ಕಾಂಗ್ರೆಸ್ ಜತೆ ದೋಸ್ತಿ ಇಲ್ಲ, 120 ಮಂದಿ ಪಟ್ಟಿ ಸಿದ್ಧವಿದೆ: ಎಚ್ ಡಿಕೆ

ಜೆಡಿಎಸ್ ನಿಂದ ಮುಂದಿನ ವಿಧಾನಸಭಾ ಚುನಾವಣೆಗೆ ನೂರಿಪ್ಪತ್ತು ಮಂದಿಯ ಪಟ್ಟಿ ಸಿದ್ಧವಿದೆ ಎಂದು ಎಚ್ ಡಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ

ಹುಬ್ಬಳ್ಳಿ, ಏಪ್ರಿಲ್ 27: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಆವರು ಹುಬ್ಬಳ್ಳಿಯ ಉದ್ಯಾನದಲ್ಲಿ ಬೆಳಗ್ಗೆ ವಾಯು ವಿಹಾರ ನಡೆಸಿ, ತಮ್ಮ ಪಕ್ಷದ ಪರಿಚಯ-ಪ್ರಚಾರ ನಡೆಸುವಲ್ಲಿ ತಲ್ಲೀನರಾಗಿರುವಂತೆಯೇ ಮುಂದಿನ ವಿಧಾನಸಭೆ ಚುನಾವಣೆಗೆ ನೂರಿಪ್ಪತ್ತು ಕ್ಷೇತ್ರಗಳಲ್ಲಿ ಪಕ್ಷದ ಪಟ್ಟಿ ಅಂತಿಮಗೊಂಡಿದೆ ಎಂದು ಗುರುವಾರ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ತೆನೆ ಹೊತ್ತ ಮಹಿಳೆಗೊಂದು ನೆಲೆ ಕಲ್ಪಿಸುವ ಆಲೋಚನೆಯಲ್ಲಿರುವ ಕುಮಾರಸ್ವಾಮಿ, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ರೈತರ ಸಮಾವೇಶವೊಂದನ್ನು ಆಯೋಜಿಸಿ, ಅದೇ ಸಮಾವೇಶದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.[ಜೆಡಿಎಸ್ 'ಚಡ್ಡಿದೋಸ್ತ್'ಗಳ ಆಣೆ ಪ್ರಮಾಣದ ಪ್ರಹಸನ! ಅಕಟಕಟಾ..]

No coalition with Congress for assembly election: HD Kumaraswamy

ಕಾಂಗ್ರೆಸ್ ಜತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಮಾಧ್ಯಮದ ವರದಿಯನ್ನು ತಳಿ ಹಾಕಿದ ಅವರು, ಎಲ್ಲ 224 ವಿಧಾನಸಭಾ ಕ್ಷೇತ್ರದಿಂದಲೂ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲೇ ಚುನಾವಣೆಗೆ ನಿಲ್ಲುವಂತೆ ಪಕ್ಷದ ಕಾರ್ಯಕರ್ತರು, ಜನರು ಒತ್ತಾಯ ಮಾಡುತ್ತಿದ್ದಾರೆ. ಈ ಭಾಗದ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತಿಸುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+