ರಾಜ್ಯ ಸರ್ಕಾರಕ್ಕೆ "ನನ್ನನ್ನು ನೋಡಿದರೆ ನಿಮಗೆ ಅಷ್ಟೊಂದು ಭಯನಾ" ಎಂದ ಪ್ರಮೋದ್ ಮುತಾಲಿಕ್!
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗಳು ನಡೆದಿವೆ. ಇದರ ನಡುವೆ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸಹ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಮುತಾಲಿಕ್ ನನ್ನ ತಡೆಯಲಾಗದ ಪೋಲಿಸ್ ಇಲಾಖೆ ಉಗ್ರರನ್ನು ತಡಿತೀರಾ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗಕ್ಕೆ ಭೇಟಿ ನೀಡದಂತೆ ನಿರ್ಬಂಧ ಹೇರಲಾಗಿದೆ. ಇದೀಗ ಈ ವಿಚಾರವಾಗಿ ಪ್ರತಿಕ್ರಿಯೆ ಕೂಟ್ಟಿರುವ ಪ್ರಮೋದ್ ಮುತಾಲಿಕ್ ಅವರು, ಶಿವಮೊಗ್ಗ ಜಿಲ್ಲೆಯ ಡಿಸಿ ಹಾಗೂ ಎಸ್ ಕಾನೂನುನನ್ನ ಅರ್ಥ ಮಾಡಿಕೊಂಡಿಲ್ಲ. ಒಬ್ಬ ಮುತಾಲೀಕ್ ನನ್ನ ತಡೆಯಲಾಗದ ಪೋಲಿಸ್ ಇಲಾಖೆ ಉಗ್ರರನ್ನ ತಡಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ನಾನಂತೂ ಉಗ್ರ ಅಲ್ಲಾ, ದೇಶ-ಧರ್ಮಕ್ಕೋಸ್ಕರ ಹೋರಾಡುವಂತವವನು. ಲವ್ ಜಿಹಾದ್ ಅನ್ನೋ ಭಯಾನಕ ವೈರಸ್ ಹರಡುತ್ತಾ ಇದೆ ಹಿಂದೂ ಹೆಣ್ಣು ಮಕ್ಕಳನ್ನ ಹೀರುತ್ತಿದೆ. ಅವರ ಸುರಕ್ಷತೆಗಾಗಿ ನಾವು ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮವನ್ನು ನಾವು ಎಲ್ಲೂ ಬಹಿರಂಗವಾಗಿ ಮಾಡುತ್ತಿಲ್ಲ. ಸಭಾಂಗಣದ ಒಳಗಡೆ ಕಾರ್ಯಕ್ರಮ ಮಾಡುವುದಕ್ಕೆ ನಿರ್ಧಾರ ಮಾಡಲಾಗಿತ್ತು. ಬಹಿರಂಗವಾಗಿ ಆದರೆ ಗಲಭೆ ಆಗುವ ಸಾಧ್ಯತೆ ಇರಬಹುದು ಎಂದು ಹೇಳಬಹುದಿತ್ತು. ಆದರೆ, ನಾವು ಸಭಾಂಗಣದ ಒಳಗಡೆ ಕಾರ್ಯಕ್ರಮ ಮಾಡಿದರೂ, ನೀವು ತಡೆಯುತ್ತಿದ್ದೀರಿ ಎಂದಾದರೆ, ನಿಮಗೆ ಕಾನೂನು ಅರಿವು ಇದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ರಾಜ್ಯ ಸರ್ಕಾರವು ನನ್ನಿಂದ ಅನಾಹುತ ಆದರೆ ಏನ್ಮಾಡೋದು ಎಂದು ಯೋಚನೆ ಮಾಡುವಷ್ಟು ಹೇಡಿಗಳಿದ್ದೀರಾ? ಇದು ಸ್ವಾತಂತ್ರ್ಯ ಹರಣ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಇದೆ. ನಮ್ಮನ್ನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಎಸ್‌ಪಿ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಡಿಸಿ ಅವರಿಗೆ ಎಂಪಿ ಹಾಗೂ ಶಾಸಕರು ಮಾತನಾಡಿದ್ದಾರೆ ಡಿಸಿ ಅವರು ಹಠದಿಂದ ಹಾಗೂ ಅವರ ಹಿಂದೆ ಕೈ ಸರ್ಕಾರದ ಕುಮ್ಮಕ್ಕುನಿಂದ ಮಾಡುತ್ತಿದ್ದಾರೆ. ಅಲ್ಲಿನ ಡಿಸಿ ಹಾಗೂ ಎಸ್‌ಪಿ ಅವರಿಗೆ ಹಿಂದೂ ಸಂಘಟನೆಗಳು ರಾಜ್ಯಾದ್ಯಂತ ಚೀಮಾರಿ ಹಾಕಿದ್ದಾರೆ.
ಮೂವತ್ತು ವರ್ಷದಿಂದ ಎಲ್ಲಾ ಜಿಲ್ಲೆಗಳಿಂದಲೂ ಗಡಿಪಾರು ಅನುಭವಿಸುತ್ತಿದ್ದೇನೆ. ಇದರಿಂದ ನನ್ನ ಧ್ವನಿ ಅಡಗಿಸಬಹುದು ಅನ್ನುವ ಭ್ರಮೆ ನನ್ನ ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ಇದೆ ಎಂದ ಅವರು
ಮುಸ್ಲಿಂ ತುಷ್ಟೀಕರಣ, ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಇಂತಹ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಸಾಕಷ್ಟು ಕೆಳ ಮಟ್ಟಕ್ಕೆ ಹೋಗಿದೆ ಇನ್ನು ಬುದ್ಧಿ ಕಲಿದೆ ಹೋದರೆ ಸಂಪೂರ್ಣ ಸಮಾಧಿವರೆಗೆ ಹೋಗುತ್ತೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಮೋದ್ ಮುತಾಲಿಕ್ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಮುತಾಲಿಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ನಿಲುವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ವ್ಯಕ್ತಪಡಿಸುವುದು ಇದೆ. ಆದರೆ, ಈ ಬಾರಿ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಟೀಕೆ ಮಾಡಿದ್ದಾರೆ.












Click it and Unblock the Notifications