ಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟ; ಪ್ರಕರಣ ದಾಖಲು

ಹುಬ್ಬಳ್ಳಿ, ಏಪ್ರಿಲ್ 9: ಕೋವಿಡ್ -19 ಲಾಕ್ ಡೌನ್ ಮದ್ಯ ನಿಷೇದಾಜ್ಞೆ ಸಂದರ್ಭದಲ್ಲಿ ಕದ್ದುಮುಚ್ಚಿ ಮದ್ಯದ ವ್ಯಾಪಾರದಲ್ಲಿ ತೊಡಗಿದ್ದ, ಈಶ್ವರನಗರದಲ್ಲಿರುವ ಮೆ.ಓರಿಜಿನಲ್ ಬಾರ್ & ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನೆಡಸಿ ಪ್ರಕರಣ ದಾಖಲು ಮಾಡಿದ್ದಾರೆ.

ಏ.8 ರಂದು ರೆಸ್ಟೋರೆಂಟ್ ತಪಾಸಣೆ ನಡೆಸಿದ ಅಬಕಾರಿ ನಿರೀಕ್ಷಕ ತಂಡ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಹನುಮಂತಸಾ ರಾಮಕೃಷ್ಣ , ರವೀಂದ್ರ, ಕೃಪಾ ರಾಮಕೃಷ್ಮೆಸಾ ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಾರ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ರೂ 3,22,488 ಮೌಲ್ಯದ 562.595 ಲೀಟರ ಮದ್ಯ ಮತ್ತು ಒಟ್ಟು 291 . 070 ಲೀಟರ ಬಿಯರ್ ದಾಸ್ತಾನನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ.

Liquor Supply In Lockdown Time: Vine Shop Seized In Hubballi

ದಾಳಿ ನಡೆಸಿದ ತಂಡದಲ್ಲಿ ಅಬಕಾರಿ ನಿರೀಕ್ಷಕ ಶ್ರೀಶೈಲ ಸಂಗೊಳ್ಳಿ, ಅಬಕಾರಿ ರಕ್ಷಕ ಹೆಚ್ . ಬಿ . ಕಾಳೆ , ವಾಹನ ಚಾಲಕ ನಾಗೇಶ ಮೂಲಿಮನಿ ಹಾಗೂ ಪೊಲೀಸ ಸಿಬ್ಬಂದಿ ರವಿ ಪಾಂಡುರಂಗ ರಾಶಿನಕರ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+