Dharwad Train: ಮೂರು ದಿನ ಈ ನಿಲ್ದಾಣದಲ್ಲಿ ರೈಲುಗಳು ತಾತ್ಕಾಲಿಕ ನಿಲುಗಡೆ

ಧಾರವಾಡ, ಸೆಪ್ಟಂಬರ್ 20: ಧಾರವಾಡ ಜಿಲ್ಲೆ ನಾಗಲಾವಿಯ ದರ್ಗಾ ಹಜರತ್ ಷರಿಫ್ ಉರೂಸ್ ಕಾರ್ಯಕ್ರಮ ಮೂರು ದಿನಗಳ ಕಾಲ ಜರುಗಲಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ವಿವಿಧ ರೈಲುಗಳ ನಿಲುಗಡೆಯನ್ನು ತಾತ್ಕಲಿಕವಾಗಿ ನಿಲುಗಡೆ ಮಾಡಲಾಗುತ್ತದೆ. ಇನ್ನು ಎರಡು ರೈಲುಗಳ ಸಂಚಾರ ಭಾಗಶಃ ರದ್ದಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರವಾಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಲಾವಿಯ ದರ್ಗಾ ಹಜರತ್ ಷರೀಫ್ ಉರೂಸ್ ಕಾರ್ಯಕ್ರಮ ಅಕ್ಟೋಬರ್ 14 ರಿಂದ 16, 2024 ರವರೆಗೆ ಮೂರೂ ದಿನಗಳ ಕಾಲ ನಡೆಯಲಿದೆ. ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಗಲಾವಿ ಹಾಲ್ಟ್ ನಿಲ್ದಾಣದಲ್ಲಿ ಹಾದು ಹೋಗುವ ಎಂಟು ರೈಲುಗಳಿಗೆ ಎರಡು ನಿಮಿಷಗಳ ಕಾಲ ತಾತ್ಕಾಲಿಕ ನಿಲುಗಡೆಗೆ ಮಾಡಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

These Trains will Temporarily Stopped in Nagalavi Railway Station in Dharwad on Oct 14 to 16th

ನಿಲುಗಡೆಯ ರೈಲುಗಳ ಪಟ್ಟಿ ಇಲ್ಲಿದೆ

* ಎಸ್ಎಸ್ಎಸ್ ಹುಬ್ಬಳ್ಳಿ-ಮಿರಜ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17332) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 11:40 ಗಂಟೆಗೆ ಆಗಮಿಸಿ 11:42ಕ್ಕೆ ಹೊರಡಲಿದೆ.

* ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17415) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 9:14 ಗಂಟೆಗೆ ಆಗಮಿಸಿ, 9:16ಕ್ಕೆ ನಿಲ್ದಾಣದಿಂದ ಹೊರಡಲಿದೆ.

* ಎಸ್ಎಸ್ಎಸ್ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17317) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಂಜೆ 4:18 ಗಂಟೆಗೆ ಆಗಮಿಸಿ, 4:20 ಗಂಟೆಗೆ ಹೊರಡಲಿದೆ.

* ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17326) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 6:40 ಗಂಟೆಗೆ ಆಗಮಿಸಿ, 06:42ಕ್ಕೆ ಮತ್ತೆ ಪಯಣ ಬೆಳೆಸಲಿದೆ.

* ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17416) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಸಾಯಂಕಾಲ 5:55 ಗಂಟೆಗೆ ಆಗಮಿಸಿ, 5:57ಕ್ಕೆ ಹೊರಡಲಿದೆ.

* ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17325) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 7:40 ಗಂಟೆಗೆ ಬಂದು 7:42ಕ್ಕೆ ಹೊರಡಲಿದೆ.

* ಮಿರಜ್-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17331) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಮಧ್ಯಾಹ್ನ 12:25 ಗಂಟೆಗೆ ಆಗಮಿಸಿ, 12:27 ಗಂಟೆಗೆ ಮತ್ತೆ ಪಯಣ ಬೆಳೆಸಲಿದೆ.

* ದಾದರ್-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17318) ನಾಗಲಾವಿ ಹಾಲ್ಟ್ ನಿಲ್ದಾಣಕ್ಕೆ ಬೆಳಗ್ಗೆ 10:13 ಗಂಟೆಗೆ ಆಗಮಿಸಿ, 10:1 ಗಂಟೆಗೆ ಹೊರಡಲಿದೆ.

ಈ ಮೇಲಿನ ರೈಲುಗಳು ಮೂಲ ನಿಲ್ದಾಣದಿಂದ ಆರಂಭಿಸುವ ಪ್ರಯಾಣದ ದಿನಾಂಕ ಅಕ್ಟೋಬರ್ 14 ರಿಂದ ಮೂರು ದಿನ ಈ ತಾತಾಲ್ಕಿಕ ನಿಲುಗಡೆ ಜಾರಿಯಲ್ಲಿರುತ್ತದೆ. ದೇವನೂರು ಮತ್ತು ಬಾಣಾವರ ನಿಲ್ದಾಣಗಳ ಮಧ್ಯೆ ಸುರಕ್ಷತೆ ದೃಷ್ಟಿಯಿಂದ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬೀರೂರು ಮತ್ತು ಅರಸೀಕೆರೆ ನಿಲ್ದಾಣಗಳ ಮಧ್ಯೆ ಈ ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದರು.

* ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16214 ) ಸೆಪ್ಟೆಂಬರ್ 22, 2024 ರಂದು ಬೀರೂರು-ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

* ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16213 ) ಸೆಪ್ಟೆಂಬರ್ 23ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.

South western railway: These trains will temporarily stopped in Nagalavi railway station in Dharwad on Oct 14 to 16th due muslim urs festival.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+