NWKRTC: ಶಕ್ತಿ ಯೋಜನೆಯ ನೂರಾರು ರೂ. ಕೋಟಿ ಬಾಕಿ: ಸೊರಗುತ್ತಿದೆ ಸಾರಿಗೆ ನಿಗಮ
ಹುಬ್ಬಳ್ಳಿ, ಮೇ 26: ರಾಜ್ಯ ಸರ್ಕಾರಿ ಸಾರ್ವಜನಿಕ ಸಾರಿಗೆಯ ನಿಗಿದಿತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಲು 'ಶಕ್ತಿ ಯೋಜನೆಯನ್ನು' ಜಾರಿ ತಂದಿದೆ. ಆದರೆ ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಿದ ಸಾರಿಗೆ ನಿಗಮಗಳಿಗೆ ಬಾಕಿ ಹಣ ಪಾವತಿ ಆಗಿದೆಯೇ ಎಂದು ನೋಡಿದರೆ, ಇದಕ್ಕೆ ಉತ್ತರ ಇಲ್ಲ. ಹೀಗಾಗಿ ಸಾರಿಗೆ ನಿಗಮಗಳು ಆರ್ಥಿಕವಾಗಿ ಸೊರಗುತ್ತಿವೆ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಮರು ಪಾವತಿಸಬೇಕಾದ ಭಾರೀ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಾರಿಗೆ ನಿಗಮ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ.

ರಾಜ್ಯ ಸರ್ಕಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಗೆ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 298 ರೂ. ಹಣ ನೀಡಬೇಕಿದೆ. ಸದ್ಯ ಆ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.
ಹಣ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿ ನಿಗಮ
ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಸೇವೆ ನೀಡುತ್ತಿರುವ ಸಾರ್ವಜನಿಕ ಸಾರಿಗೆ ತರ್ತು ಹಣದ ಅಗತ್ಯತೆ ಇದೆ. ಮೊದಲೇ ಈ ಭಾಗದಲ್ಲಿ ಅಭಿವೃದ್ಧಿ ಗೌಣವಾಗಿದೆ. ಬಸ್‌ಗಳನ್ನು ಬೇರೆಡೆ ಬಳಸಿದ ಹಳೇಯ ಬಸ್‌ಗಳನ್ನು ಈ ಭಾಗಕ್ಕೆ ನೀಡುತ್ತಾರೆ ಎಂಬ ಮಾತು ಹಿಂದಿನಿಂದಲೇ ಹೇಳಲಾಗುತ್ತಿದೆ. ಈ ಮಧ್ಯೆ ಹಣ ಬಾಕಿ ಉಳಿಸಿಕೊಳ್ಳುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದ್ಭವವಾಗಿದೆ.
ಶಕ್ತಿ ಯೋಜನೆ 2023ರ ಜೂನ್ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. ಅಂದಿನಿಂದ ಇಲ್ಲಿಯವರೆಗೆ ಯಾವುದೇ ತಿಂಗಳು ಸಹ ರಾಜ್ಯ ಸರ್ಕಾರ ಪೂರ್ಣ ಮೊತ್ತವನ್ನು ಮರು ಪಾವತಿ ಮಾಡಿಲ್ಲ. ಇದರ ಪರಿಣಾಮವಾಗಿ ಬಾಕಿ 300 ಕೋಟಿ ರೂ. ಸಮೀಪ ಬಂದು ಮುಟ್ಟಿದೆ.

ಟಿಕೆಟ್ ವಿತರಣೆ, ವೆಚ್ಚ, ಬಾಕಿ ಮೊತ್ತ
ಯೋಜನೆ ಆರಂಭದಿಂದ ಈ ವರ್ಷದ ಏಪ್ರಿಲ್ ಅಂತ್ಯದವರೆಗೆ ಮಹಿಳೆಯರಿಗೆ 46,42,11,425 ಶೂನ್ಯ ಟಿಕೆಟ್ ವಿತರಿಸಲಾಗಿದೆ. ಇದರ ಒಟ್ಟು ಪ್ರಯಾಣ ವೆಚ್ಚ 1193,86,33,524 ರೂ. ಗಳಾಗಿವೆ. ಇದರಲ್ಲಿ ರಾಜ್ಯ ಸರ್ಕಾರ, NWKRTC ನಿಗಮಕ್ಕೆ 894,90,52,000 ರೂ. ಪಾವತಿ ಆಗಿದೆ.
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, NWKRTC ಸಂಸ್ಥೆಗೆ ಮರು ಪಾವತಿಯಲ್ಲಿ ಪ್ರತಿ ತಿಂಗಳು 15ರಿಂದ 40 ಕೋಟಿ ರೂ. ವರೆಗೆ ಬಾಕಿ ಉಳಿಸಿಕೊಳ್ಳುತ್ತಾ ಬಂದಿದೆ. ಆದರೆ, ಮಾರ್ಚ್ ತಿಂಗಳಲ್ಲಿ ಶೂನ್ಯ ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಹಣ ಮರು ಪಾವತಿ ಮಾಡಿರುವುದು ವಿಶೇಷ. ಎರಡು ಕಂತುಗಳಲ್ಲಿ 157.36 ಕೋಟಿ ರೂ. ಪಾವತಿಸಿತ್ತು.
ಮರುಪಾವತಿ ಮೊತ್ತ ಪ್ರತಿ ತಿಂಗಳು ಏರಿಕೆ
ಇತ್ತೀಚಿನ ತಿಂಗಳಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಏಪ್ರಿಲ್ ತಿಂಗಳು ಹೊರತುಪಡಿಸಿದರೆ ಶೂನ್ಯ ಟಿಕೆಟ್ ಮೊತ್ತದಲ್ಲೂ ಗಮನಾರ್ಹ ಏರಿಕೆ ಏನೂ ಆಗಿಲ್ಲ. ಸಮಾಧಾನಕರ ಸಂಗತಿಯೆಂದರೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳ ಮರು ಪಾವತಿ ಮೊತ್ತ ಏರಿಕೆ ಆಗುತ್ತಿದೆ.
ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ 102.68 ಕೋಟಿ ರೂ. ಪಾವತಿಸಿದೆ. ಮೇ ತಿಂಗಳು ಮುಗಿಯುವ ಮೊದಲೇ 102.68 ಕೋಟಿ ರೂ. ಪಾವತಿಸಿರುವುದು ಗಮನಾರ್ಹ ಅಂಶವಾಗಿದೆ. NWKRTC ಸಂಸ್ಥೆಯು ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿದೆ.
ರೂ.895 ಕೋಟಿ ಪಾವತಿ, 298 ಕೋಟಿ ಬಾಕಿ
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, ಸಂಸ್ಥೆಗೆ ಇಲ್ಲಿಯವರೆಗೆ 895 ಕೋಟಿ ರೂ. ಮರು ಪಾವತಿ ಮಾಡಿದೆ. 298 ಕೋಟಿ ರೂ. ಬಾಕಿ ಬರಬೇಕಿದೆ. ಪ್ರತಿ ತಿಂಗಳು ಸರ್ಕಾರದಿಂದ ಬರಬೇಕಾದ ಮರು ಪಾವತಿ ಮೊತ್ತ ಹಾಗೂ ಬಾಕಿ ಮೊತ್ತದ ಬಗ್ಗೆ ವರದಿ ಸಲ್ಲಿಸಲಾಗುತ್ತದೆ ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಯ ವಿವರ (ಕೋಟಿ ರೂ.ನಲ್ಲಿ)
ತಿಂಗಳು ಶೂನ್ಯ ಟಿಕೆಟ್ ಮೊತ್ತ ಬಾಕಿ ಹಣ
ಜೂನ್-23 65.15 50.88 14.26
ಜುಲೈ-23 111.78 76.51 35.26
ಆಗಸ್ಟ್-23 115.42 73.63 41.79
ಸೆಪ್ಟೆಂಬರ್-23 112.79 70.05 42.73
ಅಕ್ಟೋಬರ್-23 116.06 74.35 41.70
ನವೆಂಬರ್-23 110.05 72.01 38.03
ಡಿಸೆಂಬರ್-23 118.08 72.01 46.06
ಜನವರಿ-24 112.68 72.09 40.58
ಫೆಬ್ರುವರಿ-24 107.27 73.27 33.99
ಮಾರ್ಚ್-24 106.82 157.36 50.54+
ಏಪ್ರಿಲ್-24 117.73 102.68 15.05
ಒಟ್ಟು 1193.86 894.90 298.96












Click it and Unblock the Notifications