ಕಡ್ಡಾಯ ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು

Recommended Video

      ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು | Oneindia Kannada

      ಹುಬ್ಬಳ್ಳಿ, ಸೆಪ್ಟೆಂಬರ್ 27: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆ ಆದೇಶ ಕೇಳಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಇಂದು ಸಾವನ್ನಪ್ಪಿದ್ದಾರೆ.

      ಸುಭಾಷ್ ತರ್ಲಘಟ್ಟ ಎನ್ನುವ ಶಿಕ್ಷಕ ವರ್ಗಾವಣೆ ಸುದ್ದಿ ಕೇಳಿ ಹೆದರಿ ಕೋಮಾ ಸ್ಥಿತಿಗೆ ತಲುಪಿದ್ದವರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

      ಶಿಕ್ಷಕ ಸುಭಾಷ ಆನಂದ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಇತ್ತೀಚೆಗೆ ಸರ್ಕಾರ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗೇರಿ ಗ್ರಾಮಕ್ಕೆ ವರ್ಗ ಮಾಡಲಾಗಿತ್ತು. ನಾಲ್ಕು ವರ್ಷಗಳಿಂದ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇದರಿಂದ ಇಲ್ಲಿನ ಮಕ್ಕಳು ಮತ್ತು ಜನರ ನಡುವೆ ಉತ್ತಮ ಒಡನಾಟ ಹೊಂದಿದ್ದರು.

      Teacher Who Is In Coma After Hearing Transfer Order Died In Hubli

      ಆದರೆ ಸರ್ಕಾರದ ದಿಢೀರ್ ವರ್ಗಾವಣೆ ವಿಷಯ ಕೇಳಿ ಮಾನಸಿಕ‌ ಆಘಾತಕ್ಕೆ ಒಳಗಾದ ಸುಭಾಷ್‌ ಕೋಮಾಕ್ಕೆ ಜಾರಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಒಂದು ವಾರಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ಮಾಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

      ಘಟನೆಯಿಂದ ಶಿಕ್ಷಕರು ಹಾಗೂ ಅವರ ಸಂಬಂಧಿಗಳು ಆಕ್ರೋಶಗೊಂಡಿದ್ದು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+