ಮಹಾದಾಯಿ ಯೋಜನೆಗೆ ಡಿಸೆಂಬರ್ 9ರಂದು ಗೋವಾಕ್ಕೆ ಮುತ್ತಿಗೆ : ವಾಟಾಳ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 13: ಮಹಾದಾಯಿ ಯೋಜನೆಗಾಗಿ ಆಗ್ರಹಿಸಿ ಡಿಸೆಂಬರ್ 9ರಂದು ಗೋವಾಕ್ಕೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.

ರಸ್ತೆ ಮಧ್ಯೆ ಚಾಪೆ ಹಾಸಿಕೊಂಡು ಮಲಗಿ ವಾಟಾಳ್ ಪ್ರತಿಭಟನೆ

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾದಾಯಿ ವಿಷಯದಲ್ಲಿ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಲಿಸಲು ವಿಫಲರಾಗಿದ್ದಾರೆ. ಹೀಗಾಗಿಯೇ ಲೋಕಸಭೆಯಲ್ಲಿ ಕಳಸಾ ಬಂಡೂರಿ ವಿಷಯವಾಗಿ ಚರ್ಚೆ ನಡೆದಿಲ್ಲ. ಅಲ್ಲದೇ ರಾಜ್ಯದ ಸಂಸದರು ಒಂದು ಬಾರಿಯೂ ಸಭಾತ್ಯಾಗ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Vatal Nagaraj

2 ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ಮಹಾದಾಯಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಜ್ಯದ ಬಿಜೆಪಿ ಸಂಸದರು ಒತ್ತಡವನ್ನು ತಂದಿಲ್ಲ. ಅಲ್ಲದೇ ಗೋವಾ ಮುಖ್ಯಮಂತ್ರಿ ಕೂಡ ತಮ್ಮ ಹಠಮಾರಿ ಧೋರಣೆಯಿಂದ ಹಿಂದೆ ಸರಿದಿಲ್ಲ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯೊಳಗೆ ನೀರು ಕೊಡಿಸದಿದ್ದರೆ, 2018ರ ಚುನಾವಣೆಯಲ್ಲಿ ಇದೇ ವಿಷಯವನ್ನು ಕನ್ನಡಪರ ಸಂಘಟನೆಗಳು ಬಳಸಿಕೊಂಡು ತೀವ್ರ ಹೋರಾಟವನ್ನು ಮಾಡುತ್ತವೆ. ಬೆಳಗಾವಿಯಲ್ಲಿ ಇಂದಿನಿಂದ ಆರಂಭಗೊಂಡಿರುವ ಅಧಿವೇಶನ ಹೆಸರಿಗೆ ಮಾತ್ರವಾಗಿದ್ದು, ಇದು ಈ ಸರಕಾರದ ಕೊನೆಯ ಅಧಿವೇಶನವಾಗಲಿದೆ. ಯಾವುದೇ ಅಜೆಂಡಾ ಇಲ್ಲದ ಅಧಿವೇಶನ ಇದಾಗಿದೆ ಎಂದು ಹೇಳಿದರು.

ಬೆಳಗಾವಿ ಸುವರ್ಣಸೌಧದ ಮುಂದೆ ವಾಟಾಳ್ ಬಂಧನ

ಬೆಳಗಾವಿ ಸುವರ್ಣ ಸೌಧದಲ್ಲಿ ಇದುವರೆಗೆ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಬಗೆಗೆ ಯಾವುದೇ ಪರಿಣಾಮಕಾರಿಯಾದ ಚರ್ಚೆಗಳೂ ಆಗಿಲ್ಲ ಎಂದ ವಾಟಾಳ್, ಸುವರ್ಣ ಸೌಧವನ್ನು ಯಾವ ಪುರುಷಾರ್ಥಕ್ಕಾಾಗಿ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದರು.

ಯುಪಿಎ ರೂಪಿಸಿದ್ದ ಜಿಎಸ್ ಟಿ ಜನಪರವಾಗಿತ್ತು
ಹುಬ್ಬಳ್ಳಿ: ಯುಪಿಎ ರೂಪಿಸಿದ್ದ ಜಿಎಸ್ ಟಿ ಜನಪರವಾಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅತಿರೇಕದ ಜಿಎಸ್ ಟಿ ರೂಪಿಸಿ, ಜನರಿಗೆ ತೊಂದರೆ ಮಾಡಿದೆ ಎಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶ

ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಬಾಬು ಜಗಜೀವನರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಾರಿಗೊಳಿಸಿದ ಜಿಎಸ್ ಟಿಯಿಂದ ಸಣ್ಣ-ಸಣ್ಣ ಉದ್ಯಮಗಳು ಬಾಗಿಲು ಮುಚ್ಚಿವೆ. ಲಕ್ಷಾಂತರ ಯುವಕರು ಬೀದಿ ಪಾಲಾಗಿದ್ದಾರೆ. ಈಗ ಜಿಎಸ್ ಟಿ ಮಾರ್ಪಾಡು ಮಾಡಲು ಹೊರಟಿದೆ ಎಂದು ಹರಿಹಾಯ್ದರು.

Miera Kumar

ಇತ್ತೀಚೆಗೆ ಮೀಸಲಾತಿ ಬೇಡ ಎಂಬ ಕೂಗು ಸಹ ಹೆಚ್ಚಾಗುತ್ತಿದೆ. ಮೀಸಲಾತಿ ಬೇಡ ಎನ್ನುವವರು ಜಾತೀಯತೆ ಬೇಡ ಎನ್ನಲಿ. ಜಾತೀಯತೆ ಅನುಸರಿಸಿ ಮೀಸಲಾತಿ ಬೇಡ ಅನ್ನೋದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ ಅವರು, ತುಳಿತಕ್ಕೆ ಒಳಗಾದವರ ಏಳ್ಗೆಗಾಗಿ ಅಂಬೇಡ್ಕರ್ ಆಶಯದಂತೆ ಮೀಸಲಾತಿ ನೀಡಲಾಗಿದೆ ಎಂದರು.

ಇತಿಹಾಸದಲ್ಲಿ ಕರ್ನಾಟಕವು ತುಂಬಾ ಮಹತ್ವದ ಸ್ಥಾನ ಪಡೆದಿದೆ. 21ನೇ ಶತಮಾನದಲ್ಲಿ ಇಲ್ಲಿನ ಯುವ ಪೀಳಿಗೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ರಾಜ್ಯದ ಕೊಡುಗೆ ಅಪಾರ. ಕರ್ನಾಟಕದ ಹೆಸರು ವಿಶ್ವ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆೆ ಬೆಳೆಯಲಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pro Kannada organisations will protest against Goa on December 9th, said by pro Kannada activist Vatal Nagaraj in Hubballi on Monday. Former loka sabha speaker Miera Kumar Angry on central government about GST implementation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ