World's Longest Railway Platform : ಗಿನ್ನಿಸ್ ದಾಖಲೆ ಸೇರಿದ ಹುಬ್ಬಳ್ಳಿಯ ಅತೀ ಉದ್ದದ ರೈಲ್ವೆ ಫ್ಲಾಟ್‌ಫಾರ್ಮ್

ನೈಋತ್ಯ ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣದ ಫ್ಲಾರ್ಟ್‌ಫಾರ್ಮ್ ಪಾದಚಾರಿ ಸಬ್‌ವೇಯೊಂದಿಗೆ 1507 ಮೀಟರ್ ಉದ್ದವನ್ನು ಹೊಂದಿದೆ. ಇದು ಈಗ ಗಿನ್ನಿಸ್ ರೆಕಾರ್ಡ್‌ ಸೇರಿದೆ.

ಹುಬ್ಬಳ್ಳಿ, ಮಾರ್ಚ್ 13; ಭಾರತದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣದ ವಿಶ್ವದಲ್ಲೇ ಅತೀ ಉದ್ದದ ಫ್ಲಾಟ್‌ಫಾರ್ಮ್ ಉದ್ಘಾಟಿಸಿದರು. ಈ ಫ್ಲಾಟ್‌ಫಾರ್ಮ್ ಗಿನ್ನಿಸ್ ರೆಕಾರ್ಡ್‌ ಸೇರಿದ್ದು, ಕರ್ನಾಟಕಕ್ಕೆ ಹಿರಿಮೆ ತಂದು ಕೊಟ್ಟಿದೆ.

ಕೇಂದ್ರ ಸಚಿವ, ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ವಿಶ್ವ ದಾಖಲೆಯ ಪುಟ ಸೇರಿತು ನಮ್ಮ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ. ವಿಶ್ವದಲ್ಲೇ ಅತೀ ಉದ್ದದ ಫ್ಲಾಟ್‌ಫಾರ್ಮ್ ಹೊಂದಿರುವ ಏಕೈಕ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಂಡು ಮೆಟ್ಟಿದ ನಾಡಿನ ಹೆಸರು ರಾರಾಜಿಸುವಂತಾಗಿದೆ" ಎಂದು ಹೇಳಿದ್ದಾರೆ.

Longest Railway Platform Shree Siddharoodha Swamiji Railway Joined Guinness World Record

ನೈಋತ್ಯ ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣದ ಫ್ಲಾರ್ಟ್‌ಫಾರ್ಮ್ ಪಾದಚಾರಿ ಸಬ್‌ವೇಯೊಂದಿಗೆ 1507 ಮೀಟರ್ ಉದ್ದವನ್ನು ಹೊಂದಿದೆ. ವಿಶ್ವದ ಅತೀ ಉದ್ದದ ರೈಲ್ವೆ ಫ್ಲಾರ್ಟ್‌ಫಾರ್ಮ್ ಇದಾಗಿದ್ದು, ಭವಿಷ್ಯದ ಸಾರಿಗೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಬಾರಿಗೆ ಎರಡು ರೈಲುಗಳ ಆಗಮನ/ ನಿರ್ಗಮನ ಇಲ್ಲಿ ಸಾಧ್ಯವಾಗಲಿದೆ. ರೈಲುಗಳ ಕ್ರಾಸಿಂಗ್‌ಗೆ ಕಾಯುವುದು ತಪ್ಪಲಿದೆ.

ವಿಶ್ವದ ಅತೀ ಉದ್ದದ ರೈಲ್ವೆ ಫ್ಲಾಟ್‌ಫಾರ್ಮ್‌ನಿಂದಾಗಿ ಯಾರ್ಡ್‌ನ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಾಗಲಿದೆ ಹಾಗೂ ಏಕ ಕಾಲದಲ್ಲಿ ಎರಡು ರೈಲುಗಳ ಕಾರ್ಯಾಚರಣೆಯನ್ನು ನಡೆಸುವುದರಿಂದ ವ್ಯಾಪಾರ, ಪ್ರವಾಸೋದ್ಯಮ, ವಾಣಿಜ್ಯ, ಆರ್ಥಿಕ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಇಂತಹ ಫ್ಲಾಟ್‌ಫಾರ್ಮ್‌ ಕರ್ನಾಟಕದಲ್ಲಿದೆ ಎಂಬುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

Longest Railway Platform Shree Siddharoodha Swamiji Railway Joined Guinness World Record

ಅತೀ ಉದ್ದದ ರೈಲ್ವೆ ಫ್ಲಾಟ್‌ಫಾರ್ಮ್‌; ಹುಬ್ಬಳ್ಳಿ ರೈಲು ನಿಲ್ದಾಣದ 1ನೇ ಫ್ಲಾಟ್‌ಫಾರ್ಮ್‌ 550 ಮೀಟರ್ ಉದ್ದವಿತ್ತು. ಅದನ್ನು 10 ಮೀಟರ್ ಅಗಲ ವಿಸ್ತರಣೆ ಮಾಡಿ, 1.5 ಕಿ. ಮೀ. ತನಕ ವಿಸ್ತರಣೆ ಮಾಡಲಾಗಿದೆ. ಇದುವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖ್‌ಪುರ ನಿಲ್ದಾಣದ 1366 ಮೀಟರ್ ಉದ್ದದ ಫ್ಲಾಟ್‌ಫಾರ್ಮ ಅತಿ ಉದ್ದದ ಫ್ಲಾಟ್‌ಫಾರ್ಮ್ ಎಂಬ ಹೆಗ್ಗಳಿಕೆ ಪಡೆದಿತ್ತು. ಈ ದಾಖಲೆಯನ್ನು ಈಗ ಹುಬ್ಬಳ್ಳಿ ರೈಲು ನಿಲ್ದಾಣ ಮುರಿದಿದೆ.

ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ ಸದ್ಯ ಎಂಟು ಫ್ಲಾಟ್‌ಫಾರ್ಮ್‌ಗಳೊಂದಿಗೆ ಮೇಲ್ದರ್ಜೆಗೆ ಏರಿದೆ. ಇಷ್ಟು ದಿನ ರೈಲು ನಿಲ್ದಾಣಕ್ಕೆ ಎರಡು ಪ್ರವೇಶ ದ್ವಾರಗಳಿದ್ದವು. ಒಂದು ಮುಖ್ಯ ಪ್ರವೇಶ ದ್ವಾರ ಮತ್ತೊಂದು, ಗದಗ ರಸ್ತೆಯ ಪ್ರವೇಶ ದ್ವಾರ. ಈಗ ವಿಶ್ವದ ಅತೀ ಉದ್ದದ ಫ್ಲಾಟ್‌ಫಾರ್ಮ್‌ಗಾಗಿಯೇ ಮಂಟೂರು ರಸ್ತೆಯಲ್ಲಿ ಮತ್ತೊಂದು ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಮೂರು ಪ್ರವೇಶ ದ್ವಾರಗಳನ್ನು ಹೊಂದಿರುವ ದೇಶದ ಕೆಲವೇ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ ಸಹ ಒಂದಾಗಿದೆ.

ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತೀ ಉದ್ದದ ಫ್ಲಾಟ್‌ಫಾರ್ಮ್‌ ನಿರ್ಮಾಣ ಕಾರ್ಯವನ್ನು 2019ರಲ್ಲಿ ಆರಂಭಿಸಲಾಗಿತ್ತು. ಆಗ ಸುಮಾರು 9 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯಾರ್ಡ್‌ ನವೀಕರಣ, ಇನ್ನೆರಡು ಫ್ಲಾಟ್‌ಫಾರ್ಮ್ ನಿರ್ಮಾಣ, 3ನೇ ಪ್ರವೇಶ ದ್ವಾರ ಎಲ್ಲವೂ ಸೇರಿ ಸುಮಾರು 90 ಕೋಟಿ ರೂ. ವೆಚ್ಚಾವಾಗಿದೆ. 2022ರಲ್ಲಿ ಈ ಫ್ಲಾಟ್‌ಫಾರ್ಮ್‌ ಉದ್ಘಾಟನೆ ಆಗಲಿದೆ ಎಂದು ಅಂದಾಜಿಸಲಾಗಿತ್ತು. 2022ರ ಅಕ್ಟೋಬರ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಫ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+