ಹುಬ್ಬಳ್ಳಿ: ಸ್ಥಳದಲ್ಲಿಯೇ ಪರಿಹಾರ ಭರವಸೆ ನೀಡಿದ ಸಚಿವ ಆರ್.ಅಶೋಕ್
ಹುಬ್ಬಳ್ಳಿ, ಮಾರ್ಚ್ 20: "ಸರ್ಕಾರದ ಸೇವೆಯನ್ನು ಜನರ ಮನೆ ಬಾಗಿಲಿಗೆ ತರುವ ಸದುದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆಗೆ ಎಂಬ ಗ್ರಾಮ ವಾಸ್ತವ್ಯ ಅಭಿಯಾನ ಹಮ್ಮಿಕೊಂಡಿದ್ದು, ಇದು ನನ್ನ ಎರಡನೇ ಗ್ರಾಮವಾಗಿದೆ. ಜನರಿಗೆ ಸರ್ಕಾರಿ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ದೃಷ್ಟಿಯಿಂದ ಜನರ ಸಮಸ್ಯೆಗೆ ಇಲ್ಲಿಯೇ ಪರಿಹಾರ ನೀಡಲು ಬಂದಿದ್ದೇನೆ'' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲಾಧಿಕಾರಗಳ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಪೂರ್ಣ ಕುಂಭದೊಂದಿಗೆ ಗ್ರಾಮದ ಮಹಿಳೆಯರು ಅದ್ಧೂರಿಯಾಗಿ ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
"ಕಂದಾಯ ಇಲಾಖೆ ಸೇವೆಯನ್ನು ಜನರಿಗೆ ತಲುಪಿಸುವ ಹಾಗೂ ಜನರ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಹುಬ್ಬಳ್ಳಿ ಛಬ್ಬಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಲಿಸ್ಟ್ ಬಂದಿದ್ದು, ಅದೇ ರೀತಿ ಛಬ್ಬಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ'' ಎಂದು ಅವರು ಹೇಳಿದರು.

ಇದಕ್ಕೂ ಮುಂಚೆ ಗ್ರಾಮದ ಶ್ರೀ ಸಿದ್ಧಾರೂಢ ಸ್ವಾಮಿಗಳ ದರ್ಶನ ಪಡೆದು ಸಿಂಗಾರಗೊಂಡ ಎತ್ತಿನ ಚಕ್ಕಡಿ ಜಗ್ಗಲಿಗೆ, ಕೋಲಾಟ, ನಾದಸ್ವರದ ಮೇಳದೊಂದಿಗೆ ಅದ್ಧೂರಿಯಾಗಿ ಜರುಗಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಈ ವೇಳೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.












Click it and Unblock the Notifications