ಸಚಿವ ಜಗದೀಶ ಶೆಟ್ಟರ್ ಅವರ ತಾಯಿ ನಿಧನ
ಹುಬ್ಬಳ್ಳಿ, ಜನವರಿ 10: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಾಯಿ ವಿಧಿವಶರಾಗಿದ್ದಾರೆ.
ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ (87 ) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಕ್ಕನ ಬಳಗದಲ್ಲಿ ಸಕ್ರಿಯರಾಗಿದ್ದರು ಮತ್ತು ಇವರು ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಹುಬ್ಬಳ್ಳಿಯ ಕೇಶ್ವಾಪುರದ ಶಬರಿ ನಗರದಲ್ಲಿ ತಮ್ನ ಇನ್ನೊಬ್ಬ ಪುತ್ರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ನಿವಾಸದಲ್ಲಿ ಇದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ವಿಧಿವಶರಾಗಿದ್ದಾರೆ.

ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications