ಗ್ಯಾರೆಂಟಿ ಯೋಜನೆಯಿಂದ ಮಲೆ ಮಹದೇಶ್ವರ ದೇಗುಲಕ್ಕೆ ₹3 ಕೋಟಿ ಹಣ ಬಂದಿದೆ: ಡಿಕೆ ಶಿವಕುಮಾರ್
ಹುಬ್ಬಳ್ಳಿ, ಮೇ 04: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ, ಜನರ ಅಭಿವೃದ್ಧಿಗಾಗಿ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಖಾತರಿ ಯೋಜನೆಗಳಿಂದಾಗಿ ಜನರು ನಮ್ಮ ಪರ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಪೊಲೀಸ್ ಠಾಣೆ ಸಮೀಪ ಕಾಂಗ್ರೆಸ್‌ನಿಂದ ಬಹಿರಂಗ ಸಮಾವೇಶ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು ಡಿಸಿಎಂ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ ವಹಿಸಿದ್ದರು.

ಈ ವೇಳೆ ಮಾಗತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಗ್ಯಾರೆಂಟಿ ಯೋಜನೆಗಳಿಂದ ಜನರು, ಮಹಿಳೆಯರು ದೇವರಲ್ಲಿ ಹರಕೆ ಕಟ್ಟುತ್ತಿದ್ದಾರೆ. ಉಪಮುಖ್ಯಮಂತ್ರಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ.
ನಮ್ಮ ಗ್ಯಾರೆಂಟಿ ಯೋಜನೆಗಳಿಂದಲೇ ಚಾಮರಾಜನಗರದ ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ಹೋಗಿರುವ ಭಕ್ತರು ನಮ್ಮ ಪರ ಬೇಡಿಕೊಂಡಿದ್ದಾರೆ. ಹತ್ತು ರೂಪಾಯಿ ಜಾಸ್ತಿ ಹಾಕುತ್ತಿದ್ದಾರೆ. ನಮ್ಮ ಗ್ಯಾರೆಂಟಿಯಿಂದ ಮಲೆ ಮಹಾದೇಶ್ವರದಲ್ಲಿ ಮೂರು ಕೋಟಿ ರೂಪಾಯಿ ಹಣ ಬಂದಿದೆ ಎಂದು ಅವರು ತಿಳಿಸಿದರು.
ವಿನೋದ್ ಅಸೂಟಿ ಸಿಎಸ್ ಶಿವಳ್ಳಿ ತದ್ರೂಪಿ
ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರಿ ಶ್ರೀಗಳಿಗೆ ನಮಸ್ಕಾರ ತಿಳಿಸಿದ ಡಿಸಿಎಂ, ಶ್ರೀಗಳು ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಸದ್ಯ ಕಾಂಗ್ರೆಸ್‌ನಿಂದ ಧಾರವಾಡಕ್ಕೆ ಕಣಕ್ಕಿಳಿಸಿರುವ ನಮ್ಮ ಅಭ್ಯರ್ಥಿ 'ವಿನೋದ್ ಅಸೂಟಿ' (Vinod Asooti) ಯವರು ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ತದ್ರೂಪಿಯಾಗಿದ್ದಾರೆ.

ಧಾರವಾಡದಿಂದ ಮರಿ ಟಗರು ಕಣಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಸೇರಿಕೊಂಡು ಧಾರವಾಡದಿಂದ ಕಣ್ಣಕಿಳಿಸಲು ಮರಿ ಟಗರು ಹುಡಕಿದ್ದೇವೆ.
ಸದರಿ ಚುನಾವಣೆಯಲ್ಲಿ ಈ ವಿನೋದ್ ಅಸೂಟಿಯವರನ್ನು ನಿಮ್ಮ ಮಡಲಿಗೆ ಹಾಕಿದ್ದೇವೆ. ನೀವೆಲ್ಲ ಚುನಾವಣೆಯಲ್ಲಿ ಇವರಿಗೆ ಆಶೀರ್ವಾದ ಮಾಡಿ ಹರಸಬೇಕು ಎಂದು ಮತಯಾಚನೆ ಮಾಡಿದರು.
ಬಿವೈ ವಿಜಯೇಂದ್ರಗೆ ಡಿಕೆಶಿ ಟಾಂಗ್
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಹೇಳುವುದಿಷ್ಟೇ, ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಇನ್ನು 10 ವರ್ಷ ಆಡಳಿತ ಮಾಡುತ್ತೇವೆ. ರಾಜ್ಯದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ವಿಚಾರ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ನಾವು ಒದ್ದು ಒಳಗೆ ಹಾಕಿದ್ದೇವೆ. ಖಂಡಿತವಾಗಿಯು ಆರೋಪಿಗೆ ಶಿಕ್ಷೆ ಆಗುತ್ತದೆ.
ನಿರಂಜನ ಹಿರೇಮಠ ಮನೆಗೆ ಭೇಟಿ ಕೊಟ್ಟು ಸರ್ಕಾರದ ವಿರುದ್ಧ ಮಾತನಾಡಿದರು. ಅವರು ಕಾಂಗ್ರೆಸ್ ಪಕ್ಷವನ್ನಾಗಲಿ, ಈ ಸರ್ಕಾರವನ್ನಾಗಲಿ ಏನು ಮಾಡಲು ಆಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications