ರೈಲು ಇಂಜಿನ್ ನಿಂದ ಇಂಧನ ಸೋರಿಕೆ: ಡಿಸೇಲ್ ತುಂಬಿಕೊಳ್ಳಲು ಮುಗಿಬಿದ್ದ ಜನ
ಹುಬ್ಬಳ್ಳಿ, ಡಿಸೆಂಬರ್ 3: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಿನ ಇಂಜಿನ್ ಇಂಧನ ಸೋರಿಕೆಯಿಂದಾಗಿ ಯಲವಿಗಿ ರೈಲ್ವೇ ನಿಲ್ದಾಣದಲ್ಲಿಯೇ ರೈಲು ನಿಂತುಹೋಯಿತು. ಆದರೆ ಇದನ್ನು ಕಂಡ ಜನ ಡಿಸೇಲ್ ತುಂಬಿಕೊಳ್ಳಲು ಮುಗಿಬಿದ್ದ ಘಟನೆ ನಡೆಯಿತು.
ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಇಂಜಿನ್ ನಲ್ಲಿ ಇಂಧನ ಸೋರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಇಂಧನ ಸೋರಿಕೆಯನ್ನು ಗಮನಿಸಿದ ಜನರು ಕೆಲವೇ ನಿಮಿಷಗಳಲ್ಲಿ ಬಕೆಟ್, ಕೊಡಗಳನ್ನು ತೆಗೆದುಕೊಂಡು ಡಿಸೇಲ್ ತುಂಬಿಕೊಳ್ಳಲು ನಾಮುಂದು ತಾಮುಂದು ಎಂದು ಜಗ್ಗಾಡುತ್ತಾ ಮುಗಿಬಿದ್ದರು.

ಇಂಜಿನ್ ಇಂಧನ ಸೋರಿಕೆಯಿಂದಾಗಿ ರೈಲ್ವೇ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.












Click it and Unblock the Notifications