ಹುಬ್ಬಳ್ಳಿಯಲ್ಲಿ ಖಾಲಿ ಹೊಡೆಯುತ್ತಿರುವ ವೈನ್ ಶಾಪ್ ಗಳು

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 17: ಗಂಡ್ಮಕ್ಕಳ ತವರೆಂದೇ ಪ್ರಸಿದ್ಧಿ ಪಡೆದಿರುವ ಬಾರ್ ಮತ್ತು ವೈನ್ ಶಾಪಗಳಲ್ಲಿ ಗಿರಾಕಿಗಳಿಲ್ಲದೇ ವ್ಯಾಪಾರ ಅರ್ಧಕ್ಕರ್ಧ ಇಳಿದಿದೆ.

ಈ ಬಗ್ಗೆ ಮಾತನಾಡಿದ ನಿರೀಕ್ಷಾ ವೈನ್ ಶಾಪ್ ನ ಪಾಂಡು, ಮೊದಲು ಪ್ರತಿನಿತ್ಯ ಕನಿಷ್ಠ ರು 20 ಸಾವಿರ ವಹಿವಾಟು ಆಗುತ್ತಿತ್ತು. ಈಗ ಕೇವಲ ರು 5 ರಿಂದ 6 ಸಾವಿರ ಮಾತ್ರ ಆಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿಲ್ಲ. ದುಡ್ಡು ಇದ್ದರೂ ಖರ್ಚು ಮಾಡುವ ಸ್ಥಿತಿಯಲ್ಲಿ ಕೆಲವರ ಮನಃಸ್ಥಿತಿ ಇಲ್ಲ. ನಾವು ಇಷ್ಟು ದಿನ ರು 500 ಮತ್ತು 1000 ನೋಟಿಗೆ ಚಿಲ್ಲರೆ ನೀಡಿದ್ದೆವು. ಆದರೆ ಈಗ ನಮ್ಮಲ್ಲಿಯೂ ಚಿಲ್ಲರೆ ಸಮಸ್ಯೆ ಇದ್ದುದರಿಂದ ಹಳೆಯ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ.[1,000 ರೂಪಾಯಿಗೆ ತಿಲಾಂಜಲಿ, ಹೊಸ ನೋಟು ಚಲಾವಣೆ ಇಲ್ಲ]

Note ban: bar and restaurants business are loss

ಇನ್ನು ಪರೋಕ್ಷವಾಗಿ ಬಾರ್ ಮತ್ತು ವೈನ ಶಾಪ್ ಗಳಿಂದ ಉದ್ಯೋಗ ಕಂಡುಕೊಂಡಿದ್ದ ಎಗ್ರೈಸ್ ಅಂಗಡಿ, ಪಾನ್ ಶಾಪ್, ಚಿಕನ್ ಕಾರ್ನರ್, ಪಿಶ್ ಸೆಂಟರಗಳಲ್ಲಿ ವ್ಯಾಪಾರವಿಲ್ಲದೇ ಅವರ ಜೀವನ ನಡೆಯುವುದೇ ಕಷ್ಟವಾಗಿದೆ. ಪ್ರತಿನಿತ್ಯ ರು 3 ರಿಂದ 4 ಸಾವಿರ ವಹಿವಾಟು ಮಾಡುತ್ತಿದ್ದವರು ಈಗ ರು 500 ಬಂದರೆ ಸಾಕಪ್ಪಾ ಎಂದು ಗೋಳು ಹೊಯ್ದುಕೊಳ್ಳುವಂತಾಗಿದೆ. ಮೊದಲೇ ಪ್ರತಿದಿನ ಇಂತಿಷ್ಟು ಹಣ ತುಂಬುತ್ತೇನೆ ಎಂದು ಹೇಳಿಕೊಂಡು ಕೆಲವರ ಬಳಿ ಸಾಲ ಮಾಡಿದವರು ಈಗ ಹಣ ತುಂಬಲು ಸಾಧ್ಯವಾಗದೆ ಅಂಗಡಿಗಳನ್ನೇ ಬಂದ್ ಮಾಡುತ್ತಿದ್ದಾರೆ.

ಇನ್ನು ಜನನಿಬಿಡ ಸ್ಥಳಗಳಾಗಿರುವ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿಯೂ ಕೂಡ ವ್ಯಾಪಾರ ಅಷ್ಟಕ್ಕಷ್ಟೆ. ಮೊದಲು ಬಾರ್ ನಲ್ಲಿ ಸಪ್ಲೈಯರ್ ಗಳು ಸಾಕಷ್ಟು ಸಂಖ್ಯೆ ಟಿಪ್ಸ್ ಜೇಬಿಗಿಳಿಸಿಕೊಳ್ಳುತ್ತಿದ್ದರು. ಈಗ ಅವರಿಗೂ ಪಿಡುಗಾಸು ದೊರೆಯುತ್ತಿಲ್ಲ.

ಇನ್ನು ಕೆಲ ನಿತ್ಯ ಕುಡಿಯುವ ಅಭ್ಯಾಸ ಉಳ್ಳವರು ಎಂದಿಗಿಂತ ಕಡಿಮೆ ಪ್ರಮಾಣದಲ್ಲಿ ಕುಡಿದು ತಮ್ಮ ಚಟವನ್ನು ತೀರಿಸಿಕೊಳ್ಳುತ್ತಿದ್ದಾರೆ.[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]

ಇದೇ ರೀತಿ ಖಾಸಗಿ ಕಂಪನಿ ಕುಡಿಯುವ ನೀರು, ಸೋಡಾ, ಕೂಲ ಡ್ರಿಂಕ್ಸ್ ಮಾರಾಟಗಾರರಿಗೂ ಹೊಡೆತ ಬಿದ್ದಿದ್ದು, ದಿನ ನಿತ್ಯ ಐದಾರು ಟ್ರಿಪ್ ಸ್ಪಲೈ ಮಾಡುತ್ತಿದ್ದವರು ಈಗ ಒಂದು ಟ್ರಿಪ್ ಆರ್ಡರ್ ಬಂದರೆ ಸಾಕ್ರೀ ಪಾ ಎನ್ನುತ್ತಾರೆ.

ಆದರೆ, ಕೆಲವರು ಎಂಎಸ್ಐಎಲ್ ಸ್ಥಾಪಿಸಿರುವ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಕುಡಿಯುತ್ತಿದ್ದಾರೆ. ಇದರಿಂದ ಹಣವೂ ಉಳಿತಾಯವಾಯ್ತು ಮತ್ತು ಮನೆಯಲ್ಲಿದ್ದಂಗಾಯ್ತು ಎನ್ನುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Note ban: bar and restaurants business are decrise with people are not come in this stege
Please Wait while comments are loading...