ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹು-ಧಾ ಪಾಲಿಕೆ ವಾರ್ಡ್ ಗಳ ಸಂಖ್ಯೆ 67 ರಿಂದ 82ಕ್ಕೆ ಏರಿಕೆ!

By Basavaraj
|
Google Oneindia Kannada News

ಹುಬ್ಬಳ್ಳಿಮ ಜೂನ್ 30 : ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ವಾರ್ಡ್ ಗಳನ್ನು ಪುನರ್ವಿಂಗಡನೆ ಮಾಡಲಾಗಿದ್ದು, ಇದೀಗ ವಾರ್ಡ್ ಗಳ ಸಂಖ್ಯೆ 67 ರಿಂದ 82ಕ್ಕೆ ಏರಿಕೆಯಾಗಿದೆ.

ಜನಸಂಖ್ಯೆ ಆಧಾರದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳನ್ನು ಈವರೆಗೂ ಏಳು ಬಾರಿ ಪುನರ್ವಿಂಗಡೆ ಮಾಡಲಾಗಿದ್ದು, 15 ವಾರ್ಡ್ ಗಳಿಂದ ಆರಂಭವಾದ ಈ ಸ್ಥಳೀಯ ಸಂಸ್ಥೆಗೆ ಈವರೆಗೂ 67 ವಾರ್ಡ್ ಗಳು ಹೆಚ್ಚಳವಾಗಿವೆ. ಅಲ್ಲದೆ ಈ ಬಾರಿ ಅತಿ ಹೆಚ್ಚು ಅಂದರೆ 15 ವಾರ್ಡ್ ಗಳು ಹೆಚ್ಚಳವಾಗಿವೆ.

ಹುಬ್ಬಳ್ಳಿ 9 ಕೋಟಿ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಪರದಾಟಹುಬ್ಬಳ್ಳಿ 9 ಕೋಟಿ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಪರದಾಟ

2011ರ ಜನಗಣತಿ ಪ್ರಕಾರ ಅವಳಿ ನಗರಗಳ ಜನಸಂಖ್ಯೆ 9.40 ಲಕ್ಷಕ್ಕೆ ಏರಿಕೆಯಾಗಿದ್ದು, ಇದರ ಅನ್ವಯ ವಾಡ್ ಗಳನ್ನು ಪುನರ್ವಿಂಗಡಿಸಲಾಗಿದೆ. ಪ್ರಸ್ತುತ ಕೆಲ ವಾರ್ಡುಗಳಲ್ಲಿ 20 ರಿಂದ 30 ಸಾವಿರ ಜನಸಂಖ್ಯೆ ಇದ್ದು, ಪುನರ್ವಿಂಗಡನೆ ನಂತರ ಈ ಪ್ರಮಾಣ 10 ರಿಂದ 12 ಸಾವಿರಕ್ಕೆ ಸೀಮಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.

ಹುಬ್ಬಳ್ಳಿ ವಿಭಾಗದಲ್ಲಿಯೇ 10 ವಾರ್ಡ್ ಗಳ ಹೆಚ್ಚಳ

ಹುಬ್ಬಳ್ಳಿ ವಿಭಾಗದಲ್ಲಿಯೇ 10 ವಾರ್ಡ್ ಗಳ ಹೆಚ್ಚಳ

ಪುನರ್ವಿಂಗಡನೆ ಪರಿಣಾಮ ಹುಬ್ಬಳ್ಳಿ ವಿಭಾಗವೊಂದರಲ್ಲಿಯೇ 10 ವಾರ್ಡ್ ಗಳು ಹೆಚ್ಚಳವಾಗಿದ್ದು, ಧಾರವಾಡ ಹಾಗೂ ನವನಗರ ವಿಭಾಗಗಳಲ್ಲಿ ಇದರ ಪ್ರಮಾಣ ತುಸು ಕಡಿಮೆಯಾಗಿದೆ.

ರಾಜಕೀಯ ಪಕ್ಷಗಳ ಲಾಭ-ನಷ್ಟದ ಹಸ್ತಕ್ಷೇಪ

ರಾಜಕೀಯ ಪಕ್ಷಗಳ ಲಾಭ-ನಷ್ಟದ ಹಸ್ತಕ್ಷೇಪ

ಜನಸಂಖ್ಯೆ ಆಧಾರದ ಮೇಲೆ ಈಗಿರುವ ವಾರ್ಡ್ ಗಳನ್ನು ಪುನರ್ವಿಂಗಡನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ರಾಜಕಾರಣಿಗಳ ಹಾಗೂ ರಾಜಕೀಯ ಪಕ್ಷಗಳ ಲಾಭ-ನಷ್ಟದ ಹಸ್ತಕ್ಷೇಪದ ವಾಸನೆ ಎದ್ದು ಕಾಣುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅದರಲ್ಲೂ ಪ್ರಮುಖವಾಗಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಾರ್ಡ್ ಗಳ ಪುನರ್ವಿಂಗಡನೆ ಅವಳಿ ನಗರಗಳ ಜನರನ್ನು ಗೊಂದಲಕ್ಕೆ ತಳ್ಳಿದ್ದಂತೂ ಸತ್ಯ.

ಏಳು ಬಾರಿ ಮರುವಿಂಗಡನೆ

ಏಳು ಬಾರಿ ಮರುವಿಂಗಡನೆ

ಆಗಸ್ಟ್ 15, 1855 ರಂದು ಹುಬ್ಬಳ್ಳಿ ಮುನ್ಸಿಪಲ್ ಕೌನ್ಸಿಲ್ ಬಂದ ಮೇಳೆ ಮೊದಲ ಬಾರಿಗೆ 18 ಜನ ಸದಸ್ಯರನ್ನು ಹೊಂದಿದ್ದು, ನಂತರ 1856ರಲ್ಲಿ ಧಾರವಾಡ ಮುನ್ಸಿಪಲ್ ಕೌನ್ಸಿಲ್ ಸ್ಥಾಪನೆಯಾಯಿತು. ಬಳಿಕ 1962ರಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳನ್ನು ಸೇರಿಸಿ ಮುನ್ಸಿಪಲ್ ಕಾರ್ಪೊರೇಷನ್ ಎಂದು ಮೇಲ್ದರ್ಜೆಗೇರಿಸಲಾಯಿತು. 1969ರಿಂದ ಈವರೆಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳನ್ನು ಏಳು ಬಾರಿ ಮರುವಿಂಡನೆ ಮಾಡಲಾಗಿದೆ.

ಯಾವಾಗ, ಎಷ್ಟು ಮರುವಿಂಗಡನೆ

ಯಾವಾಗ, ಎಷ್ಟು ಮರುವಿಂಗಡನೆ

1956ರಲ್ಲಿ 18 ಜನ ಸದಸ್ಯರು, 1962- 15 ವಾರ್ಡ್ ಗಳು (ಸದಸ್ಯರು), 1983-54 ವಾರ್ಡ್ ಗಳು, 1996-57, 1996- 57, 2001-65, 2002-67, 2017 ಪ್ರಸ್ತುತ 67ರಿಂದ 82 82ಕ್ಕೆ ಏರಿಕೆ.

English summary
The Urban Development department has reallocated wards in Hubballi-Dharwad Municipal Corporation, wards number has increased from 67 to 82. The local authority has made as 2011 census and this is the highest increase in HDMC history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X