ಡಿಸೆಂಬರ್‌ 29ರಂದು ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ, ಡಿಸೆಂಬರ್‌, 28: ಹುಬ್ಬಳ್ಳಿಯ ಅಕ್ಷಯ ಕಾಲೊನಿಯ ವಿದ್ಯುತ್ ಉಪಕೇಂದ್ರದ ಪ್ರಸರಣ ಮಾರ್ಗದ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದ್ದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಗುರುವಾರ (ಡಿಸೆಂಬರ್‌ 29) ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಮುಂಜಾಗ್ರತೆಗಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿಯ ಯಾವ ಪ್ರದೇಶಗಳಲ್ಲಿ ಗುರುವಾರ ವಿದ್ಯುತ್‌ ವ್ಯತ್ಯಯ ಆಗಲಿದೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಅಕ್ಷಯ ಕಾಲೊನಿ, ರಾಜೀವ್‌ ನಗರ 1ನೇ ಹಂತ, ಕಾಳಿದಾಸ ನಗರ, ಭಾಗ್ಯಲಕ್ಷ್ಮಿ ನಗರ, ಸಂಗಮೇಶ್ವರ ಬಡಾವಣೆ, ಶೆಟ್ಟರ ಲೇಔಟ್‌, ಹನುಮಂತ ನಗರ, ಮಿತ್ರವಿಶಾಲ್‌ ಪಾರ್ಕ್‌, ಸಿದ್ದೇಶ್ವರ ಪಾರ್ಕ್‌, ದೇವಿ ನಗರ, ಕುಮಾರವ್ಯಾಸ ನಗರ, ಬನಶಂಕರಿ ಬಡಾವಣೆ, ಶಿರೂರ ಪಾರ್ಕ್‌, ಕಲ್ಯಾಣ ನಗರ, ನೇಕಾರ ಕಾಲೊನಿ, ಮುನೇಶ್ವರ ನಗರ, ಉಣಕಲ್ ಕ್ರಾಸ್, ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು, ಸಿದ್ದೇಶ್ವರ ನಗರ, ಪ್ರಶಾಂತ ಕಾಲೊನಿ, ಲಿಂಗರಾಜ ನಗರ ದಕ್ಷಿಣ, ಗಣೇಶ ಕಾಲೊನಿ, ಉತ್ತರಾಧಿ ಮಠ ರಸ್ತೆ, ಚಂದ್ರಗಿರಿ ಲೇಔಟ್, ಮಹಾಲಕ್ಷಿ ನಗರ, ವೀರಭದ್ರೇ ಶ್ವರ ಕಾಲೊನಿ, ರಾಜೀವ ನಗರ 2ನೇ ಹಂತ, ಸೂರ್ಯನಗರ, ದತ್ತಾತ್ರೇಯ ಕಾಲೊನಿ, ದತ್ತ ನಗರ, ಶರಣಗಿರಿ ಲೇಔಟ್, ಹೂಗಾರ ಲೇಔಟ್, ಶಿವಗಿರಿ, ಉಣಕಲ್, ಪಿ.ಬಿ. ರಸ್ತೆ, ಉಣಕಲ್ ಪಂಚಾಯಿತಿ, ಉಣಕಲ್ ಮಾರ್ಕೆಟ್, ಉಣಕಲ್ ಗಾರ್ಡನ್ ಪ್ರದೇಶಗಳಲ್ಲಿ ವಿದ್ಯುತ್‌ ಆಗಲಿದೆ.

Power cut in several city parts on december 29th; Check list of Areas

ವಿದ್ಯುತ್‌ ವ್ಯತ್ಯಯ ಆಗಲಿರುವ ಪ್ರದೇಶಗಳು

ಹಾಗೆಯೇ ಲಿಂಗರಾಜ ನಗರ ಉತ್ತರ, ವಿನಾಯಕ ನಗರ, ತತ್ವದರ್ಶಿ ಆಸ್ಪತ್ರೆ, ಶ್ರೇಯಾ ನಗರ, ಶಿಗ್ಗಾವ್ ಪಾರ್ಕ್, ಕಲ್ಲೂರ ಲೇಔಟ್, ಅಕ್ಷಯ ಕಾಲೊನಿ ಮೊದಲನೇ ಹಂತದಿಂದ 4ನೇ ಹಂತದವರೆಗೆ, ಲಕ್ಷೀನಾರಾಯಣ ನಗರ, ನಳಂದಾ ಕಾಲೇಜು, ಭೂಮಿ ಅಪಾರ್ಟ್‌ಮೆಂಟ್, ಕ್ಲಾಸಿಕ್ ಲೇಔಟ್, ಲಕ್ಷೀನಗರ, ವಿನಾಯಕ ಕಾಲೊನಿ, ಪುರುಷೋತ್ತಮ ನಗರ, ರವಿ ನಗರ, ಗಣೇಶ ದೇವಸ್ಥಾನ, ಕೃಷ್ಣ ಲೇಔಟ್, ಗುರುನಾಥ ಲೇಔಟ್, ಬಸವೇಶ್ವರ ನಗರ, ಮಂಜುನಾಥ ನಗರ ಕ್ರಾಸ್, ಗೋಕುಲ ರಸ್ತೆ, ನವಲೂರು ಡೈರಿ, ಆರ್.ಎನ್.ಎಸ್ ಸಾಯಿ ಆರ್ಕೇಡ್, ಅಪೂರ್ವ ನಗರ, ಗಣೇಶ ಅಪಾರ್ಟ್‌ಮೆಂಟ್, ಸಿರಿದತ್ತ ರೆಸಿಡೆನ್ಸಿ, ಪಾವಸ್ಕರ್ ಲೇಔಟ್, ಗುರುಜೀ ಪರಿವಾರ ಅಪಾರ್ಟ್‌ಮೆಂಟ್, ಡೆಕಾತ್ಲಾನ್, ಕೃಷ್ಣ ಸ್ಪಿನ್ನರ್ಸ್, ನೆಹರು ನಗರ, ಸೇಂಟ್ ಪೌಲ್ ಸ್ಕೂಲ್, ಕೆ.ಈ.ಸಿ ಕಾಟನ್‍ ಕೌಂಟ್ರಿ ಕ್ಲಬ್, ಕೈಗಾರಿಕ ವಸಾಹತು 2ನೇ ಗೇಟ್, ಸಂಗಮ, ಮೈಕ್ರೋ ಫಿನಿಷ್, ವಿಜಯಲಕ್ಷಿ ಗೇರ್ಸ್, ಕಾವೇರಿ ಗೇರ್ಸ್, ಕೆಇಸಿ ಲೇಔಟ್, ಮಾನಸಗಿರಿ, ಸರಸ್ವತಿಪುರ, ರಾಮಕೃಷ್ಣ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Power cut in several city parts on december 29th; Check list of Areas

ಮುನ್ಸೂಚನೆ ನೀಡಿದ ಹೆಸ್ಕಾಂ

ಇನ್ನು ಸಾಯಿ ಕಾಲೊನಿ, ಮಹಾಲಕ್ಷಿ ಲೇಔಟ್, ಗಾಂಧಿನಗರ, ಗಣೇಶ ಕಾಲೊನಿ, ಅಶೋಕ ವನ, ರೇಣುಕಾ ನಗರ, ಕುಮಾರ ಪಾರ್ಕ್, ರಾಧಾಕೃಷ್ಣ ನಗರ, ಸನ್ಮಾರ್ಗ ನಗರ, ರಾಮಲಿಂಗೇಶ್ವರ ನಗರ, ವಿವೇಕಾನಂದ ನಗರ, ಶಕ್ತಿ ನಗರ, ಜೆ.ಪಿ. ನಗರ, ಪದ್ಮರಾಜ ನಗರ, ವೆಂಕಟೇಶ್ವರ ಕಾಲೊನಿ, ಸಿಲ್ವರ್ ಟೌನ್, ಮದನಿ ಲೇಔಟ್, ಪ್ರಿಯದರ್ಶಿನಿ ಕಾಲೊನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+