ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಚೀನಾ ಗಡಿಯಲ್ಲಿ ಹುತಾತ್ಮರಾಗಿದ್ದ ಪೊಲೀಸರ ಸ್ಮರಣೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್‌, 21: ಎಲ್ಲಾ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ಚೀನಾ ಗಡಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆಯಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಇದೇ ದಿನದಂದು ಹುತಾತ್ಮರಾಗಿದ್ದರು.

ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿಪಾಸ್ತಿ, ಜನರ ಜೀವ ರಕ್ಷಣೆ, ಟ್ರಾಫಿಕ್ ಸಮಸ್ಯೆ ನಿವಾರಣೆ, ಸೈಬರ್ ಕ್ರೈಂ, ಮಕ್ಕಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಹೊಸ ಸವಾಲುಗಳು ಪೊಲೀಸ್ ಇಲಾಖೆಗೆ ಎದುರಾಗುತ್ತಿವೆ. ಅಪರಾಧಗಳನ್ನು ತಡೆಗಟ್ಟಲು ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಹೇಳಿದರು.

ಝಾನ್ಸಿ: ಬಬಿನಾ ಕ್ಯಾಂಟ್‌ನಲ್ಲಿ ಗುಂಡಿನ ಅಭ್ಯಾಸದ ವೇಳೆ ಬ್ಯಾರೆಲ್ ಸ್ಪೋಟ: ಇಬ್ಬರು ಯೋಧರು ಹುತಾತ್ಮಝಾನ್ಸಿ: ಬಬಿನಾ ಕ್ಯಾಂಟ್‌ನಲ್ಲಿ ಗುಂಡಿನ ಅಭ್ಯಾಸದ ವೇಳೆ ಬ್ಯಾರೆಲ್ ಸ್ಪೋಟ: ಇಬ್ಬರು ಯೋಧರು ಹುತಾತ್ಮ

ಇಂದು ಹಳೇ ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಪೊಲೀಸ್ ಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಎಫ್.ಎಸ್.ಎಲ್. ಕೆಂದ್ರವನ್ನು ತೆರಯಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯಕವಾಗಿದೆ ಎಂದರು.

Hubballi: Police Commemoration Day event

ಹುತಾತ್ಮ ಪೊಲೀಸರ ಸ್ಮರಣೆ
ಪೊಲೀಸ್ ಕಮಿಷನರ್ ಲಾಭೂರಾಮ್ ಮಾತನಾಡಿ, ಪ್ರತಿ ವರ್ಷ ಪೊಲೀಸ್ ಸ್ಮರಣೆ ದಿನವನ್ನು ಅಕ್ಟೋಬರ್ 21ರಂದು ಆಚರಣೆ ಮಾಡಲಾಗುವುದು. 1959ರಲ್ಲಿ ಚೀನಾ ಗಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಣ ತ್ಯಾಗ ಮಾಡಿದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಳೆದ ವರ್ಷದಿಂದ 264 ಪೊಲೀಸ್ ಅಧಿಕಾರಿಗಳು ಸೇವೆಯಲ್ಲಿರುವಾಗ ಮೃತರಾಗಿದ್ದಾರೆ. ರಾಜ್ಯದ 11 ಜನರಲ್ಲಿ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್ ನಿಂಗಪ್ಪ ಬೂಸನೂರ, ಪಂಡಿತ ಕಾಸಗರ್ ಅವರು ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

ಕಾರ್ಗಲ್ ಚೆಕ್‌ಪೋಸ್ಟ್: ಪೊಲೀಸ್-ಭದ್ರತಾ ಸಿಬ್ಬಂದಿ ನಡುವೆ ನಿಲ್ಲದ ಪಾಸ್ ವಿವಾದಕಾರ್ಗಲ್ ಚೆಕ್‌ಪೋಸ್ಟ್: ಪೊಲೀಸ್-ಭದ್ರತಾ ಸಿಬ್ಬಂದಿ ನಡುವೆ ನಿಲ್ಲದ ಪಾಸ್ ವಿವಾದ

ಹುತಾತ್ಮ ಪೊಲೀಸರಿಗೆ ಪುಷ್ಪನಮನ
ವಿವಿಧ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರು ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಮೃತರಾದ ನಿಂಗಪ್ಪ ಬೂಸನೂರ ಅವರಿಗೆ ಅವರ ಪತ್ನಿ ಸಂಗೀತಾ ಬೂಸನೂರ ಪುಷ್ಪ ನಮನ ಅರ್ಪಿಸಿದರು. ಕೆಎಸ್‌ಆರ್‌ಪಿ 10ನೇ ತುಕಡಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯಿತು. ಕವಾಯತು ಕಮಾಂಡರ್ ವಿಶ್ವನಾಥ ನಾಯಕ, ಐ.ಎನ್. ಕಲಾದಗಿ, ಎಡ್ವಿನ್ ಡಿಸೋಜಾ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಪಿ 10ನೇ ತುಕಡಿ ಹಾಗೂ ಪೊಲೀಸ್ ವಾದ್ಯ ವೃಂದದವರು ಗೌರವ ಸಲ್ಲಿಸಿದರು.

Hubballi: Police Commemoration Day event

ಈ ಸಂದರ್ಭದಲ್ಲಿ ವಿಧಾನ ಪರಿಷತ್ಯ ಸದಸ್ಯ ಬಸವರಾಜ ಹೊರಟ್ಟಿ, ರೈಲ್ವೆ ಐಜಿಪಿ ಅಲೋಕ್‌ ಕುಮಾರ್‌, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಉಪಮೇಯರ್ ಉಮಾಮುಕುಂದ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲಕೃಷ್ಣ ಬ್ಯಾಕೋಡ, ನಿವೃತ್ತ ಡಿಐಜಿ ರವಿ ನಾಯಕ, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ನಿರ್ದೇಶಕ ಪ್ರಮೋದ್‌ ಕುಮಾರ್‌ ಠಾಕ್ರೆ, ಎಸಿಪಿಗಳಾದ ಆರ್.ಕೆ. ಪಾಟೀಲ, ಪಿ.ಎಸ್. ದೊಡ್ಡಮನಿ, ಎಸ್.ಬಿ. ಯಾದವ್‌, ಪೊಲೀಸ್ ಇನ್ಸ್‌ಪೆಕ್ಟರ್ ಶ್ಯಾಮರಾವ್‌ ಸಜ್ಜನ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ, ಆರ್.ಜಿ. ಅಂಗಡಿ, ವಿಧಿವಿಜ್ಞಾನದ ನಿರ್ದೇಶಕ ಡಾ. ಚಂದ್ರಶೇಖರ್‌ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Police Commemoration Day Held in Hubballi today, police martyred on China border were remembered. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X