಾತಿಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಪಂಡಿತ್ ನೆಹರು ಅವರು ಮೀಸಲಾತಿ ‌ವಿರೋಧಿಸಿ‌ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದರು. ಇದನ್ನು ಕಾಂಗ್ರೆಸ್ ಅಲ್ಲಗೆಳೆಯುತ್ತಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ರಾಜೀವ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ ಅತಿ ದೊಡ್ಡ ಭಾಷಣ ಅಂದರೆ ಅದು ಮೀಸಲಾತಿ ವಿರುದ್ಧ. ಕಾಂಗ್ರೆಸ್ ಪಕ್ಷ ಏನ್ ಹೇಳುತ್ತೆ ಇದಕ್ಕೆ ? ಬಾಬಾ ಸಾಹೇಬರಿಗೆ ಅಂತಿಮ‌ ಸಂಸ್ಕಾರದ ವಿಚಾರ ತೋರಿದ ಕಾಂಗ್ರೆಸ್ ಸರ್ಕಾರದ ನಡೆ ಕರಾಳ ಸತ್ಯವಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಹನ್ನೊಂದು ಪ್ರಮುಖ ಲೇಖಕರಿಂದ ರಚಿಸಲ್ಪಟ್ಟ ಈ ಕೃತಿ ನಮ್ಮ ಶ್ರೇಷ್ಠ ಸಂವಿಧಾನವನ್ನು ಬಲಪಡಿಸಿದ ಮಹತ್ಕಾರ್ಯವನ್ನು ಜನರೆದುರು ತೆರೆದಿಡುವ ಪ್ರಯತ್ನ ಮಾಡಿದೆ. ಕಳೆದ 75 ವರ್ಷಗಳಲ್ಲಿ ಸಂವಿಧಾನದಲ್ಲಿ ಬದಲಾವಣೆ ಮಾಡಿದ ಮತ್ತು ಅದನ್ನು ಬಲಪಡಿಸಲು ಶ್ರಮಿಸಿದವರ ಕುರಿತು ವಿಸ್ತೃತವಾದ ವಿವರ ಈ ಪುಸ್ತಕದಲ್ಲಿದ್ದು, ಈ ಪುಸ್ತಕವನ್ನು ಪ್ರಕಟಿಸಿದ ನಮ್ಮ ಉತ್ತರ ಕರ್ನಾಟಕದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

ಚಿತ್ರದುರ್ಗದ ಶ್ರೀ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ವಾದಿರಾಜ್‌ ಅವರು ಕೃತಿಯ ಪರಿಚಯ ಮಾಡಿಕೊಟ್ಟರು. ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸಿ.ಬಸವರಾಜ, ABVP ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್‌ ಬಿ.ರಾಜ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ABVP ರಾಜ್ಯಾಧ್ಯಕ್ಷ ಡಾ.ಆನಂದ ಹೊಸೂರ, ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+